ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ (INDW vs AUSW) ಕಣಕ್ಕೆ ಇಳಿಯುವ ಮೂಲಕ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet kaur) ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಗುರುವಾರ ಇಲ್ಲಿನ ಮನುಕಾ ಓವಲ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಸಿಡ್ನಿಯಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಮಹಿಳಾ ತಂಡ ಐತಿಹಾಸಿಕ ಗೆಲುವು ಪಡೆದಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ (India women), 19 ರನ್‌ಗಳಿಂದ ಸೋಲು ಅನುಭವಿಸಿತು.
ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಭಾರತ ತಂಡ, ಸಿಡ್ನಿಯಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಮಳೆಯ ನಡುವೆಯೂ ಡೆಕ್‌ವರ್ತ್ ಲೂಯಿಸ್ ಪ್ರಕಾರ 21 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಬಾರಿ ಟಿ20ಐ ಸರಣಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಇದಕ್ಕೂ ಮುನ್ನ 2016ರಲ್ಲಿ ಮಿಥಾಲಿ ರಾಜ್ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾದಲ್ಲಿ ವೈಟ್‌ಬಾಲ್ ಸರೆಣಿಯನ್ನು ಗೆದ್ದಿತ್ತು.
T20 World Cup 2026: ಸೆಮಿಫೈನಲ್ಸ್‌ಗೆ ಪ್ರವೇಶಿಸಬಲ್ಲ 4 ತಂಡಗಳನ್ನು ಆರಿಸಿದ ಗ್ಲೆನ್ ಮೆಗ್ರಾಥ್!
ವಿಶ್ವ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್ ಅವರು 356ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಇದರೊಂದಿಗೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಸ್ವರೂಪದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎನಿಸಿಕೊಂಡರು. ಆ ಮೂಲಕ ನ್ಯೂಜಿಲೆಂಡ್ ದಿಗ್ಗಜೆ ಸೂಝಿ ಬೇಟ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಭಾರತದ ಪರ ಮಿಥಾಲಿ ರಾಜ್ ಅವರು 333 ಪಂದ್ಯಗಳ ಮೂಲಕ ಎಲೈಟ್ ಲಿಸ್ಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿಯರು
ಹರ್ಮನ್‌ಪ್ರೀತ್ ಕೌರ್: ಭಾರತ ಪರ 356 ಪಂದ್ಯಗಳು
ಸೂಝಿ ಬೇಟ್ಸ್: ನ್ಯೂಜಿಲೆಂಡ್ ಪರ 355 ಪಂದ್ಯಗಳು
ಎಲಿಸ್ ಪೆರಿ: ಆಸ್ಟ್ರೇಲಿಯಾ ಪರ 349 ಪಂದ್ಯಗಳು
ಮಿಥಾಲಿ ರಾಜ್: ಭಾರತದ ಪರ 333 ಪಂದ್ಯಗಳು
ಚಾರ್ಲೋಟ್ ಎಡ್ವರ್ಡ್ಸ್: ಇಂಗ್ಲೆಂಡ್ ಪರ 309 ಪಂದ್ಯಗಳು
ಪ್ರಸ್ತುತ ಸೂಝಿ ಬೇಟ್ಸ್ ಹಾಗೂ ಎಲಿಸ್ ಪೆರಿ ಅವರು ಕೂಡ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ಇಬ್ಬರೂ ನಿವೃತ್ತಿ ಘೋಷಿಸುವುದಕ್ಕೂ ಮುನ್ನ ಹರ್ಮನ್‌ಪ್ರೀತ್ ಕೌರ್ ಅವರ ದಾಖಲೆಯನ್ನು ಮುರಿಯಬಹುದು. ಆದರೆ, ಹರ್ಮನ್ ಇನ್ನೂ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ. ಹಾಗಾಗಿ ಇವರು ತಮ್ಮ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುವ ಸಾಧ್ಯತೆ ಇದೆ.