ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿವಾಹ ಸಮಾರಂಭದಲ್ಲಿ ಎಂಎಸ್‌ ಧೋನಿ-ಗೌತಮ್‌ ಗಂಭೀರ್‌ ಮುಖಾಮುಖಿ!

ಭಾರತೀಯ ಕ್ರಿಕೆಟ್ ತಂಡದ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಹಳ ದಿನಗಳ ನಂತರ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2011ರ ಏಕದಿನ ವಿಶ್ವಕಪ್‌ ವಿಜೇತರು ವಿವಾಹ ಸಮಾರಂಭದಲ್ಲಿ ಮುಖಾಮುಖಿ ಭೇಟಿಯಾಗಿದ್ದಾರೆ.

ಎಂಎಸ್‌ ಧೋನಿ-ಗೌತಮ್‌ ಗಂಭೀರ್‌ ಮುಖಾಮುಖಿ.

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ (Indian Cricket Team) ಮಾಜಿ ನಾಯಕ ಮತ್ತು ಪ್ರಸ್ತುತ ಮುಖ್ಯ ತರಬೇತುದಾರ ಗೌತಮ್ ಗಂಭೀರ್(Gautam Gambhir) ಸುದ್ದಿಯಲ್ಲಿದ್ದಾರೆ. ಗಂಭೀರ್ ಮತ್ತು ಧೋನಿ ಬಹಳ ದಿನಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ವಿವಾಹ ಸಮಾರಂಭಕ್ಕೆ ಆಗಮಿಸಿದ್ದರು. ಇಲ್ಲಿ ಇಬ್ಬರೂ ಒಟ್ಟಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ ಈ ಫೋಟೋಗಳು ಹಾಗೂ ವಿಡಿಯೊಗಳು ವೈರಲ್‌ ಆಗಿದೆ. ಧೋನಿ ಮತ್ತು ಗಂಭೀರ್ ಒಟ್ಟಿಗೆ ಕಾಣಿಸಿಕೊಂಡಿರುವ ಬಗ್ಗೆ ಏಕೆ ಇಷ್ಟೊಂದು ಚರ್ಚೆ ನಡೆಯುತ್ತಿದೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಇದಕ್ಕೆ ಕಾರಣ ಗೌತಮ್ ಗಂಭೀರ್, ಧೋನಿ ಬಗ್ಗೆ ಈ ಹಿಂದೆ ನೀಡಿದ್ದ ಬಹಿರಂಗ ಹೇಳಿಕೆಗಳು.

ಎಂಎಸ್‌ ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಗೌತಮ್‌ ಗಂಭೀರ್‌ ತಮ್ಮ ಬ್ಯಾಟಿಂಗ್‌ನಲ್ಲಿ ಕೊಡುಗೆಯನ್ನು ನೀಡಿದ್ದರು. ಆದರೆ ಯಾರೂ ಕೂಡ ಗೌತಮ್‌ ಗಂಭೀರ್‌ ಅವರನ್ನು ಗುರಿತಿಸಲಿಲ್ಲ. ಈ ಎರಡು ವಿಶ್ವಕಪ್ ಟೂರ್ನಿಗಳ ಬಗ್ಗೆ ಗಂಭೀರ್ ಚರ್ಚಿಸಿದಾಗಲೆಲ್ಲಾ, ಧೋನಿ ತಂಡವನ್ನು ಒಬ್ಬಂಟಿಯಾಗಿ ಚಾಂಪಿಯನ್ ಮಾಡಲಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಇಡೀ ತಂಡ ಅವರ ಹಿಂದೆ ಇತ್ತು. ಆದಾಗ್ಯೂ, ಗಂಭೀರ್ ಹೇಳಿಕೆಗಳಿಗೆ ಧೋನಿ ಎಂದಿಗೂ ಪ್ರತಿಕ್ರಿಯಿಸಲಿಲ್ಲ.

IND vs ENG: ʻನಾವೆಂದಿಗೂ ಶರಣಾಗುವುದಿಲ್ಲʼ-ಎದುರಾಳಿ ತಂಡಗಳಿಗೆ ಗೌತಮ್‌ ಗಂಭೀರ್‌ ವಾರ್ನಿಂಗ್‌!

ಧೋನಿ ಮತ್ತು ಗಂಭೀರ್ ಯಾರ ಮದುವೆಗೆ ಹಾಜರಿದ್ದರು?

ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಅವರ ಸಹೋದರನ ವಿವಾಹ ಸಮಾರಂಭದಲ್ಲಿ ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ ಭಾಗವಹಿಸಿದ್ದರು. ಧೋನಿ ಅವರ ಪತ್ನಿ ಸಾಕ್ಷಿ ಜೊತೆಗಿದ್ದರು. ಧೋನಿ ಮತ್ತು ಗಂಭೀರ್ ಸ್ನೇಹಪರವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಧೋನಿ ಜೊತೆಗೆ, ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ತಿಲಕ್ ವರ್ಮಾ ಮತ್ತು ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಈ ಸಮಾರಂಭದಲ್ಲಿ ಕಾಣಿಸಿಕೊಂಡರು. ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಧೋನಿ ಮತ್ತು ಗಂಭೀರ್ ನಡುವೆ ಶೀತಲ ಸಮರ

ಗೌತಮ್ ಗಂಭೀರ್ ಸಾರ್ವಜನಿಕವಾಗಿ ಧೋನಿ ಬಗ್ಗೆ ಅನೇಕ ಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಧೋನಿ ನಾಯಕತ್ವದಲ್ಲಿ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಈ ವೇಳೆ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಹೇಳಲಾಗುತ್ತಿತ್ತು, ಆದರೆ ವಿವಾಹ ಸಮಾರಂಭದಲ್ಲಿ ಈ ಇಬ್ಬರೂ ಭೇಟಿಯಾದ ರೀತಿ ಈ ಇಬ್ಬರು ಭಾರತೀಯ ದಂತಕಥೆಗಳ ಮನಸ್ಸಿನಲ್ಲಿ ಪರಸ್ಪರ ಏನೂ ಇಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ.

Asia Cup ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ಗೆ ಅವಕಾಶ ನೀಡಲು ಪ್ರಮುಖ 3 ಕಾರಣಗಳು!

ಸೆ 9ಕ್ಕೆ ಏಷ್ಯಾ ಕಪ್‌ ಆರಂಭ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಬಳಿಕ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭಿರ್‌ ರಜೆ ದಿನಗಳನ್ನು ಆನಂದಿಸುತ್ತಿದ್ದಾರೆ. ಭಾರತ ತಂಡದ ಮುಂದಿನ ವೇಳಾಪಟ್ಟಿ 2025ರ ಏಷ್ಯಾ ಕಪ್‌ ಟೂರ್ನಿಯಾಗಿದೆ. ಸೆಪ್ಟಂಬರ್‌ 9 ರಂದು ಯುಎಇಯಲ್ಲಿ ಈ ಟೂರ್ನಿ ಆರಂಭವಾಗಲಿದೆ. ಸೆಪ್ಟಂಬರ್‌ 10 ರಂದು ಯುಎಇ ವಿರುದ್ಧ ಭಾರತ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಅದರಂತೆ ಭಾರತ ತಂಡವನ್ನು ಆಗಸ್ಟ್‌ 19 ರಂದು ಬಿಸಿಸಿಐ ಪ್ರಕಟಿಸಬಹುದು.