ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಒಡಿಐ ವಿಶ್ವಕಪ್‌ ಟೂರ್ನಿಯಲ್ಲಿ ಆಡಬಲ್ಲ ಮೂವರು ಯುವ ಆಟಗಾರರು!

ಬಹುನಿರೀಕ್ಷಿತ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಮುಂದಿನ ವರ್ಷ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಬಲ್ಲ ಮೂವರು ವೇಗಿಗಳು.

ನವದೆಹಲಿ: ಬಹುನಿರೀಕ್ಷಿತ 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2026) ಟೂರ್ನಿಗೆ ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ 50 ಓವರ್‌ಗಳ ವಿಶ್ವಕಪ್‌ ಟೂರ್ನಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿಗೆ ಭಾರತ ತಂಡ (Indian Cricket Team) ಇಂದಿನಿಂದಲೇ ಸಿದ್ದತೆಯನ್ನು ನಡೆಸುತ್ತಿದೆ. 2011ರ ಬಳಿಕ ಇದೇ ಮೊದಲ ಬಾರಿ ಏಕದಿನ ವಿಶ್ವಕಪ್‌ ಗೆಲ್ಲುವ ಉದ್ದೇಶವನ್ನು ಹೊಂದಿರುವ ಭಾರತ ತಂಡ, ಅತ್ಯುತ್ತಮ ಸಂಯೋಜನೆಯನ್ನು ಕಟ್ಟಲು ಎದುರು ನೋಡುತ್ತಿದೆ.

ಅನುಭವಿ ಹಾಗೂ ಯುವ ಆಟಗಾರರನ್ನುಒಳಗೊಂಡ ಅತ್ಯುತ್ತಮ ತಂಡವನ್ನು ಕಟ್ಟಲು ಬಿಸಿಸಿಐ ಆಯ್ಕೆದಾರರು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದಲೇ ತಮ್ಮ ಕೆಲಸವನ್ನು ಶುರು ಮಾಡಿಕೊಂಡಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರೊಂದಿಗೆ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿದೆ. ಆದರೆ, ಬೌಲಿಂಗ್‌ ವಿಭಾಗ ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಬಿಸಿಸಿಐ ಆಯ್ಕೆದಾರರು ಯುವ ಪ್ರತಿಭೆಗಳನ್ನು ಹುಡುಕುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಸೀಮ್‌ ಬೌಲಿಂಗ್‌ ಕಂಡೀಷನ್ಸ್‌ಗೆ ಸೂಕ್ತವಾಗುವ ವೇಗದ ಬೌಲರ್‌ಗಳನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ಅಂದ ಹಾಗೆ 2027ರ ಏಕದಿನ ವಿಶ್ವಕಪ್‌ ಟೂರ್ನಿಯ ಭಾರತ ತಂಡಕ್ಕೆ ಆಯ್ಕೆಯಾಗಬಲ್ಲ ಮೂವರು ಯುವ ವೇಗಿಗಳನ್ನು ಇಲ್ಲಿ ವಿವರಿಸಲಾಗಿದೆ.

IND vs AFG: ಭಾರತ ತಂಡಕ್ಕೆ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಸುನೀಲ್‌ ಗವಾಸ್ಕರ್‌!

ಗುರ್ನೂರ್‌ ಬ್ರಾರ್‌

ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಭರವಸೆ ಮೂಡಿಸಿರುವ ವೇಗಿ ಪ್ರಿನ್ಸ್‌ ಯಾದವ್‌. ಎತ್ತರದ ವೇಗದ ಬೌಲರ್ ಆಗಿರುವ ಗುರ್ನೂರ್ ಬ್ರಾರ್, ಈಗಾಗಲೇ ಪಿಚ್‌ನಿಂದ ಹೆಚ್ಚುವರಿ ಬೌನ್ಸ್ ಪಡೆಯುವ ಹಾಗೂ ಕಠಿಣ ಲೆಂಗ್ತ್‌ನಲ್ಲಿ ಬೌಲ್‌ ಮಾಡಿ ಬ್ಯಾಟರ್‌ಗಳಿಗೆ ತೊಂದರೆ ಉಂಟುಮಾಡುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ದದ ತಮ್ಮ ಪದಾರ್ಪಣೆ ಪಂದ್ಯದಲ್ಲಿ 3 ವಿಕೆಟ್‌ ಕಿತ್ತು ಗಮನ ಸೆಳೆದಿದ್ದಾರೆ.

2027ರ ವಿಶ್ವಕಪ್‌ ಟೂರ್ನಿಗೆ ಬ್ರಾರ್ ಬಲಿಷ್ಠ ಅಭ್ಯರ್ಥಿಯಾಗಿ ಪರಿಗಣಿಸಲ್ಪಡಲು ಪ್ರಮುಖ ಕಾರಣ ಅವರ ಬೌಲಿಂಗ್ ಶೈಲಿ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಲ್ಲಿ ನಿರೀಕ್ಷಿಸಲಾಗಿರುವ ವೇಗ ಮತ್ತು ಬೌನ್ಸ್ ಹೊಂದಿರುವ ಪಿಚ್‌ಗಳಿಗೆ ಅವರ ಬೌಲಿಂಗ್ ಅತ್ಯಂತ ಸೂಕ್ತವಾಗಿದೆ.‌ ಪಿಚ್‌ಗೆ ಬಲವಾಗಿ ಚೆಂಡು ಅಪ್ಪಳಿಸುವಂತೆ (ಹಿಟ್ ದ ಡೆಕ್) ಬೌಲ್ ಮಾಡುವ ಹಾಗೂ ಹೆಚ್ಚುವರಿ ಬೌನ್ಸ್ ಸೃಷ್ಟಿಸುವ ಅವರ ಸಾಮರ್ಥ್ಯ, ವೇಗದ ಟ್ರ್ಯಾಕ್‌ಗಳಲ್ಲಿ ಭಾರತಕ್ಕೆ ದೊಡ್ಡ ಅಸ್ತ್ರವಾಗಬಹುದು.

ಮುಂದಿನ ಎರಡು ವರ್ಷಗಳಲ್ಲಿ ಅವರನ್ನು ಸರಿಯಾದ ರೀತಿಯಲ್ಲಿ ಬೆಳೆಸಿ, ನಿರಂತರ ಅವಕಾಶಗಳನ್ನು ನೀಡಿದರೆ, ಗುರ್ನೂರ್ ಬ್ರಾರ್ ಭಾರತ ತಂಡದ ವೇಗದ ಬೌಲಿಂಗ್ ಪಡೆಯ ಪ್ರಮುಖ ಸದಸ್ಯರಾಗಿ ರೂಪುಗೊಳ್ಳುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ.

ʻಶ್ರೀಲಂಕಾ ಎ ಆಟಗಾರರಿಂದ ಮೈಂಡ್‌ ಗೇಮ್‌ʼ: ವಿವಾದಾತ್ಮಕ ಘಟನೆ ಬಗ್ಗೆ ಆರ್‌ ಅಶ್ವಿನ್‌ ಪ್ರತಿಕ್ರಿಯೆ!

ಅರ್ಷದ್‌ ಖಾನ್‌

ಎಡಗೈ ವೇಗದ ಬೌಲರ್ ಅರ್ಷದ್ ಖಾನ್ ಭಾರತ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ವಿಭಿನ್ನ ಆಯಾಮವನ್ನು ನೀಡಬಲ್ಲ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ಬಹುತೇಕ ವೇಗದ ಬೌಲರ್‌ಗಳು ಬಲಗೈ ಸೀಮರ್‌ಗಳಾಗಿರುವುದರಿಂದ, ಗುಣಮಟ್ಟದ ಎಡಗೈ ವೇಗಿ ತಂಡಕ್ಕೆ ಅಗತ್ಯವಿದೆ. ಅರ್ಷದ್ ಖಾನ್ ಈಗಾಗಲೇ ಶಿಸ್ತುಬದ್ಧ ಬೌಲಿಂಗ್ ಸ್ಪೆಲ್‌ಗಳು ಮತ್ತು ಪರಿಣಾಮಕಾರಿ ಡೆತ್ ಓವರ್ ಬೌಲ್‌ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಒತ್ತಡದ ಸಂದರ್ಭಗಳಲ್ಲಿಯೂ ಯಾರ್ಕರ್‌ಗಳನ್ನು ನಿಖರವಾಗಿ ಎಸೆಯುವ ಹಾಗೂ ಲೈನ್-ಲೆನ್ತ್ ಮೇಲೆ ನಿಯಂತ್ರಣ ಕಾಯ್ದುಕೊಳ್ಳುವ ಅವರ ಸಾಮರ್ಥ್ಯ, ಅವರನ್ನು ಭರವಸೆಯ ವೇಗದ ಬೌಲರ್ ಆಗಿ ಗುರುತಿಸಿದೆ.

ಅರ್ಷದೀಪ್‌ ಸಿಂಗ್‌ ಅವರೊಂದಿಗೆ ಸೇರಿ ಅರ್ಷದ್ ಖಾನ್ ಭಾರತಕ್ಕೆ ಸಮತೋಲಿತ ಮತ್ತು ವೈವಿಧ್ಯಮಯ ವೇಗದ ಬೌಲಿಂಗ್ ದಾಳಿಯನ್ನು ಒದಗಿಸಬಹುದು.

ಲಖನೌದಲ್ಲೇ ಭಾರತಕ್ಕೆ ಸರಣಿ ಗೆಲ್ಲುವ ತವಕ; ನಾಳೆ ದ್ವಿತೀಯ ಏಕದಿನ

ಪ್ರಿನ್ಸ್‌ ಯಾದವ್‌

ಪ್ರಿನ್ಸ್ ಯಾದವ್ ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಹಂತ ಹಂತವಾಗಿ ಮೇಲೇರಿದ್ದಾರೆ. ದೇಶಿ ಟೂರ್ನಿಗಳಲ್ಲಿ ಪಡೆದಿರುವ ಗಮನಾರ್ಹ ವಿಕೆಟ್‌ಗಳ ಸಂಖ್ಯೆ ಹಾಗೂ ಐಪಿಎಲ್‌ ಟೂರ್ನಿಯಲ್ಲಿ ತೋರಿದ ಭರವಸೆಯ ಪ್ರದರ್ಶನಗಳು ಅವರನ್ನು ರಾಷ್ಟ್ರೀಯ ತಂಡದ ಆಯ್ಕೆಯ ಚರ್ಚೆಗೆ ತಂದು ನಿಲ್ಲಿಸಿವೆ.

ಪ್ರಿನ್ಸ್ ಅವರ ಪ್ರಮುಖ ಶಕ್ತಿ ಅವರ ವೈವಿಧ್ಯಮಯ ಬೌಲಿಂಗ್ ಮತ್ತು ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಪಿಚ್‌ನ ಸ್ವಭಾವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಜೊತೆಗೆ, ವೇಗ ಮತ್ತು ಲೆಂಗ್ತ್‌ನಲ್ಲಿ ಬದಲಾವಣೆ ತಂದು ಬ್ಯಾಟರ್‌ಗಳನ್ನು ಮಣಿಸುವ ಕೌಶಲವನ್ನು ಅವರು ಹೊಂದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಇಂತಹ ಗುಣಗಳು ಅತ್ಯಂತ ಅಮೂಲ್ಯವಾಗುತ್ತವೆ. ಏಕೆಂದರೆ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವೇ ಉತ್ತಮ ಬೌಲರ್‌ಗಳು ಮತ್ತು ಶ್ರೇಷ್ಠ ಬೌಲರ್‌ಗಳ ನಡುವಿನ ವ್ಯತ್ಯಾಸವನ್ನು ನಿರ್ಧರಿಸುತ್ತದೆ.