ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬೌನ್ಸರ್‌ ಹಾಕಿದ್ದಕ್ಕೆ ಗೌತಮ್‌ ಗಂಭೀರ್‌ ನನ್ನನ್ನು ದೇಶ ದ್ರೋಹಿ ಎಂದು ಕರೆದರುʼ: ಶ್ರೀಶಾಂತ್‌ ಗಂಭೀರ ಆರೋಪ!

ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಮಾಜಿ ವೇಗಿ ಎಸ್‌ ಶ್ರೀಶಾಂತ್‌ ಗಂಭೀರ ಆರೋಪ ಮಾಡಿದ್ದಾರೆ. ಗಂಭೀರ್‌ ನನ್ನನ್ನು ದೇಶ ದ್ರೋಹಿ ಎಂದು ಕರೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ, ಈ ರೀತಿ ಕರೆಯುವುದಕ್ಕೂ ಮುನ್ನ ನನ್ನನ್ನು ಫಿಕ್ಸರ್‌ ಎಂದಿದ್ದರು ಎಂದು ಕೇರಳ ಮಾಜಿ ಆಟಗಾರ ಹೇಳಿದ್ದಾರೆ.

ಗೌತಮ್‌ ಗಂಭೀರ್‌ ವಿರುದ್ಧ ಗುಡುಗಿದ ಶ್ರೀಶಾಂತ್‌.

ನವದೆಹಲಿ: ಪ್ರಸ್ತುತ ಭಾರತ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರ ಬಗ್ಗೆ ಮಾಜಿ ವೇಗಿ ಎಸ್‌ ಶ್ರೀಶಾಂತ್‌ (S Sreeshanth) ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ. 2023ರಲ್ಲಿ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನಲ್ಲಿ ಗಂಭೀರ್‌ ಅವರೊಂದಿಗೆ ಪಯಣವನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಹಿಂದೆ ನನ್ನನ್ನು ಗಂಭೀರ್‌ ಫಿಕ್ಸರ್‌ ಎಂದು ಆರೋಪಿಸಿದ್ದರು ಎಂದು ಹೇಳಿದ್ದ ಶ್ರೀಶಾಂತ್‌ ಇದೀಗ, ಅವರಿಗೆ ಇತ್ತೀಚೆಗೆ ಒಂದು ಬೌನ್ಸರ್‌ ಹಾಕಿದ್ದ ಕಾರಣ ಅವರು ನನ್ನನ್ನು ʻದೇಶ ದ್ರೋಹಿʼ ಎಂದು ಕರೆದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಭಾಗವಹಿಸಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಶ್ರೀಶಾಂತ್‌, "ನನ್ನ ಬೌಲಿಂಗ್‌ ಗಂಭೀರ್‌ಗೆ ಚೆನ್ನಾಗಿ ಗೊತ್ತಿದ್ದ ಕಾರಣ ಮೊದಲನೇ ಎಸೆತದಲ್ಲಿಯೇ ಮುಂದೆ ಬಂದು ಫ್ಲಿಕ್‌ ಮಾಡಿದರು ಹಾಗೂ ಅವರು ತುಂಬಾ ಒಳ್ಳೆಯ ಕ್ರಿಕೆಟಿಗ. ಅವರ ಕೋಚಿಂಗ್‌ ಭಾಗ ಯಾವ ರೀತಿ ಇದೆ ಎಂದು ನನಗೆ ಗೊತ್ತಿಲ್ಲ, ಆದರೆ, ಅವರು ಅತ್ಯುತ್ತಮ ಕ್ರಿಕೆಟಿಗ. ಹಾಗಾಗಿ ನಾನು ಅವರಿಗೆ ನಾನು ಒಂದು ಬೌನ್ಸರ್‌ ಹಾಕಿದ್ದೆ," ಎಂದು ಹೇಳಿದ್ದಾರೆ.

"ಅವರು ನನಗೆ ಏನು ಹೇಳಿದರು ಎಂದು ನಿಮಗೆ ಗೊತ್ತಾ? ನಾನು ನಿಮಗೆ ಹೇಳುತ್ತೇನೆ, ಅವರು ನನ್ನನ್ನ ನಿಂದಿಸಿದ್ದರು ಎಂಬುದು ಸ್ಪಷ್ಟ. ಅವರು ಈ ಮಾತನ್ನು ಹೇಳಬಾರದಿತ್ತು, ಅವರ ನನ್ನನ್ನು ಫಿಕ್ಸರ್‌ ಎಂದು ಕರೆದಿದ್ದರು," ಎಂದು ಕೇರಳ ಮೂಲದ ಮಾಜಿ ವೇಗಿ ಬಹಿರಂಗಪಡಿಸಿದ್ದಾರೆ.

ಭಾರತ ತಂಡಕ್ಕೆ ವಿವಾದಿತ ಕೋಚ್‌ ಅಗತ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧ ಶ್ರೀಶಾಂತ್‌ ಗುಡುಗು!

"ನಾನು ಮುಂದೆ ಹೋಗಿ, ಅವರನ್ನು ಗೌತಿ ಭಾಯ್‌, ನೀವು ಸರಿಯಾಗಿದ್ದೀರಾ? ಎಂದು ಕೇಳಿದ್ದೆ. ನಾನು ಅವರಿಗಿಂತ ಸ್ವಲ್ಪ ದೈಹಿಕವಾಗಿ ಬಲಾಡ್ಯನಾಗಿ ಕಾಣುತ್ತಿದ್ದ ಕಾರಣ, ಅವರಿಗೆ ನಾನು ಹೊಡೆಯುತ್ತಿದೇನೆಂದು ಅನಿಸಿರಬೇಕು. ನತರ ಅವರ ಎಫ್‌...ಎಫ್‌ ಎಂಬ ಪದವನ್ನು ಬಳಿಸಿದ್ದರು. ನಂತರ ನನ್ನನ್ನು ʻಫಿಕ್ಸರ್‌ʼ ಹಾಗೂ ʻದೇಶ ದ್ರೋಹಿʼ ಎಂದರು," ಎಂದು ಶ್ರೀಶಾಂತ್‌ ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಹಾಗೂ ಶ್ರೀಶಾಂತ್‌ ಇಬ್ಬರೂ 2007ರಲ್ಲಿ ಟಿ20 ವಿಶ್ವಕಪ್‌ ಹಾಗೂ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಗೆದ್ದಿದ್ದ ಭಾರತ ತಂಡಗಳಲ್ಲಿ ಜೊತೆಯಲ್ಲಿ ಆಡಿದ್ದರು. ಅವರ ಅತ್ಯುತ್ತಮ ಬಾಂಧವ್ಯ ಆ ಸಂದರ್ಭದಲ್ಲಿ ಅಂತ್ಯವಾಗಿರಬೇಕು. 2013ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಎಸ್‌ ಶ್ರೀಶಾಂತ್‌ ಅವರು ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಲುಕಿದ್ದರು. ಇದರ ಆಧಾರದ ಮೇಲೆ ಗಂಭೀರ್‌ ನಿಂದಿಸಿದ್ದಾರೆ.‌

ʻನನ್ನ ಜೊತೆ ಫೈಟ್‌ ಮಾಡಲು ಧೈರ್ಯ ಇದೆಯಾ?ʼ: ಹರ್ಭಜನ್‌ ಸಿಂಗ್‌ಗೆ ಶ್ರೀಶಾಂತ್‌ ಚಾಲೆಂಜ್‌!

ಆರಂಭದಲ್ಲಿ ಅವರನ್ನು ಜೀವಿತಾವಧಿ ಕ್ರಿಕೆಟ್‌ನಿಂದ ಬ್ಯಾನ್‌ ಮಾಡಲಾಗಿತ್ತು. ಆದರೆ, 2020ರಲ್ಲಿ ಅವರ ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ಸೀಮಿತಗೊಳಿಸಲಾಗಿತ್ತು. ಇದಾದ ಬಳಿಕ ಅವರು ಕ್ರಿಕೆಟ್‌ಗೆ ಮರಳಿದ್ದರೂ ಅವರಿಂದ ಉತ್ತಮ ಬೌಲಿಂಗ್‌ ಪ್ರದರ್ಶನ ಮೂಡಿಬಂದಿರಲಿಲ್ಲ.

ಆದರೆ, ಗೌತಮ್‌ ಗಂಭೀರ್‌ ಅವರು ಪ್ರಸ್ತುತ ಭಾರತ ಪುರುಷರ ಹಿರಿಯರ ಕ್ರಿಕೆಟ್‌ ತಂಡಕ್ಕೆ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಕೋಚಿಂಗ್‌ ಅವಧಿಯಲ್ಲಿ ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್‌ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ.