ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗೌತಮ್‌ ಗಂಭೀರ್‌ ರಣಜಿ ಟ್ರೋಫಿ ತಂಡಕ್ಕೆ ಕೋಚ್‌ ಆಗಬೇಕು: ಮಾಂಟಿ ಪನೇಸರ್‌ ವ್ಯಂಗ್ಯ!

ಭಾರತ ತಂಡದ ಹೆಡ್‌ ಕೋಚ್‌ ಆಗಿ ಗೌತಮ್‌ ಗಭೀರ್‌ ಅವರು ಮಿಶ್ರ ಫಲಿತಾಂಶವನ್ನು ಕಂಡಿದ್ದಾರೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿದ್ದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಇಂಗ್ಲೆಂಡ್‌ ಸ್ಪಿನ್‌ ದಂತಕತೆ ಮಾಂಟಿ ಪನೇಸರ್‌ ಅವರು, ಗೌತಮ್‌ ಗಂಭೀರ್‌ ಅವರ ಟೆಸ್ಟ್‌ ತಂಡದ ಕೋಚಿಂಗ್‌ ತಂತ್ರವನ್ನು ಟೀಕಿಸಿದ್ದಾರೆ. ಅವರು ಟೆಸ್ಟ್‌ ತಂಡದ ಬದಲು ರಣಜಿ ಟ್ರೋಫಿ ಟೂರ್ನಿಯ ತಂಡಕ್ಕೆ ಕೋಚ್‌ ಆಗಬೇಕೆಂದು ಸಲಹೆ ನೀಡಿದ್ದಾರೆ.

ಗೌತಮ್‌ ಗಂಭೀರ್‌ಗೆ ಮಹತ್ವದ ಸಲಹೆ ನೀಡಿದ ಮಾಂಟಿ ಪನೇಸರ್‌.

ನವದೆಹಲಿ: ಭಾರತ ಕ್ರಿಕೆಟ್‌ ತಂಡ (Indian Cricket Team) ಟೆಸ್ಟ್‌ ಕ್ರಿಕೆಟ್‌ನಲ್ಲಿ ವೈಫಲ್ಯ ಅನುಭವಿಸಿರುವುದಕ್ಕೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿನ ಯಶಸ್ಸನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್‌ ಮಾಜಿ ಸ್ಪಿನ್ನರ್‌ ಮಾಂಟಿ ಪನೇಸರ್‌ (Monty Panesar), ಗೌತಮ್‌ ಗಂಭೀರ್‌ ಅವರ ಕೋಚಿಂಗ್‌ ತಂತ್ರಗಳನ್ನು ಟೀಕಿಸಿದ್ದಾರೆ ಹಾಗೂ ಇವರು ರಣಜಿ ಟ್ರೋಫಿ ಟೂರ್ನಿಯ ತಂಡದಲ್ಲಿ ಮೊದಲು ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತ ತಂಡ 2024ರಿಂದ 2025ರವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ಪ್ರದರ್ಶನವನ್ನು ತೋರಿದೆ. ರಾಹುಲ್‌ ದ್ರಾವಿಡ್‌ ಕೋಚ್‌ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಗೌತಮ್‌ ಗಂಭೀರ್‌ ಕೋಚ್‌ ಆಗಿ ಭಾರತ ತಂಡಕ್ಕೆ ಬಂದಿದ್ದರು. ಇವರ ಅಡಿಯಲ್ಲಿ ಭಾರತ ತಂಡ ಟೆಸ್ಟ್‌ ತವರಿನಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದೆ. 2024ರ ಮಧ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತ್ತು. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿಯೂ ಟೀಮ್‌ ಇಂಡಿಯಾ 2-0 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು.

Vijay Hazare Trophy 2025-26:‌ 101 ಎಸೆತಗಳಲ್ಲಿ 160 ರನ್‌ ಸಿಡಿಸಿದ ಧ್ರುವ್‌ ಜುರೆಲ್!

ಗೌತಮ್‌ ಗಂಭೀರ್‌ ಮೊದಲು ರಣಜಿ ತಂಡವೊಂದರ ಕೋಚ್‌ ಆಗಿ ಕಾರ್ಯನಿರ್ವಹಿಸಬೇಕು. ಆ ಮೂಲಕ ಇತರೆ ಕೋಚ್‌ಗಳ ಜೊತೆಗೆ ಸಂಭಾಷಣೆ ನಡೆಸುವ ಮೂಲಕ ರೇಡ್‌ ಬಾಲ್‌ ಕೋಚಿಂಗ್‌ ತಂತ್ರಗಳನ್ನು ಇನ್ನಷ್ಟು ಉತ್ತಮವಾಗಿ ಕಲಿಯಬೇಕು ಎಂದು ಇಂಗ್ಲೆಂಡ್‌ ಮಾಜಿ ಆಟಗಾರ ಮಾಂಟಿ ಪನೇಸರ್‌ ಸಲಹೆ ನೀಡಿದ್ದಾರೆ.

"ಗೌತಮ್ ಗಂಭೀರ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಕೋಚ್, ಹಾಗಾಗಿ ಯಶಸ್ವಿಯಾಗುತ್ತಿದ್ದಾರೆ. ಆದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗಬೇಕೆಂದರೆ ಅವರು ರಣಜಿ ಟ್ರೋಫಿ ತಂಡವೊಂದರಲ್ಲಿ ತರಬೇತುದಾರರಾಗಬೇಕು ಮತ್ತು ಉತ್ತಮ ರೆಡ್‌ ಬಾಲ್‌ ತಂಡವನ್ನು ಕಟ್ಟುವ ಬಗ್ಗೆ ಇತರೆ ಕೋಚ್‌ಗಳ ಬಳಿ ಮಾತನಾಡಬೇಕು. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತಂಡವನ್ನು ಹೇಗೆ ಯಶಸ್ವಿಯಾಗಿ ಮುನ್ನಡೆಸಬೇಕೆಂಬ ಅಂಶಗಳನ್ನು ಕಲಿಯಬೇಕು," ಎಂದು ಅವರು ತಿಳಿಸಿದ್ದಾರೆ.

ಭಾರತದ ಪರ ಗರಿಷ್ಠ ಜತೆಯಾಟದ ದಾಖಲೆ ಬರೆದ ಸ್ಮೃತಿ-ಶಫಾಲಿ

ಭಾರತ ತಂಡದ ರೆಡ್-ಬಾಲ್ ಕ್ರಿಕೆಟ್ ವೈಫಲ್ಯಕ್ಕೆ ಆಟಗಾರರೇ ಕಾರಣ ಎಂದು ಮಾಜಿ ಸ್ಪಿನ್ನರ್ ದೂಷಿಸಿದರು. ಆಟಗಾರರು ರೆಡ್‌ ಬಾಲ್‌ ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂದು ದೂರಿದ್ದಾರೆ. ಯುವ ಕ್ರಿಕೆಟಿಗರು ನಾಲ್ಕು ದಿನಗಳ ಪ್ರಥಮ ದರ್ಜೆ ಪಂದ್ಯಗಳು ಅಥವಾ ಟೆಸ್ಟ್ ಪಂದ್ಯಗಳನ್ನು ಆಡುವುದಕ್ಕಿಂತ ಐಪಿಎಲ್ ಒಪ್ಪಂದಗಳನ್ನು ಪಡೆಯುವತ್ತ ಹೆಚ್ಚು ಗಮನಹರಿಸುತ್ತಾರೆ ಎಂದು ಅವರು ಆರೋಪ ಮಾಡಿದರು.

"ಭಾರತ ಟೆಸ್ಟ್ ತಂಡಕ್ಕಾಗಿ ಆಡುವುದಕ್ಕೂ ರಣಜಿ ಟ್ರೋಫಿಯಲ್ಲಿ ಆಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ರಣಜಿ ಟ್ರೋಫಿ ವ್ಯವಸ್ಥೆಯು ತುಂಬಾ ದುರ್ಬಲವಾಗಿದೆ. ಹುಡುಗರು ಮಾತ್ರ ಐಪಿಎಲ್‌ನಲ್ಲಿ ಆಡಲು ಬಯಸುತ್ತಾರೆ. ಅವರು ದೊಡ್ಡ ಒಪ್ಪಂದಗಳನ್ನು ಬಯಸುತ್ತಾರೆ. ಅವರು ಟಿ20 ಅಂತಾರಾಷ್ಟ್ರೀಯ ಮತ್ತು ಏಕದಿನ ಪಂದ್ಯಗಳನ್ನು ಆಡಲು ಬಯಸುತ್ತಾರೆ. ನಾಲ್ಕು ದಿನಗಳ ಪಂದ್ಯಗಳಿಗೆ ಸಾಕಷ್ಟು ಕಠಿಣ ಪರಿಶ್ರಮ ಬೇಕಾಗುತ್ತದೆ, ಅದಕ್ಕಾಗಿಯೇ ಅವರು ಅವುಗಳಿಗೆ ಬಹಳ ಕಡಿಮೆ ಸಮಯವನ್ನು ವಿನಿಯೋಗಿಸುತ್ತಿದ್ದಾರೆ," ಎಂದು ಮಾಂಟಿ ಪನೇಸರ್‌ ಹೇಳಿದ್ದಾರೆ.