ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನಸೀಮ್ ಶಾ (Naseem Shah) ಅವರ ಮನೆಯ ಮೇಲೆ ಗುಂಡಿನ (Naseem Shah house firing) ದಾಳಿ ನಡೆದಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬೆಚ್ಚಿಬಿದ್ದಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಲೋವರ್ ದಿರ್‌ನ ಮಾಯರ್ ಪ್ರದೇಶದ ವೇಗದ ಬೌಲರ್ ಮನೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯವಾಗಿ, ಗುಂಡಿನ ದಾಳಿ ನಡೆದ ಸಮಯದಲ್ಲಿ ನಸೀಮ್ ಶಾ ಅವರ ಕುಟುಂಬ ಮನೆಯಲ್ಲಿತ್ತು. ನಸೀಮ್ ಅವರ ಕಿರಿಯ ಸಹೋದರರಾದ ಹುನೈನ್ ಶಾ ಮತ್ತು ಉಬೈದ್ ಶಾ ಮನೆಯಲ್ಲಿದ್ದಾರಾ? ಅಥವಾ ಇಲ್ಲವಾ? ಎಂಬುದು ಇನ್ನೂ ತಿಳಿದುಬಂದಿಲ್ಲ.
ಸೋಮವಾರ (ನವೆಂಬರ್ 11) ಮುಂಜಾನೆ ಕ್ರಿಕೆಟಿಗ ನಸೀಮ್ ಶಾ ಅವರ ಮನೆಯ ಮೇಲೆ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಮತ್ತು ನೆರೆಹೊರೆಯವರು ವರದಿ ಮಾಡಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆ ಬೆಳಗಿನ ಜಾವ 1:45ರ ಸುಮಾರಿಗೆ ನಡೆದಿದ್ದು, ದಾಳಿಕೋರರು ಮುಖ್ಯ ದ್ವಾರದಲ್ಲಿ ಹಲವು ಬಾರಿ ಗುಂಡುಗಳನ್ನು ಹಾರಿಸಿದ್ದು, ಮನೆಯಲ್ಲಿ ಗುಂಡುಗಳು ಬಿದ್ದಿವೆ. ಗುಂಡು ಹಾರಿಸಿದ ತಕ್ಷಣ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಈ ಪ್ರಕರಣ ಸಂಬಂಧ ಐವರನ್ನು ಬಂಧಿಸಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಲೋವರ್ ದಿರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹತ್ತಿರದ ಮನೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕ್ರಿಕೆಟಿಗನ ಮನೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಈ ಘಟನೆ ಭಯೋತ್ಪಾದನೆಗೆ ಸಂಬಂಧಿಸಿಲ್ಲ, ಬದಲಿಗೆ ಭೂ ವಿವಾದ ಅಥವಾ ಪ್ರಾದೇಶಿಕ ಪೈಪೋಟಿಯ ಪರಿಣಾಮವಾಗಿರಬಹುದು ಎಂದು ಲೋವರ್ ದಿರ್ ಪೊಲೀಸರು ತಿಳಿಸಿದ್ದಾರೆ.
ನಜೀಮ್ ಶಾ ಅವರ ತಂದೆ, ಲೋವರ್ ದಿರ್ ಜಿಲ್ಲಾ ಪೊಲೀಸ್ ಅಧಿಕಾರಿ ತೈಮೂರ್ ಖಾನ್ ಅವರನ್ನು ಭೇಟಿಯಾದರು ಹಾಗೂ ಈ ಕೃತ್ಯ ಎಸೆಗಿದವರನ್ನು ಶೀಘ್ರ ಬಂಧಿಸುವಂತೆ ಮನವಿ ಮಾಡಿದರು.ಅದರಂತೆ ಪೊಲೀಸ್ ಅಧಿಕಾರಿಯು ಕೂಡ ಇದಕ್ಕೆ ಒಮ್ಮತ ಸೂಚಿಸಿ, ಬಂಧಿಸುವ ಬಗ್ಗೆ ಭರವಸೆ ನೀಡಿದರು. ಸ್ಥಳೀಯ ನಿವಾಸಿಗಳು ನಸೀಮ್ ಶಾ ಅವರ ಕುಟುಂಬವು ಗೌರವಾನ್ವಿತ ಹಿನ್ನೆಲೆಯಿಂದ ಬಂದಿದೆ ಮತ್ತು ಯಾರೊಂದಿಗೂ ದ್ವೇಷ ಅಥವಾ ವಿವಾದಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
IND vs SA Test: ಗಿಲ್, ಬುಮ್ರಾ ಸೇರಿದಂತೆ ನಾಲ್ವರು ಆಟಗಾರರು ಇಂದು ಕೋಲ್ಕತ್ತಾಗೆ ಆಗಮನ
ನಸೀಮ್ ಶಾ ಅವರ ಇಬ್ಬರು ಸಹೋದರರಾದ ಹುನೈನ್ ಶಾ ಮತ್ತು ಉಬೈದ್ ಶಾ ಕೂಡ ಕ್ರಿಕೆಟಿಗರು. 2024ರ ಪಾಕಿಸ್ತಾನ ಸೂಪರ್ ಲಿಘ್‌ನ ಫೈನಲ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಹುನೈನ್ ಶಾ ಗೆಲುವಿನ ರನ್ ಗಳಿಸಿದರು. ಇತ್ತೀಚಿನ ಕ್ವಾಯ್ದ್-ಎ-ಅಜಮ್ ಟ್ರೋಫಿಯಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡಿದರು. ಮತ್ತೊಂದೆಡೆ, ಉಬೈದ್ ಶಾ ಪಿಎಸ್ಎಲ್‌ನಲ್ಲಿ ಮುಲ್ತಾನ್ ಸುಲ್ತಾನ್ಸ್ ಪರ ಆಡುತ್ತಾರೆ.