ಟಿ20ಐ ಕ್ರಿಕೆಟ್‌ನ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಭಾರತೀಯ ಟಾಪ್ 5 ಬ್ಯಾಟರ್ಸ್!
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡ 48 ರನ್‌ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹಾಗೂ ರಿಂಕು ಸಿಂಗ್ ಸ್ಪೋಟಕ ಬ್ಯಾಟ್ ಮಾಡಿದ್ದರು. ಅಂದ ಹಾಗೆ ಟಿ20ಐ ಪಂದ್ಯದ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್‌ಗಳನ್ನು ಇಲ್ಲಿ ವಿವರಿಸಲಾಗಿದೆ.
1.ಹಾರ್ದಿಕ್ ಪಾಂಡ್ಯ
ಭಾರತ ಪರ ಟಿ20ಐಗಳಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಹಾರ್ದಿಕ್ ಪಾಂಡ್ಯ ಅವರ ಹೆಸರಿನಲ್ಲಿದೆ. ಅವರು 99 ಎಸೆತಗಳನ್ನು ಎದುರಿಸಿ 15 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
2.ರಿಂಕು ಸಿಂಗ್
20ನೇ ಓವರ್‌ನಲ್ಲಿ ಕೇವಲ 38 ಎಸೆತಗಳನ್ನು ಎದುರಿಸಿದ ರಿಂಕು ಸಿಂಗ್ ಈಗ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಟಿ20ಐಗಳಲ್ಲಿ ಭಾರತ ಪರ 20ನೇ ಓವರ್‌ನಲ್ಲಿ ಇವರು 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
3.ಎಂಎಸ್ ಧೋನಿ
ಭಾರತ ಪರ ಟಿ20ಐನ 20ನೇ ಓವರ್‌ನಲ್ಲಿ ಎಂಎಸ್ ಧೋನಿ 132 ಎಸೆತಗಳನ್ನು ಎದುರಿಸಿದ್ದು, 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
4.ಸೂರ್ಯಕುಮಾರ್ ಯಾದವ್
ಭಾರತದ ಪ್ರಸ್ತುತ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 20ನೇ ಓವರ್‌ನಲ್ಲಿ 28 ಎಸೆತಗಳನ್ನು ಆಡಿ 11 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
5.ದಿನೇಶ್ ಕಾರ್ತಿಕ್
ಭಾರತ ಪರ ದಿನೇಶ್ ಕಾರ್ತಿಕ್ 20ನೇ ಓವರ್‌ನಲ್ಲಿ 49 ಎಸೆತಗಳನ್ನು ಎದುರಿಸಿ 9 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.