ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶ ಕ್ರಿಕೆಟ್‌ ಅನ್ನು ಉಳಿಸಿ ಎಂದು ಆಗ್ರಹಿಸಿದ ನಜ್ಮುಲ್‌ ಹುಸೇನ್‌ ಶಾಂತೊ!

ಪ್ರಸ್ತುತ ಬಾಂಗ್ಲಾದೇಶ ಕ್ರಿಕೆಟ್‌ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಇದರ ನಡುವೆ ಬಾಂಗ್ಲಾದೇಶ ತಂಡದ ಮಾಜಿ ನಾಯಕ ನಜ್ಮುಲ್‌ ಹುಸೇನ್‌ ಶಾಂತೊ ಅವರು ಕ್ರಿಕೆಟ್‌ ಅನ್ನು ಉಳಿಸಿ ಎಂದು ಸಾರ್ವಜನಿಕವಾಗಿ ತಮ್ಮ ಬಾಂಗ್ಲಾ ಕ್ರಿಕೆಟ್‌ ಮಂಡಳಿಗೆ ಆಗ್ರಹಿಸಿದ್ದಾರೆ.

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ ನಜ್ಮುಲ್‌ ಹುಸೇನ್‌ ಶಾಂತೋ ಮನವಿ.

ನವದೆಹಲಿ: ಫೆಬ್ರವರಿ 7 ರಂದು ಆರಂಭವಾಗಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಭಾಗವಹಿಸುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಇದರ ನಡುವೆ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಮಾಜಿ ನಾಯಕ ನಜ್ಮುಲ್‌ ಹುಸೇನ್‌ ಶಾಂತೊ (Najmul Hossain Shanto) ಅವರು ತಮ್ಮ ದೇಶದಲ್ಲಿ ಕ್ರಿಕೆಟ್‌ ಅನ್ನು ಉಳಿಸಿಬೇಕೆಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯನ್ನು (BCB) ಆಗ್ರಹಿಸಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ನಲ್ಲಿ ನಜ್ಮುಲ್‌ ಹುಸೇನ್‌ ಶಾಂತೊ ನಾಯಕತ್ವದ ರಾಜಶಾಹಿ ವಾರಿಯರ್ಸ್‌ ತಂಡ, ಚಟ್ಟೋಗ್ರಾಮ್‌ ರಾಯಲ್ಸ್‌ ತಂಡವನ್ನು 63 ರನ್‌ಗಳಿಂದ ಮಣಿಸಿತು ಹಾಗೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಪಂದ್ಯದ ಬಳಿಕ ಅವರು ಈ ಮಾತನ್ನು ಹೇಳಿದ್ದಾರೆ.

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸದ ಹೊರತು ನಾವು ಭಾಗವಹಿಸುವುದಿಲ್ಲ ಎಂಬ ದೃಢ ನಿಲುವನ್ನು ಬಾಂಗ್ಲಾದೇಶ ಸರ್ಕಾರ ಮತ್ತು ಬಿಸಿಬಿ ಅನುಸರಿಸುವ ಮೂಲಕ ಈ ಪರಿಸ್ಥಿತಿ ಉಂಟಾಗಿದೆ. ಶಾಂತೊ ಅವರ ಹೇಳಿಕೆಗಳು ಕ್ರಿಕೆಟ್ ಸಮುದಾಯದೊಳಗಿನ ವ್ಯಾಪಕ ಕಳವಳಗಳನ್ನು ಪ್ರತಿಬಿಂಬಿಸುತ್ತವೆ. ಮೈದಾನದ ಹೊರಗೆ ವಿವಾದಗಳು ಕ್ರೀಡೆಯ ದೇಶಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದಿದ್ದಾರೆ. ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತದಲ್ಲಿ ನಿಗದಿಯಾಗಿರುವ ಟೂರ್ನಿಯಲ್ಲಿ ಬಾಂಗ್ಲಾದೇಶಕ್ಕೆ ಬದಲಿ ಸ್ಥಳಗಳನ್ನು ಇನ್ನೂ ದೃಢಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಬಿ ಐಸಿಸಿ ನಿಲುವಿಗಾಗಿ ಕಾಯುತ್ತಿದೆ.

ʻವಿವಾದ ಪರಿಹಾರ ಸಮಿತಿಗೆ ಆಗ್ರಹʼ: ಐಸಿಸಿಗೆ ಮತ್ತೊಂದು ಪತ್ರ ಬರೆದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ!

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಜ್ಮುಲ್‌ ಹುಸೇನ್‌ ಶಾಂತೊ, "ಒಬ್ಬ ಆಟಗಾರನಾಗಿ ಹೇಳುವುದಾದರೆ ಕಳೆದ ಒಂದು ಅಥವಾ ಎರಡು ವರ್ಷಗಳಿಂದ ಹೊರಗಡೆಯ ಸಂಗತಿಗಳು ಕ್ರಿಕೆಟ್‌ ಮೇಲೆ ಗಂಭೀರ ಪರಿಣಾಮ ಬೀರಿದೆ. ಜವಾಬ್ದಾರಿಯುತ ಸ್ಥಾನಗಳಲ್ಲಿರುವವರಿಗೆ ನಾನು ಒಂದು ವಿನಂತಿಯನ್ನು ಮಾಡಲು ಬಯಸುತ್ತೇನೆ: ಎಲ್ಲರೂ ಒಟ್ಟಾಗಿ ಸೇರಿ, ತಿಳುವಳಿಕೆಯನ್ನು ತಲುಪುವುದು ಮತ್ತು ಕ್ರಿಕೆಟ್ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ," ಎಂದಿದ್ದಾರೆ.

"ಕ್ರಿಕೆಟ್‌ ಇನ್ನೂ ನಡೆಯುತ್ತಿರಬಹುದು, ಆದರೆ ಅದನ್ನು ಉತ್ತಮ ಮತ್ತು ಹೆಚ್ಚು ಸಂಘಟಿತ ರೀತಿಯಲ್ಲಿ ಹೇಗೆ ನಡೆಸಬಹುದು ಎಂಬುದರ ಕುರಿತು ಯೋಚಿಸುವುದು ಬಹಳ ಮುಖ್ಯ. ಈ ಸಮಯದಲ್ಲಿ, ಮುಂದೆ ಏನಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಅನಿಶ್ಚಿತತೆಯಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಪಾತ್ರಗಳಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದಾರೆ ಮತ್ತು ಮೈದಾನದಲ್ಲಿ ನಿಯಮಿತವಾಗಿ ಕ್ರಿಕೆಟ್ ಆಡುವುದು ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ," ಎಂದು ಸಲಹೆ ನೀಡಿದ್ದಾರೆ.

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಬಾಂಗ್ಲಾದೇಶ ಔಟ್‌? ಬಾಂಗ್ಲಾ ಸ್ಥಾನಕ್ಕೆ ಸ್ಕಾಟ್ಲೆಂಡ್!

ದೇಶಿ ಕ್ರಿಕೆಟ್‌ ನಿರ್ವಹಣೆ ಸುಧಾರಿಸಬೇಕೆಂದ ಶಾಂತೊ

"ಢಾಕಾದಲ್ಲಿ ಕ್ರಿಕೆಟ್ ಬಗ್ಗೆಯೂ ಸಾಕಷ್ಟು ಟೀಕೆಗಳಿವೆ. ಈ ಬಾರಿ ಹಿಂದಿನ ಆವೃತ್ತಿಗಳಿಗಿಂತ ಉತ್ತಮವಾಗಿ ಮತ್ತು ಹೆಚ್ಚು ಸುಗಮವಾಗಿ ಆಯೋಜಿಸಬೇಕೆಂದು ನಾನು ವಿನಂತಿಸುತ್ತೇನೆ. ನಾವು ವಿಶ್ವಕಪ್‌ ಟೂರ್ನಿಗೆ ಹೋಗದಿದ್ದರೆ, ಮಂಡಳಿಗೆ ನನ್ನ ಮನವಿಯೆಂದರೆ ನಮಗಾಗಿ ಇನ್ನೂ ಉತ್ತಮ ಮತ್ತು ಉತ್ತಮವಾಗಿ ನಡೆಯುವ ಟೂರ್ನಿಯನ್ನು ವ್ಯವಸ್ಥೆ ಮಾಡುವುದು, ಇದರಿಂದ ಎಲ್ಲರಿಗೂ ಆಡಲು ಅವಕಾಶ ಸಿಗುತ್ತದೆ," ಎಂದು ಹೇಳಿದ್ದಾರೆ.

ಮೈದಾನದೊಳಗಿನ ಮತ್ತು ಮೈದಾನದ ಹೊರಗಿನ ವಿಷಯಗಳನ್ನು ಬೇರ್ಪಡಿಸುವ ಮಹತ್ವವನ್ನು ಅವರು ಮತ್ತಷ್ಟು ಎತ್ತಿ ಹೇಳಿದರು. ಗಡಿಯನ್ನು ಮೀರಿದ ಬಗೆಹರಿಯದ ಸಮಸ್ಯೆಗಳು ಬಾಂಗ್ಲಾದೇಶ ಕ್ರಿಕೆಟ್‌ನ ಬೆಳವಣಿಗೆ, ಸ್ಪರ್ಧಾತ್ಮಕತೆ ಮತ್ತು ನಡೆಯುತ್ತಿರುವ ಪ್ರಗತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದರು. "ಮೈದಾನದಲ್ಲಿ ಕ್ರಿಕೆಟ್ ಸರಿಯಾಗಿ ಮತ್ತು ಅಡೆತಡೆಯಿಲ್ಲದೆ ಮುಂದುವರಿಯಲು ಮೈದಾನದ ಹೊರಗಿನ ಸಮಸ್ಯೆಗಳನ್ನು ಬಗೆಹರಿಸಬೇಕು," ಎಂದು ನಜ್ಮುಲ್‌ ಆಗ್ರಹಿಸಿದ್ದಾರೆ.