ಭಾರತ ತಂಡಕ್ಕೆ ವಿವಾದಿತ ಕೋಚ್ ಅಗತ್ಯವಿಲ್ಲ: ಗೌತಮ್ ಗಂಭೀರ್ ವಿರುದ್ಧ ಶ್ರೀಶಾಂತ್ ಗುಡುಗು!
ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ವೇಗಿ ಶ್ರೀಶಾಂತ್ ಕಿಡಿಕಾರಿದ್ದಾರೆ. ಟೀಮ್ ಇಂಡಿಯಾದ ಹೆಡ್ ಕೋಚ್ನಿಂದ ಗೌತಮ್ ಗಂಭೀರ್ ಅವರನ್ನು ತೆಗೆದು ಹಾಕಿ, ಎಂಎಸ್ ಧೋನಿಯನ್ನು ಮೆಂಟರ್ ಅಗಿ ನೇಮಿಸಿ ಎಂದು ಅವರು ಆಗ್ರಹಿಸಿದ್ದಾರೆ. ಏಕೆಂದರೆ ಭಾರತ ತಂಡಕ್ಕೆ ಹೆಡ್ ಕೋಚ್ ಅಗತ್ಯವಿಲ್ಲ ಎಂದಿದ್ದಾರೆ.
ಗೌತಮ್ ಗಂಭೀರ್ ವಿರುದ್ಧ ಎಸ್ ಶ್ರೀಶಾಂತ್ ಕಿಡಿ. -
ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಹೆಡ್ ಕೋಚ್ ಅಗತ್ಯವಿಲ್ಲವೆಂದು ಗೌತಮ್ ಗಂಭೀರ್ (Gautam Gambhir) ವಿರುದ್ಧ ಕಿಡಿಕಾರಿದ ಮಾಜಿ ವೇಗಿ ಎಸ್ ಶ್ರೀಶಾಂತ್ (S Sreesanth), ದಿಗ್ಗಜ ಎಂಎಸ್ ಧೋನಿ (MS Dhoni) ಅವರನ್ನು ರಾಷ್ಟ್ರೀಯ ತಂಡಕ್ಕೆ ಮೆಂಟರ್ ಆಗಿ ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಕವಾಗಿ ಹೆಡ್ ಕೋಚ್ನ ಅಗತ್ಯವಿಲ್ಲ, ಹಾಗಾಗಿ ಇದರ ಬದಲು ಮೆಂಟರ್ ಅನ್ನು ನೇಮಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಲಾಲಂಟಾಪ್ನಲ್ಲಿ ನಡೆದ ಸಂವಾದದ ಸಮಯದಲ್ಲಿ ಎಸ್ ಶ್ರೀಶಾಂತ್ ಅವರು, ಭಾರತ ತಂಡ ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಏಕೆ ವೈಫಲ್ಯವನ್ನು ಅನುಭವಿಸುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. 2024ರಲ್ಲಿ ನ್ಯೂಜಿಲೆಂಡ್ ಹಾಗೂ 2025ರಲ್ಲಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿಗಳಲ್ಲಿ ಭಾರತ ತಂಡ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. ಇದನ್ನು ಆಧರಿಸಿ ಮಾತನಾಡಿದ ಶ್ರೀಶಾಂತ್, ಭಾರತ ತಂಡ ಟೆಸ್ಟ್ ಸರಣಿಗಳಲ್ಲಿ ಸೋಲುಗಳನ್ನು ನೋಡಿದಾಗ, ಹೆಡ್ ಕೋಚ್ ಗಂಭೀರ್ ಅವರ ಕಾರ್ಯವೈಖರಿಯಲ್ಲ ಸಮಸ್ಯೆ ಇದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ʻನನ್ನ ಜೊತೆ ಫೈಟ್ ಮಾಡಲು ಧೈರ್ಯ ಇದೆಯಾ?ʼ: ಹರ್ಭಜನ್ ಸಿಂಗ್ಗೆ ಶ್ರೀಶಾಂತ್ ಚಾಲೆಂಜ್!
"ಕೋಚ್ ಅನ್ನು ಬದಲಾವಣೆ ಮಾಡಿ, ಸ್ನೇಹಿತ. ಭಾರತ ತಂಡಕ್ಕೆ ಮೆಂಟರ್ನ ಅಗತ್ಯವಿದೆಯೇ ಹೊರತು ಮೆಂಟರ್ ಅಲ್ಲ," ಎಂದು ಹೇಳಿದ ಅವರು, "ಮೊದಲು ನೀವು ಸಹ ಆಟಗಾರರಿಗೆ ಸಹೋದರನಂತಿರಬೇಕು. ಗೆದ್ದಾಗ ಮಾತ್ರ ನಗುತ್ತಾ, ಸೋತಾಗ ಕೋಪಗೊಳ್ಳುವ ಮನೋಭಾವ ಇರಬಾರದು. ನೀವು ದೇಶಕ್ಕಾಗಿ ಉತ್ತಮ ಸಾಧನೆ ಮಾಡಿದ್ದೀರಿ, ಅದು ಶ್ಲಾಘನೀಯ. ಆದರೆ ಇದರಿಂದ ಇತರರು ಪ್ರಯತ್ನಿಸುತ್ತಿಲ್ಲ ಎಂಬ ಅರ್ಥವಾಗುವುದಿಲ್ಲ. ಕೇವಲ ಕೋಚ್ಗಿಂತ ಮಾರ್ಗದರ್ಶಕ (ಮೆಂಟರ್) ಆಗಿರುವ ವ್ಯಕ್ತಿಯ ಅಗತ್ಯ ಹೆಚ್ಚು,” ಎಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಆಟಗಾರರ ಮೇಲೆ “ಅತಿಯಾದ ಒತ್ತಡ” ಹೇರುತ್ತಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಅವರು ಮಾಜಿ ನಾಯಕ ಎಂಎಸ್ ಧೋನಿ ಅವರ ಉದಾಹರಣೆಯನ್ನು ಉಲ್ಲೇಖಿಸಿದರು.
“ಅಂತಾರಾಷ್ಟ್ರೀಯ ತಂಡಕ್ಕೆ ಆಟಗಾರರ ಮೇಲೆ ಅನಗತ್ಯ ಒತ್ತಡ ಹೇರುವ ಕೋಚ್ ಅಗತ್ಯವಿಲ್ಲ. ಧೋನಿ ಅಂತಹದ್ದನ್ನು ಎಂದಿಗೂ ಮಾಡಲಿಲ್ಲ. ಅವರು ಆಟಗಾರರಿಗೆ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ನೀಡುತ್ತಿದ್ದರು,” ಎಂದು ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿಯ ಏಕದಿನ ವಿಶ್ವಕಪ್ ಭವಿಷ್ಯ ನುಡಿದ ಬಿಸಿಸಿಐ ಸೆಕ್ರೆಟರಿ!
ಇದಲ್ಲದೆ, ಭಾರತ ತಂಡವು ದೀರ್ಘಕಾಲ ಧೋನಿ ಅವರ ಮನೋಭಾವ ಮತ್ತು ನಾಯಕತ್ವದ ತತ್ವಗಳ ಆಧಾರದ ಮೇಲೆ ಮುನ್ನಡೆದಿತ್ತು ಎಂದು ಅಭಿಪ್ರಾಯಪಟ್ಟ ಅವರು, “ಟೀಮ್ ಇಂಡಿಯಾಗೆ ಧೋನಿ ಅವರಂತಹ ಮಾರ್ಗದರ್ಶಕ (ಮೆಂಟರ್) ಅಗತ್ಯವಿದೆ,” ಎಂದು ತಿಳಿಸಿದ್ದಾರೆ.
2026ರ ಟಿ20 ವಿಶ್ವಕಪ್ ಗೆಲುವಿನ ಶ್ರೇಯ ಕೇವಲ ಗಂಭೀರ್ ಮಾತ್ರ ಸಲ್ಲಬೇಕಿಲ್ಲ: ಶ್ರೀಶಾಂತ್
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಭಾರತ ತಂಡದ ಯಶಸ್ಸಿನ ಶ್ರೇಯ ಕೇವಲ ಗೌತಮ್ ಗಂಭೀರ್ಗೆ ಮಾತ್ರ ಸಲ್ಲಬೇಕಿಲ್ಲ. ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಎಲ್ಲರಿಗೂ ಭಾರತ ತಂಡದ ಟಿ20 ವಿಶ್ವಕಪ್ ಗೆಲುವಿನ ಶ್ರೇಯ ಸಲ್ಲಬೇಕು.
"ಮೊದಲನೇಯದಾಗಿ ಭಾರತ ತಂಡದ ಟಿ20 ವಿಶ್ವಕಪ್ ಗೆಲುವಿನ ಶ್ರೇಯ ಸಂಪೂರ್ಣವಾಗಿ ಗಂಭೀರ್ಗೆ ಲಭಿಸಿತು. ಸಂಜು ಸ್ಯಾಮ್ಸನ್ ಇಲ್ಲದ ಹೊರತು, ಸೂರ್ಯಕುಮಾರ್ ಯಾದವ್ ನಾಯಕನಾಗಿಲ್ಲವಾದರೆ, ಹಾಗೂ ಸರಿಯಾದ ಸಮಯದಲ್ಲಿ ಬೌಲಿಂಗ್ ಬದಲಾವಣೆ ಮಾಡಿಲ್ಲವಾಗಿದ್ದರೆ, ನಮ್ಮಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾಗುತ್ತಿತ್ತಾ?," ಎಂದು ಶ್ರೀಶಾಂತ್ ಹೇಳಿದ್ದಾರೆ.
"ಮೈದಾನದಲ್ಲಿ ಎಲ್ಲಾ ನಿರ್ಧಾರಗಳನ್ನು ಕೋಚ್ ತೆಗೆದುಕೊಳ್ಳುತ್ತಾರಾ? ಕೋಚ್ ಆಗಿ ಮೈದಾನದಲ್ಲಿನ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ರೀತಿ ಗಂಭೀರ್ ನಡೆದುಕೊಂಡಿದ್ದರೆ ಇದನ್ನು ನಾನು ಒಪ್ಪಿಒಳ್ಳುತ್ತೇನೆ," ಎಂದು ಮಾಜಿ ವೇಗಿ ತಿಳಿಸಿದ್ದಾರೆ.