ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL ಟೆಸ್ಟ್‌ ಸರಣಿಯಲ್ಲಿ ಭಾರತಕ್ಕೆ ಎಕ್ಸ್‌ ಫ್ಯಾಕ್ಟರ್‌ ಆಟಗಾರನನ್ನು ಹೆಸರಿಸಿದ ಫರ್ವೀಝ್‌ ಮಹರೂಫ್‌!

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಯುವ ವೇಗಿ ಗುರ್ನೂರ್ ಬ್ರಾರ್ ಅವರು ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ‘ಎಕ್ಸ್-ಫ್ಯಾಕ್ಟರ್’ ಆಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 26ರ ವಯಸ್ಸಿನ ಗುರ್ನೂರ್ ಬ್ರಾರ್‌ಗೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ನೀಡಲು ತಾವು ಸಿದ್ಧರಿರುವುದಾಗಿ ಮಹರೂಫ್ ಹೇಳಿದ್ದಾರೆ.

ಗುರ್ನೂರ್‌ ಬ್ರಾರ್‌ ಭಾರತ ತಂಡಕ್ಕೆ ಎಕ್ಸ್‌ ಫ್ಯಾಕ್ಟರ್‌ ಎಂದ ಫರ್ವೀಝ್‌.

ನವದೆಹಲಿ: ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಯುವ ವೇಗಿ ಗುರ್ನೂರ್ ಬ್ರಾರ್ (Gurnoor Brar) ಭಾರತ ತಂಡದ ‘ಎಕ್ಸ್-ಫ್ಯಾಕ್ಟರ್’ ಆಗಬಲ್ಲರು ಎಂದು ಶ್ರೀಲಂಕಾದ ಮಾಜಿ ಆಲ್‌ರೌಂಡರ್ ಫರ್ವೀಜ್ ಮಹರೂಫ್ (Farveez Maharoof) ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಗಾಲೆಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs SL) 26 ವರ್ಷದ ಬ್ರಾರ್‌ಗೆ ಟೆಸ್ಟ್ ಪದಾರ್ಪಣೆ ಮಾಡುವ ಅವಕಾಶ ನೀಡಲು ತಾವು ಆಸಕ್ತಿ ಹೊಂದಿರುವುದಾಗಿ ಮಹರೂಫ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದಿದದ್ ಟೆಸ್ಟ್ ಸರಣಿಯಲ್ಲಿ ಸೋತ ಬಳಿಕ ಭಾರತ ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳಲಿದೆ. ಈ ಸರಣಿಯಲ್ಲಿ ಭಾರತ ತಂಡಕ್ಕೆ ಬುಮ್ರಾ ಲಭ್ಯವಿರುವುದಿಲ್ಲ. ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನಕ್ಕಾಗಿ ಗುರ್ನೂರ್ ಬ್ರಾರ್ ಮತ್ತು ಪ್ರಸಿಧ್‌ ಕೃಷ್ಣ ನಡುವೆ ಪೈಪೋಟಿ ಇದೆ.

“ವಿಶೇಷವಾಗಿ ಹಳೆಯ ಚೆಂಡಿನೊಂದಿಗೆ ರಿವರ್ಸ್ ಸ್ವಿಂಗ್ ಮಾಡಿಸುವ ಸಾಮರ್ಥ್ಯ ಬುಮ್ರಾ ಅವರ ಪ್ರಮುಖ ಶಕ್ತಿಯಾಗಿದೆ. ಭಾರತ ತಂಡ ಈ ಗುಣವನ್ನು ಖಂಡಿತವಾಗಿಯೂ ಬಹಳವಾಗಿ ಮಿಸ್ ಮಾಡಿಕೊಳ್ಳಲಿದೆ,” ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಫರ್ವೀಝ್‌ ಮಹರೂಫ್ ಹೇಳಿದ್ದಾರೆ.

ಜುರೆಲ್‌ or ಸರ್ಫರಾಝ್‌? ಭಾರತ ತಂಡದ 6ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಮೊಹಮ್ಮದ್‌ ಕೈಫ್‌!

“ಅಲ್ಲಿಯೇ ಭಾರತ ತಂಡಕ್ಕೆ ವಿಕೆಟ್ ಪಡೆಯುವ ಸಾಮರ್ಥ್ಯದಲ್ಲಿ ಸ್ವಲ್ಪ ಕೊರತೆ ಉಂಟಾಗಬಹುದು ಎಂದು ನನಗೆ ಅನಿಸುತ್ತದೆ. ಮೊಹಮ್ಮದ್ ಸಿರಾಜ್ ಉತ್ತಮ ಬೌಲರ್, ಅವರ ಬಗ್ಗೆ ಯಾವುದೇ ಅಗೌರವವಿಲ್ಲ. ಆದರೆ ಇಬ್ಬರು ವೇಗದ ಬೌಲರ್‌ಗಳನ್ನು ಹೋಲಿಕೆ ಮಾಡಿದಾಗ, ಇಬ್ಬರ ನಡುವೆ ಸ್ವಲ್ಪ ವ್ಯತ್ಯಾಸವಿದೆ,” ಎಂದು ಮಹರೂಫ್ ತಿಳಿಸಿದ್ದಾರೆ.

ಭಾರತದ ಅಭ್ಯಾಸ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ಅವರ ಪ್ರದರ್ಶನದಿಂದ ಫರ್ವೀಝ್ ಮಹರೂಫ್ ಪ್ರಭಾವಿತರಾಗಿದ್ದಾರೆ. ಎತ್ತರದ ಈ ಪಂಜಾಬ್ ವೇಗಿ ತಮ್ಮ ವೇಗ ಮತ್ತು ಬೌನ್ಸ್‌ನಿಂದ ಹಲವು ಬ್ಯಾಟರ್‌ಗಳಿಗೆ ತೊಂದರೆ ನೀಡಿದ್ದರು ಎಂದು ಮಹರೂಫ್ ಹೇಳಿದ್ದಾರೆ.

“ನನಗೆ ಗುರ್ನೂರ್ ಬ್ರಾರ್ ಅವರು ತುಂಬಾ ಇಷ್ಟವಾಗಿದ್ದಾರೆ. ಅವರು ಭಾರತದ ಎಕ್ಸ್-ಫ್ಯಾಕ್ಟರ್ ಆಗಬಲ್ಲರು ಎಂದು ನಾನು ಭಾವಿಸುತ್ತೇನೆ. ಅವರ ಬಳಿ ಬೌನ್ಸ್ ಇದೆ, ವೇಗವಿದೆ ಮತ್ತು ಹೋರಾಟದ ಮನೋಭಾವವೂ ಇದೆ. ಅವರು ಬ್ಯಾಟರ್‌ಗಳಿಗೆ ಸಾಕಷ್ಟು ಕಠಿಣ ಸವಾಲು ಒಡ್ಡಬಲ್ಲರು,” ಎಂದು ಮಹರೂಫ್ ತಿಳಿಸಿದ್ದಾರೆ.

IND vs SL: ಮೊದಲನೇ ಟೆಸ್ಟ್‌ಗೂ ಮುನ್ನ ರಿಷಭ್‌ ಪಂತ್‌ಗೆ ದೀಪ್‌ ದಾಸ್‌ಗುಪ್ತಾ ಮಹತ್ವದ ಸಲಹೆ!

“ನಾನು ಭಾರತ ತಂಡದ ಆಯ್ಕೆ ಸಮಿತಿಯ ಭಾಗವಾಗಿದ್ದರೆ, ಗುರ್ನೂರ್‌ಗೆ ಅವಕಾಶ ನೀಡಲು ಖಂಡಿತವಾಗಿಯೂ ಯೋಚಿಸುತ್ತಿದ್ದೆ. ಅವರು ಭಾರತ ಪರ ಇದುವರೆಗೆ ವೈಟ್-ಬಾಲ್ ಕ್ರಿಕೆಟ್ ಮಾತ್ರ ಆಡಿದ್ದಾರೆ ಎಂಬುದು ನನಗೆ ಗೊತ್ತು. ಆದರೆ ಅವರು ತಂಡಕ್ಕೆ ಆ ಎಕ್ಸ್-ಫ್ಯಾಕ್ಟರ್ ತರುತ್ತಾರೆ,” ಎಂದು ಅವರು ಭವಿಷ್ಯ ನುಡಿದಿದ್ದಾರೆ.

“ಕಡಿಮೆ ಅವಧಿಯ ಸ್ಪೆಲ್‌ಗಳಲ್ಲಿ ಬ್ಯಾಟರ್‌ನ ಲಯವನ್ನು ಮುರಿಯಬೇಕಾದ ಸಂದರ್ಭದಲ್ಲಿ ಗುರ್ನೂರ್ ಅತ್ಯಂತ ಅಪಾಯಕಾರಿ ಅಸ್ತ್ರವಾಗಬಲ್ಲರು,” ಎಂದು ಮಹರೂಫ್ ಅಭಿಪ್ರಾಯಪಟ್ಟಿದ್ದಾರೆ.

ಗುರ್ನೂರ್ ಬ್ರಾರ್ ಇದುವರೆಗೆ ಕೆಲವೇ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರೂ, ಅವರನ್ನು ಭಾರತ ತಂಡದ ಟೆಸ್ಟ್‌ ಸ್ಕ್ವಾಡ್‌ಗೆ ಆಯ್ಕೆ ಮಾಡಲಾಗಿದೆ. ಅವರು ಆರು ಏಕದಿನ ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದು, ಕಳೆದ ತಿಂಗಳು ಗಾಲೆಯಲ್ಲಿ ನಡೆದಿದ್ದ ಭಾರತ ‘ಎ’ ತಂಡದ ಪರ ಪಂದ್ಯದಲ್ಲಿ 10 ವಿಕೆಟ್‌ಗಳ ಸಾಧನೆ ಮಾಡಿದ್ದರು.

ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಮೂವರು ಸ್ಪಿನ್ನರ್‌ಗಳನ್ನು ಹೆಸರಿಸಿದ ವಾಸೀಮ್‌ ಜಾಫರ್‌!

ಇದೇ ವೇಳೆ, ಭಾರತದ ಮೂರನೇ ಸ್ಪಿನ್ನರ್ ಆಗಿ ಮಾನವ್ ಸುತಾರ್ ಅವರಿಗೆ ಅವಕಾಶ ಸಿಗಬಹುದು ಎಂದು ಫರ್ವೀಝ್‌ ಮಹರೂಫ್ ಅಭಿಪ್ರಾಯಪಟ್ಟಿದ್ದಾರೆ. ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರೊಂದಿಗೆ ಸುತಾರ್ ಸ್ಪಿನ್ ವಿಭಾಗವನ್ನು ಮುನ್ನಡೆಸಬಹುದು ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ ಮಾನವ್ ಸುತಾರ್ ಏಳು ವಿಕೆಟ್ ಕಬಳಿಸಿದ್ದರು. ಮತ್ತೊಂದೆಡೆ, ಇನ್ನೂ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡದ ಆಫ್‌ಸ್ಪಿನ್ನರ್ ಸಾರಾಂಶ್ ಜೈನ್, ಶ್ರೀಲಂಕಾ ಪ್ರವಾಸದಲ್ಲಿ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಏಳು ವಿಕೆಟ್‌ಗಳ ಜೊತೆಗೆ ಅಜೇಯ 70 ರನ್ ಗಳಿಸಿದ್ದರು.

“ಭಾರತ ಮೂರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವುದನ್ನು ನಾನು ನೋಡುತ್ತೇನೆ. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ಮಾನವ್ ಸುಥಾರ್ ಅಥವಾ ಸಾರಾಂಶ್ ಜೈನ್ ಅವರಲ್ಲಿ ಒಬ್ಬರು,” ಎಂದು ಮಹರೂಫ್ ಹೇಳಿದ್ದಾರೆ.

“ವೈವಿಧ್ಯತೆಗಾಗಿ ಸಾಮಾನ್ಯವಾಗಿ ಆಫ್‌ಸ್ಪಿನ್ನರ್‌ರನ್ನು ಆಯ್ಕೆ ಮಾಡಲು ಬಯಸುತ್ತೀರಿ. ಆದರೆ ಗಾಲೆಯ ಪಿಚ್‌ನಿಂದ ಬೌನ್ಸ್ ಪಡೆಯುವ ಮಾನವ್ ಸುತಾರ್ ಅವರ ಸಾಮರ್ಥ್ಯ ಭಾರತಕ್ಕೆ ಬಹಳ ಉಪಯುಕ್ತವಾಗಬಹುದು. ಹೀಗಾಗಿ ಅವರು ಆಡುವುದನ್ನು ನೋಡಿದರೆ ನನಗೆ ಅಚ್ಚರಿಯಾಗುವುದಿಲ್ಲ,” ಎಂದು ಮಹರೂಫ್ ತಿಳಿಸಿದ್ದಾರೆ.