ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಆಫ್ಘನ್‌ ಎದುರು ಶತಕ ಸಿಡಿಸಿದರೂ ಭಾರತ ಏಕದಿನ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ಗೆ ಏಕೆ ಸ್ಥಾನವಿಲ್ಲ?

ಮುಂದಿನ ತಿಂಗಳು ಜುಲೈನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ, 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್‌ ಕೊಹ್ಲಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಆದರೆ, ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದರೂ ಯಶಸ್ವಿ ಜೈಸ್ವಾಲ್‌ ಅವರನ್ನು ಇಂಗ್ಲೆಂಡ್‌ ಪ್ರವಾಸದ ಏಕದಿನ ಸರಣಿಯ ಭಾರತ ತಂಡದಿಂದ ಕೈ ಬಿಡಲಾಗಿದೆ.

ಯಶಸ್ವಿ ಜೈಸ್ವಾಲ್‌ರನ್ನು ಒಡಿಐ ತಂಡದಿಂದ ಕೈ ಬಿಡಲು ಕಾರಣವೇನು?

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ವೈಟ್‌ ಬಾಲ್‌ ಸರಣಿಗಳು (IND vs AFG) ಮುಗಿದ ಬಳಿಕ ಭಾರತ ತಂಡ ಮುಂದಿನ ತಿಂಗಳು ಇಂಗ್ಲೆಂಡ್‌ ಪ್ರವಾಸವನ್ನು ಕೈಗೊಳ್ಳಲಿದೆ. ಇಲ್ಲಿ ಟಿ20ಐ ಸರಣಿಯ ಜೊತೆಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಟಿ20ಐ ಸರಣಿಗಳಿಗ ಈಗಾಗಲೇ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಆದೆರೆ, ಏಕದಿನ ಸರಣಿಗೆ ಇನ್ನೂ ಆಯ್ಕೆ ಮಾಡಲಾಗಿರಲಿಲ್ಲ.ಇದೀಗ ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು, ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ಭಾರತ ತಂಡವನ್ನು (India's ODI Squad) ಪ್ರಕಟಿಸಿದೆ. ಗಾಯದಿಂದ ಗುಣಮುಖರಾಗಿರುವ ವಿರಾಟ್‌ ಕೊಹ್ಲಿ ಅವರು ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ.

ವಿರಾಟ್‌ ಕೊಹ್ಲಿ ಅವರು ಗಾಯದ ಕಾರಣ ಅಫ್ಘನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಈ ಕಾರಣದಿಂದಾಗಿ ಅವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ ಅವರನ್ನು ಭಾರತ ಏಕದಿನ ತಂಡದಲ್ಲಿ ಸ್ಥಾನವನ್ನು ನೀಡಲಾಗಿತ್ತು. ಎರಡನೇ ಪಂದ್ಯದಲ್ಲಿ ಜೈಸ್ವಾಲ್‌ ವಿಫಲರಾದರೂ, ಮೂರನೇ ಏಕದಿನ ಪಂದ್ಯದಲ್ಲಿ 110 ರನ್‌ಗಳ ಭರ್ಜರಿ ಶತಕವನ್ನು ಬಾರಿಸಿದ್ದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಎರಡನೇ ಏಕದಿನ ಶತಕವನ್ನು ಬಾರಿಸಿದ್ದರು. ಆ ಮೂಲಕ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿತ್ತು.

IND vs ENG: ವಿರಾಟ್‌ ಕೊಹ್ಲಿ ಇನ್‌; ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ!

ಆದರೆ, ಶತಕ ಸಿಡಿಸಿದ ಕೇವಲ 48 ಗಂಟೆಗಳಲ್ಲಿಯೇ ಭಾರತ ಏಕದಿನ ತಂಡದಿಂದ ಯಶಸ್ವಿ ಜೈಸ್ವಾಲ್‌ ಅವರನ್ನು ಕೈ ಬಿಡಲಾಗಿದೆ. ವಿರಾಟ್‌ ಕೊಹ್ಲಿ ಗಾಯದಿಂದ ಗುಣಮುಖರಾಗಿದ್ದು, ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ. ಹಾಗಾಗಿ ಯಶಸ್ವಿ ಜೈಸ್ವಾಲ್‌ ಅವರು ತಮ್ಮ ಸ್ಥಾನವನ್ನು ವಿರಾಟ್‌ ಕೊಹ್ಲಿ ಬಿಟ್ಟುಕೊಟ್ಟಿದ್ದಾರೆ. ಇದರರ್ಥ ಜೈಸ್ವಾಲ್‌ ಅವರಿಗೆ ಸದ್ಯ ಭಾರತ ಏಕದಿನ ತಂಡದಲ್ಲಿ ಸ್ಥಾನವಿಲ್ಲ. ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ಅವರಿನ್ನೂ 2027ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಯೋಜನೆಯಲ್ಲಿದ್ದಾರೆ.

ಭಾರತದ ಟೆಸ್ಟ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರೂ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಶಾಶ್ವತ ಸ್ಥಾನ ಪಡೆಯಲು ಯಶಸ್ವಿ ಜೈಸ್ವಾಲ್‌ ಇನ್ನೂ ಹೋರಾಟ ನಡೆಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗದಿರುವುದು ಯುವ ಆರಂಭಿಕ ಬ್ಯಾಟರ್‌ಗೆ ನಿರಾಸೆ ಮೂಡಿಸಿರುವ ಮತ್ತೊಂದು ಉದಾಹರಣೆಯಾಗಿದೆ.



ಈ ವರ್ಷದ ಆರಂಭದಲ್ಲಿ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದ ಭಾರತದ ತಂಡದಲ್ಲಿಯೂ ಜೈಸ್ವಾಲ್ ಸ್ಥಾನ ಪಡೆಯಲು ವಿಫಲರಾಗಿದ್ದರು. ಕೇವಲ ಆರು ಏಕದಿನ ಪಂದ್ಯಗಳನ್ನು ಆಡಿದ್ದರೂ, ಜೈಸ್ವಾಲ್ ಈಗಾಗಲೇ 71.25ರ ಅತ್ಯುತ್ತಮ ಸರಾಸರಿಯಲ್ಲಿ 285 ರನ್‌ಗಳನ್ನು ಗಳಿಸಿದ್ದಾರೆ. ಅವರ ಖಾತೆಯಲ್ಲಿ ಎರಡು ಶತಕಗಳೂ ಇದ್ದು, ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಆದಾಗ್ಯೂ, ಅನುಭವಿ ಆಟಗಾರರ ಮರಳುವಿಕೆ ಹಾಗೂ ಮುಂಬರುವ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಿರತೆಯ ಮೇಲೆ ಆಯ್ಕೆದಾರರು ಹೆಚ್ಚು ಒತ್ತು ನೀಡಿರುವ ಹಿನ್ನೆಲೆಯಲ್ಲಿ, ಜೈಸ್ವಾಲ್ ಮತ್ತೊಂದು ಅವಕಾಶಕ್ಕಾಗಿ ಇನ್ನೂ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

IND vs AFG: ಎರಡನೇ ಒಡಿಐ ಶತಕ ಸಿಡಿಸಿ ವಿರಾಟ್‌ ಕೊಹ್ಲಿ ಮೇಲೆ ಒತ್ತಡ ಹಾಕಿದ ಯಶಸ್ವಿ ಜೈಸ್ವಾಲ್‌!

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯ ಭಾರತ ತಂಡ: ಶುಭಮನ್‌ ಗಿಲ್‌( ನಾಯಕ), ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ (ಫಿಟೆನೆಸ್‌ ಟೆಸ್ಟ್‌ ಪಾಸ್‌ ಮಾಡಬೇಕಾದ ಅಗತ್ಯ), ಶ್ರೇಯಸ್‌ ಅಯ್ಯರ್‌ (ಉಪ ನಾಯಕ), ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ನಿತೀಶ್‌ ಕುಮಾರ್‌ ರೆಡ್ಡಿ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಪ್ರಸಿಧ್‌ ಕೃಷ್ಣ, ಹರ್ಷಿತ್‌ ರಾಣಾ, ಅರ್ಷದೀಪ್‌ ಸಿಂಗ್‌, ಗುರ್ನೂರ್‌ ಬ್ರಾರ್‌