ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಪೂರ್ ಝರ್ದಾನ್ (Shapoor Zadran) ಅವರು ಜುಲೈ 7 ರಂದು ಮಂಗಳವಾರ ದೀರ್ಘಕಾಲದ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಅವರು ತಮ್ಮ ಕೇವಲ 38ನೇ ವಯಸ್ಸಿನಲ್ಲಿ ನದೆಹಲಿಯ ಆಸ್ಪತ್ರೆಯೊಂದರ ಐಸಿಯುನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಸುದ್ದಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಿಳಿಸಿದೆ. ಆಫ್ಘನ್ ಮಾಜಿ ವೇಗಿಯ ನಿಧನಕಕ್ಕೆ ಕ್ರಿಕೆಟ್ ಜಗತ್ತು ಸಂತಾಪ ಸೂಚಿಸಿದೆ.
ಶಪೂರ್ ಝದ್ರಾನ್ ಅವರು ಕಳೆದ ಜನವರಿಯಿಂದ ನವದೆಹಲಿಯ ಆಸ್ಪತ್ರೆಯೊಂದರಲ್ಲಿ ತೀವ್ರ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿದ್ದ ವೇಳೆ ಅವರು ಮೊದಲ ಬಾರಿ ಅಸ್ವಸ್ಥಗೊಂಡ ಬಳಿಕ, ಅವರ ಸಹೋದರ ಘಮೈ ಝದ್ರಾನ್ ಹಾಗೂ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಅವರು ಚಿಕಿತ್ಸೆಗೆಂದು ಅವರನ್ನು ಭಾರತಕ್ಕೆ ಕರೆತಂದಿದ್ದರು. 'ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್' (HLH) ಎಂದು ಕರೆಯಲ್ಪಡುವ ಅಪರೂಪದ ಮತ್ತು ಮಾರಣಾಂತಿಕ ರೋಗದಿಂದ ಅವರು ಹೋರಾಡುತ್ತಿದ್ದರು ಎಂದು ವರದಿಗಳು ಸೂಚಿಸುತ್ತವೆ.
IND vs ZIM: ʻಸಂಜು ಸ್ಯಾಮ್ಸನ್‌ಗೆ ಅನ್ಯಾಯʼ-ಬಿಸಿಸಿಐ ವಿರುದ್ದ ಮಾಜಿ ಕ್ರಿಕೆಟಿಗರು ಕಿಡಿ!
"ತೀವ್ರ ದುಃಖ ಹಾಗೂ ಭಾರವಾದ ಹೃದಯದೊಂದಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ತಮ್ಮ ಮಾಜಿ ವೇಗದ ಬೌಲರ್ ಶಪೂರ್ ಝದ್ರಾನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ," ಎಂದು ಎಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
"ಅಫ್ಘಾನಿಸ್ತಾನ ಕ್ರಿಕೆಟ್‌ನ ಭದ್ರ ಅಡಿಪಾಯ ಹಾಕಿದ ಪ್ರಮುಖ ವ್ಯಕ್ತಿಗಳಲ್ಲಿ ಶಪೂರ್ ಝದ್ರಾನ್ ಕೂಡ ಒಬ್ಬರಾಗಿದ್ದರು. ಅವರ ಸಮರ್ಪಣೆ, ಕ್ರಿಕೆಟ್ ಮೇಲಿನ ಅಪಾರ ಅಭಿರುಚಿ ಹಾಗೂ ಅಚಲ ಬದ್ಧತೆ ನಮ್ಮ ದೇಶದಲ್ಲಿ ಕ್ರಿಕೆಟ್‌ನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿತು. ಅಫ್ಘಾನಿಸ್ತಾನದ ಆರಂಭಿಕ ಕ್ರಿಕೆಟ್ ಪಯಣದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಷ್ಟೇ ಅಲ್ಲ, ಆಫ್ಘನ್ ಕ್ರಿಕೆಟ್ ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾದಿಯನ್ನು ನಿರ್ಮಿಸುವಲ್ಲಿಯೂ ಅಮೂಲ್ಯ ಪಾತ್ರ ವಹಿಸಿದ್ದರು," ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಾರಕ ಕಾಯಿಲೆ ವಿರುದ್ಧ ಸೋತ ಶಪೂರ್
ಶಪೂರ್ ಝದ್ರಾನ್ ಹಲವು ತಿಂಗಳುಗಳಿಂದ ಎಎಚ್‌ಎಲ್‌ಎಸ್ ಎಂದು ಕರೆಯಲ್ಪಡುವ ಗಂಭೀರ ಆರೋಗ್ಯದೊಂದಿಗೆ ಹೋರಾಟ ನಡೆಸುತ್ತಿದ್ದರು. ಅವರ ಕಿರಿಯ ಸಹೋದರ ಘಮೈ ಝದ್ರಾನ್ ಅವರ ಹೇಳಿಕೆಯಂತೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ತರುವಾಯ, ಅಫ್ಘಾನಿಸ್ತಾನದ ವೈದ್ಯರು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಪ್ರಯಾಣಿಸಲು ಸಲಹೆ ನೀಡಿದರು. ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಮ್ಮ ಮಾಜಿ ತಂಡದ ಆಟಗಾರನನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಝದ್ರಾನ್ ಅವರ ಸಾವಿನ ಸುದ್ದಿ ಕ್ರಿಕೆಟ್ ಜಗತ್ತಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ; ಅವರು ಕೇವಲ 38 ನೇ ವಯಸ್ಸಿನಲ್ಲಿ ನಿಧನರಾಗಿರುವುದು ಶಾಕಿಂಗ್ ಸಂಗತಿ.
IND vs ENG: ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಸ್ಥಾನಕ್ಕೆ ಭಾರತ ಒಡಿಐ ತಂಡ ಸೇರಿದ ಶಿವ ದುಬೇ!
ಭಾರತದ ವಿರುದ್ಧ ಝದ್ರಾನ್ ಸಾಧನೆ
ಶಪೂರ್ ಝದ್ರಾನ್ ಅಫ್ಘಾನಿಸ್ತಾನದ ಅತ್ಯಂತ ಅಪರೂಪದ ಆಟಗಾರರಲ್ಲಿ ಒಬ್ಬರು. 2012ರ ಭಾರತ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ, ಅವರು ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಔಟ್ ಮಾಡಿದ್ದರು. ಗಂಭೀರ್ ಅವರನ್ನು ಬೌಲ್ಡ್ ಮಾಡಿದ್ದ ಅವರು, ಸೆಹ್ವಾಗ್ ಅವರನ್ನು ಕ್ಯಾಚ್ ಮೂಲಕ ಔಟ್ ಮಾಡಿದ್ದರು. ಆ ಪಂದ್ಯದಲ್ಲಿ, ಅವರು ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 33 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದ್ದರು.