ಕ್ರಿಕೆಟ್ ವೃತ್ತಿ ಜೀವನಕ್ಕೆ ಎಂಎಸ್ ಧೋನಿ ವಿಲನ್?: ವದಂತಿಗಳ ಬಗ್ಗೆ ಅಮಿತ್ ಮಿಶ್ರಾ ಸ್ಪಷ್ಟನೆ!
ಭಾರತ ತಂಡದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ತಮ್ಮ ವೃತ್ತಿ ಜೀವನದಲ್ಲಿ ಎಂಎಸ್ ಧೋನಿ ಬೀರಿದ ಪ್ರಭಾವದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಂಎಸ್ ಧೋನಿ ಇಲ್ಲವಾಗಿದ್ದರೆ, ಅಮಿತ್ ಮಿಶ್ರಾ ಅವರ ವೃತ್ತಿ ಜೀವನ ಸಂಪೂರ್ಣ ವಿಭಿನ್ನವಾಗಿರುತ್ತಿತ್ತು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಮಿತ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.
ಎಂಎಸ್ ಧೋನಿ ಬಗ್ಗೆ ಅಮಿತ್ ಮಿಶ್ರಾ ಹೇಳಿಕೆ. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಲ್ಲಿ ಅಮಿತ್ ಮಿಶ್ರಾ (Amit Mishra) ಕೂಡ ಒಬ್ಬರು. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಇಲ್ಲದೆ ಇದ್ದಿದ್ದರೆ ಅಮಿತ್ ಮಿಶ್ರಾ ಅವರ ವೃತ್ತಿ ಸಂಪೂರ್ಣ ವಿಭಿನ್ನವಾಗಿರುತ್ತಿತ್ತು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಪ್ರತಿಕ್ರಿಯಿಸಿದ್ದು, ನಾನು ಸಕಾರಾತ್ಮಕ ಸಂಗತಿಗಳನ್ನು ಮಾತ್ರ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. 2023ರಲ್ಲಿ ಅಮಿತ್ ಮಿಶ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ (IND vs SA) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ 2025ರಲ್ಲಿ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಅಮಿತ್ ಮಿಶ್ರಾ ತಮ್ಮ ವೃತ್ತಿ ಜೀವನದಲ್ಲಿ ಆಡಿದ 22 ಟೆಸ್ಟ್, 36 ಒಡಿಐ ಹಾಗೂ 10 ಟಿ20 ಐ ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಪರ ಕೊನೆಯ ಟಿ20ಐ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ 23 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು. 2017ರಲ್ಲಿ ಯುಜ್ವೇಂದ್ರ ಚಹಲ್ ಭಾರತ ತಂಡಕ್ಕೆ ಬಂದ ಬಳಿಕ ಅಮಿತ್ ಮಿಶ್ರಾಗೆ ತಂಡದಲ್ಲಿ ಅವಕಾಶಗಳು ಕಡಿಮೆಯಾದವು. ಎಂಎಸ್ ಧೋನಿ ನಾಯಕನಾಗಿ ತಮ್ಮ ವೃತ್ತಿ ಜೇವನದಲ್ಲಿ ಹೇಗೆ ಪ್ರಭಾವ ಬೀರಿದ್ದಾರೆಂದು ಅಮಿತ್ ಮಿಶ್ರಾ ವಿವರಿಸಿದ್ದಾರೆ. ಎಂಎಸ್ ಧೋನಿ ಇಲ್ಲದೇ ಇದ್ದಿದ್ದರೆ ನನ್ನ ವೃತ್ತಿ ಜೀವನ ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ಹಲವರು ಹೇಳಿದ್ದಾರೆ, ಆದರೆ, ಅವರಿಲ್ಲದೇ ಇದ್ದಿದ್ದರೆ ನಾನು ಭಾರತ ತಂಡಕ್ಕೆ ಪ್ರವೇಶ ಮಾಡುತ್ತಿರಲಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.
ʻಅವರ ವರ್ತನೆ ಗೌರವಯುತವಾಗಿ ಇರಲಿಲ್ಲʼ: ಭಾರತ ಅಂಡರ್-19 ತಂಡವನ್ನು ಟೀಕಿಸಿದ ಸರ್ಫರಾಝ್ ಅಹ್ಮದ್!
ಮೆನ್‌ಎಕ್ಸ್‌ಪಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅಮಿತ್ ಮಿಶ್ರಾ, "ಎಂಎಸ್ ಧೋನಿ ಇಲ್ಲದೇ ಹೋಗಿದ್ದರೆ, ನನ್ನ ವೃತ್ತಿ ಜೀವನ ಇನ್ನಷ್ಟು ಉತ್ತಮವಾಗಿರುತ್ತಿತ್ತು ಎಂದು ಜನರು ಹೇಳುತ್ತಾರೆ. ಆದರೆ, ಅವರು ಇಲ್ಲದೇ ಹೋಗಿದ್ದರೆ ನಾನು ಭಾರತ ತಂಡದಲ್ಲಿ ಇರುತ್ತಿರಲ್ಲವೆಂದು ಯಾರಿಗೆ ಗೊತ್ತು. ಅವರು ನಾಯಕತ್ವದ ಅಡಿಯಲ್ಲಿಯೇ ನಾನು ಭಾರತ ತಂಡಕ್ಕೆ ಬಂದಿದ್ದು ಹಾಗೂ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದೆ. ಅವರು ನಾಯಕನಾಗಿ ಒಪ್ಪಿಕೊಳ್ಳುತ್ತಿದ್ದರು, ಈ ಕಾರಣಕ್ಕೆ ನಾನು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದೆ. ಸಂಗತಿಗಳನ್ನು ನೋಡಲು ಸಕಾರಾತ್ಮಕ ಹಾದಿಗಳಿವೆ," ಎಂದು ಹೇಳಿದ್ದಾರೆ.
ಎಂಎಸ್ ಧೋನಿಯ ಸಹಾಯ ನೆನೆದ ಅಮಿತ್ ಮಿಶ್ರಾ
2016ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಲು ಎಂಎಸ್ ಧೋನಿ ಸಹಾಯ ಮಾಡಿದ್ದರು ಎಂಬ ಅಂಶವನ್ನು ಇದೀಗ ಮಾಜಿ ಲೆಗ್ ಸ್ಪಿನ್ನರ್ ಸ್ಮರಿಸಿಕೊಂಡಿದ್ದಾರೆ.
ʻಅವರ ವರ್ತನೆ ಗೌರವಯುತವಾಗಿ ಇರಲಿಲ್ಲʼ: ಭಾರತ ಅಂಡರ್-19 ತಂಡವನ್ನು ಟೀಕಿಸಿದ ಸರ್ಫರಾಝ್ ಅಹ್ಮದ್!
"ನನಗೆ ಬೆಂಬಲವಿತ್ತು. ನಾನು ತಂಡದ ಪ್ಲೇಯಿಂಗ್ XIನಲ್ಲಿ ಇದ್ದಾಗಲೆಲ್ಲಾ, ಧೋನಿ ನನ್ನ ಬಳಿಗೆ ಬಂದು ಸಲಹೆಗಳನ್ನು ನೀಡಲಿಲ್ಲ ಎಂದು ನನಗೆ ಅನಿಸುತ್ತಿರಲಿಲ್ಲ. ಅವರು ಯಾವಾಗಲೂ ನನಗೆ ವಿಷಯಗಳನ್ನು ಹೇಳುತ್ತಿದ್ದರು. ಒಮ್ಮೆ, ನಾನು ನ್ಯೂಜಿಲೆಂಡ್ ವಿರುದ್ಧ ಆಡುತ್ತಿದ್ದೆ, ಅದು ನನ್ನ ಕೊನೆಯ ಏಕದಿನ ಸರಣಿಯಾಗಿತ್ತು. ಅದು ಬಿಗಿಯಾದ ಪಂದ್ಯವಾಗಿತ್ತು. ನಾವು 260–270 ರನ್ ಗಳಿಸಿದ್ದೆವು. ನಾನು ಬೌಲ್ ಮಾಡಲು ಬಂದೆ ಮತ್ತು ರನ್‌ಗಳನ್ನು ನಿಲ್ಲಿಸುವ ಮತ್ತು ವಿಕೆಟ್‌ಗಳಿಗಾಗಿ ಹೋಗದಿರುವ ಬಗ್ಗೆ ಯೋಚಿಸಿದೆ, ”ಎಂದು ಅವರು ತಿಳಿಸಿದ್ದಾರೆ.