ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಮ್ಯಾಥ್ಯೂ ಹೇಡನ್‌ ಪುತ್ರಿ ಗ್ರೇಸ್‌ ಹೇಡನ್‌!

ಭಾರತದ ಗಣರಾಜೋತ್ಸವ ದಿನಚಾರಣೆ ನಿಮಿತ್ತ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ಅವರ ಪುತ್ರಿ ಗ್ರೇಸ್‌ ಹೇಡನ್‌ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ. ಅವರು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸೀರೆ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಗಣರಾಜ್ಯೋತ್ಸವಕ್ಕೆ ಭಾರತೀಯರಿಗೆ ಶುಭಾಶಯ ಕೋರಿದ ಗ್ರೇಸ್‌ ಹೇಡನ್‌!

ಗಣರಾಜ್ಯೋತ್ಸವ ದಿನಾಚರಣೆಗೆ ಶುಭಾಶಯ ಕೋರಿದ ಗ್ರೇಸ್‌ ಹೇಡನ್‌. -

Profile
Ramesh Kote Jan 26, 2026 7:58 PM

ನವದೆಹಲಿ: ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವದ (Republic Day) ನಿಮಿತ್ತ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ಹೇಡನ್‌ (Matthew hayden) ಅವರ ಪುತ್ರಿ ಗ್ರೇಸ್‌ ಹೇಡನ್‌ (Grace Hayden) ಅವರು, ಭಾರತೀಯರಿಗೆ ಶುಭಾಶಯ ಕೋರಿದ್ದಾರೆ. ಆಸ್ಟ್ರೇಲಿಯಾದಲ್ಲಿಯೂ ಕೂಡ ಇದೇ ದಿನದಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಹಾಗಾಗಿ ಎರಡೂ ದೇಶಗಳಿಗೆ ಸೇರಿಸಿ ಹೇಡನ್‌ ಶುಭಾಶಯ ಹೇಳಿದ್ದಾರೆ. 23ರ ಪ್ರಾಯದ ಗ್ರೇಸ್‌ ಹೇಡನ್‌ ಅವರು ಪ್ರಸ್ತುತ 2026ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಭಾರತೀಯ ಟಿವಿಯೊಂದಕ್ಕೆ ವರದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯರಿಗೆ ಸಾಂಪ್ರದಾಯಿಕ ಸೀರೆಯನ್ನು ಕಟ್ಟಿಕೊಂಡು ಶುಭ ಕೋರಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಸೀರೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡ ಗ್ರೇಸ್‌ ಹೇಡನ್‌, "ಹ್ಯಾಪಿ ರಿಪಬ್ಲಿಕ್‌ ಡೇ ಭಾರತ ಹಾಗೂ ಹ್ಯಾಪಿ ಆಸ್ಟ್ರೇಲಿಯಾ ಡೇ!" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕ್ರಿಕೆಟ್‌ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಸಂಪ್ರದಾಯವನ್ನು ಹಿಂಬಾಲಿಸುತ್ತಿರುವ ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ. ಅವರು ಇತ್ತೀಚೆಗೆ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದರು.

IND vs NZ: 20 ಎಸೆತಗಳಲ್ಲಿ 68 ರನ್‌ ಗಳಿಸಿದರೂ ಅಭಿಷೇಕ್‌ ಶರ್ಮಾರ ಕಾಲೆಳೆದ ಯುವರಾಜ್‌ ಸಿಂಗ್‌!

ಆಸ್ಟ್ರೇಲಿಯಾದ ದಂತಕಥೆಯ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್ ಹೇಡನ್, ಕ್ರೀಡಾ ಪ್ರಸಾರದಲ್ಲಿ ತನ್ನನ್ನು ತಾನು ಶೀಘ್ರವಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಕ್ರಿಕೆಟ್ ಜಗತ್ತಿನಲ್ಲಿ ಪ್ರವೇಶಿಸಿದ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಪರಿಚಿತ ಮುಖವಾದರು.

ಅವರು ಪ್ರಸ್ತುತ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ವರದಿಗೆ ಪ್ರಮುಖ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಕ್ಸ್‌ಟ್ರಾ ಸರ್ವ್ ಕಾರ್ಯಕ್ರಮದಲ್ಲಿ ಅವರ ಪಾತ್ರವು ಅವರನ್ನು ಇನ್ನೂ ಹೆಚ್ಚಿನ ಪ್ರೇಕ್ಷಕರಿಗೆ ಪರಿಚಯಿಸಿದೆ.

ಭಾರತದ ಜೊತೆಗಿನ ಹೇಡನ್‌ ಕುಟುಂಬದ ನಂಟು

ಹೇಡನ್ ಕುಟುಂಬ ಮತ್ತು ಭಾರತದ ನಡುವಿನ ಸಂಪರ್ಕವು ಆಳವಾಗಿ ಬೇರೂರಿದೆ. ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಅವರ ಯಶಸ್ವಿ ಅವಧಿಯಿಂದಾಗಿ ಮ್ಯಾಥ್ಯೂ ಹೇಡನ್ ದೇಶದ ಅತ್ಯಂತ ಜನಪ್ರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಈ ಪರಂಪರೆಯು ದೇಶದ ಮೇಲಿನ ತನ್ನ ಪ್ರೀತಿಯನ್ನು ಹೇಗೆ ಬೆಳೆಸಲು ಸಹಾಯ ಮಾಡಿತು ಎಂಬುದರ ಕುರಿತು ಗ್ರೇಸ್ ಆಗಾಗ್ಗೆ ಮಾತನಾಡಿದ್ದಾರೆ. ಆಹಾರ, ಸಂಸ್ಕೃತಿ ಮತ್ತು ಕ್ರೀಡೆಯ ಮೂಲಕ ಭಾರತದ ಜನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಲು ತಾನು "ನಿಜವಾಗಿಯೂ ಅದೃಷ್ಟಶಾಲಿ" ಎಂದು ಭಾವಿಸುತ್ತೇನೆ ಎಂದು ಅವರು ಇತ್ತೀಚೆಗೆ ಹೇಳುವ ಮೂಲಕ ಗಮನ ಸೆಳೆದಿದ್ದರು.