ಲಖನೌದಲ್ಲೇ ಭಾರತಕ್ಕೆ ಸರಣಿ ಗೆಲ್ಲುವ ತವಕ; ನಾಳೆ ದ್ವಿತೀಯ ಏಕದಿನ
IND vs AFG 2nd ODI: 2017 ರಲ್ಲಿ ಸ್ಥಾಪಿತವಾದ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ಇಲ್ಲಿಯವರೆಗೆ ಒಂಬತ್ತು 50-ಓವರ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿದೆ. ಭಾರತ ತಂಡಕ್ಕೆ ಇದು ತವರು ಮೈದಾನದಂತೆ ಕಂಡರೂ, ಅಫ್ಘಾನಿಸ್ತಾನ ಇಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (ನಾಲ್ಕು) ಆಡಿದೆ ಎಂಬುದನ್ನು ಉಲ್ಲೇಖನಿಯ.
IND vs AFG -
ಲಖನೌ, ಜೂ.16: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಲ್ಲಿ ಈಗಾಗಲೇ ಮೊದಲ ಪಂದ್ಯ ಗೆದ್ದು ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಬುಧವಾರ ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳವ ತವಕ ಶುಭಮನ್ ಗಿಲ್ ಪಡೆಯದ್ದಾಗಿದೆ.
ಸರಣಿ ಜೀವಂತವಿರಿಸಲು ಅಫ್ಘಾನಿಸ್ತಾನ ತಂಡಕ್ಕೆ, ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡವಿದೆ. ಪ್ರವಾಸಿ ತಂಡವು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು, ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿ ಭಾರತೀಯ ತಂಡಕ್ಕೆ ನಿಜವಾದ ಸವಾಲನ್ನು ಒಡ್ಡಲು ಪ್ರಯತ್ನಿಸಲಿದೆ. ತಂಡ ಬೌಲಿಂಗ್‌ನಲ್ಲಿ, ರಶೀದ್ ಖಾನ್ ಮತ್ತು ಎಎಂ ಗಜನ್‌ಫರ್ ಅವರ ಉತ್ತಮ ಗುಣಮಟ್ಟದ ಸ್ಪಿನ್ ದಾಳಿಯನ್ನು ನಂಬಿಕೊಂಡಿದೆ. ಶತಕ ಬಾರಿಸಿ ಮಿಂಚಿದ್ದ ಆರಂಭಿಕ ಆಟಗಾರ ರಹ್ಮಾನುಲ್ಲಾ ಗುರ್ಬಾಜ್ ಮೇಲೂ ಭಾರೀ ನಿರೀಕ್ಷೆಯಿದೆ.
ಟೈಮ್ ಜಾಗತಿಕ ಪ್ರಭಾವಿ 100 ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಮೃತಿ ಮಂಧಾನ; ಏಕೈಕ ಭಾರತೀಯ ಕ್ರೀಡಾಪಟು
ಭಾರತ ಎಲ್ಲಾ ವಿಭಾಗದಲ್ಲಿಯೂ ಬಲಿಷ್ಠಬವಾಗಿದೆ. ನಾಯಕ ಶುಭಮನ್ ಗಿಲ್, ಕೆಲ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್, ಪದಾರ್ಪಣಾ ಪಂದ್ಯದಲ್ಲೇ ಮಿಂಚಿದ ಸ್ಪಿನ್ನರ್ ಹರ್ಷ್ ದುಬೆ ಹಾಗೂ ವೇಗಿ ಗುರ್ನೂರ್ ಬ್ರಾರ್ ಎಲ್ಲರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಪಿಚ್ ರಿಪೋರ್ಟ್
2017 ರಲ್ಲಿ ಸ್ಥಾಪಿತವಾದ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ ಇಲ್ಲಿಯವರೆಗೆ ಒಂಬತ್ತು 50-ಓವರ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿದೆ. ಭಾರತ ತಂಡಕ್ಕೆ ಇದು ತವರು ಮೈದಾನದಂತೆ ಕಂಡರೂ, ಅಫ್ಘಾನಿಸ್ತಾನ ಇಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (ನಾಲ್ಕು) ಆಡಿದೆ ಎಂಬುದನ್ನು ಉಲ್ಲೇಖನಿಯ. ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಚೇಸಿಂಗ್ ನಡೆಸಿದ ತಂಡಗಳು ಗೆಲುವು ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವ ಸಾಧ್ಯತೆಯಿದೆ. ಪಿಚ್ ನಿಧಾನಗತಿಯಿಂದ ವರ್ತಿಸುವ ಕಾರಣ ದೊಡ್ಡ ಮೊತ್ತದ ನಿರೀಕ್ಷೆ ಮಾಡುವಂತಿಲ್ಲ.
ಮುಖಾಮುಖಿ
ಒಟ್ಟು ಪಂದ್ಯ-5
ಭಾರತ ಗೆಲುವು-4
ಅಫ್ಘಾನಿಸ್ತಾನ ಗೆಲುವು-0
ಪಂದ್ಯ ರದ್ದು-1
ಸಂಭಾವ್ಯ ತಂಡಗಳು
ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿ.ಕೀ.), ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಇಬ್ರಾಹಿಂ ಜದ್ರಾನ್, ಸೇದಿಕ್ ಅಟಲ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತ್ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಎಎಮ್ ಗಜನ್ಫರ್, ಜಿಯಾವುರ್ ರೆಹಮಾನ್, ಮೊಹಮ್ಮದ್ ಸಲೀಮ್.