ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಅವರಿನ್ನೂ ಕೆಟ್ಟ ದಿನಗಳನ್ನು ನೋಡಿಲ್ಲʼ: ಶುಭಮನ್‌ ಗಿಲ್‌ಗೆ ಗೌತಮ್‌ ಗಂಭೀರ್‌ ಎಚ್ಚರಿಕೆ!

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಭಾರತ ತಂಡದ ನೂತನ ನಾಯಕ ಶುಭಮನ್‌ ಗಿಲ್‌ಗೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಗಿಲ್‌ ಇನ್ನೂ ತಮ್ಮ ನಾಯಕತ್ವದಲ್ಲಿ ಕಠಿಣ ದಿನಗಳನ್ನು ಎದುರಿಸಿಲ್ಲ. ಆದರೆ, ಕಠಿಣ ದಿನಗಳ ಬಂದಾಗ ಅದನ್ನು ಅವರು ಹೇಗೆ ಎದುರಿಸಲಿದ್ದಾರೆಂಬ ಬಗ್ಗೆ ತೀವ್ರ ಕುತೂಹಲವಿದೆ ಎಂದು ಹೇಳಿದ್ದಾರೆ.

ಶುಭಮನ್‌ ಗಿಲ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಗೌತಮ್‌ ಗಂಭೀರ್‌.

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೂ (IND vs AUS) ಮುನ್ನ ಭಾರತ ಏಕದಿನ ತಂಡದ ನೂತನ ನಾಯಕ ಶುಭಮನ್‌ ಗಿಲ್‌ಗೆ (Shubman Gill) ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಎಚ್ಚರಿಕೆಯನ್ನು ನೀಡಿದ್ದಾರೆ. ಶುಭಮನ್‌ ಗಿಲ್‌ ಟೆಸ್ಟ್‌ ತಂಡದ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಆದರೆ, ಅವರು ಇನ್ನೂ ತಮ್ಮ ನಾಯಕತ್ವದಲ್ಲಿ ಕೆಟ್ಟ ದಿನಗಳನ್ನು ಅನುಭವಿಸಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕೆಟ್ಟ ಸಂದರ್ಭಗಳನ್ನು ಅವರು ಹೇಗೆ ನಿರ್ವಹಿಸಲಿದ್ದಾರೆಂದು ನೋಡಲು ಎದುರು ನೋಡುತ್ತಿದ್ದೇನೆಂದು ಅವರು ತಿಳಿಸಿದ್ದಾರೆ. ಅಕ್ಟೋಬರ್‌ 19 ರಂದು ಭಾನುವಾರ ಮೊದಲನೇ ಪಂದ್ಯದಲ್ಲಿ ಗಿಲ್‌ ಭಾರತ ತಂಡವನ್ನು ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್‌ ಗಿಲ್‌ ಮೊದಲ ಬಾರಿ ಮುನ್ನಡೆಸಿದ್ದರು. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ಭಾರತ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು. ನಂತರ ವೆಸ್ಟ್‌ ಇಂಡೀಸ್‌ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಒಟ್ಟು ಏಳು ಟೆಸ್ಟ್‌ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿದ್ದು, ಎರಡರಲ್ಲಿ ಸೋತಿದ್ದು, ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

ಇತ್ತೀಚೆಗೆ ಭಾರತ ಏಕದಿನ ತಂಡದ ನಾಯಕನಾಗುವ ಮೂಲಕ ರೋಹಿತ್‌ ಶರ್ಮಾ ಅವರ ಸ್ಥಾನವನ್ನು ಶುಭಮನ್‌ ಗಿಲ್‌ ತುಂಬಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಶುಭಮನ್‌ ಗಿಲ್‌ ಭಾರತ ತಂಡವನ್ನು 50 ಓವರ್‌ಗಳ ಸ್ವರೂಪದಲ್ಲಿ ಮುನ್ನಡೆಸಲಿದ್ದಾರೆ. ಈ ಬಗ್ಗೆ ಜಿಯೊ ಸ್ಟಾರ್‌ನಲ್ಲಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮಾತನಾಡಿದ್ದಾರೆ.

"ಇದು ಇನ್ನೂ ಬಹಳ ಆರಂಭಿಕ ದಿನಗಳು- ಅವರು (ಶುಭಮನ್‌ ಗಿಲ್‌) ಇಲ್ಲಿಯವರೆಗೆ ಕೆಲವೇ ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ನಾನು ನೋಡುವ ಪ್ರಮುಖ ಗುಣವೆಂದರೆ ಒತ್ತಡ ಮತ್ತು ಕಠಿಣ ಸಂದರ್ಭಗಳನ್ನು ನಿಭಾಯಿಸುವ ಅವರ ಸಾಮರ್ಥ್ಯ. ಗಿಲ್ ಅವರ ನಾಯಕತ್ವವು ಇನ್ನೂ ಕಠಿಣವಾಗಿದೆ; ಅವರು ನಾಯಕತ್ವದ ಕೆಟ್ಟ ದಿನಗಳನ್ನು ಎದುರಿಸಿಲ್ಲ, ಅದು ಅನಿವಾರ್ಯವಾಗಿ ಬರುತ್ತದೆ. ಇದು ಅವರನ್ನು ವೈಯಕ್ತಿಕವಾಗಿ ಮತ್ತು ನಾಯಕನಾಗಿ ಪರೀಕ್ಷಿಸುತ್ತದೆ ಮತ್ತು ವಿಷಯಗಳು ಅವರ ರೀತಿಯಲ್ಲಿ ನಡೆಯದಿದ್ದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾನು ನೋಡಲು ಬಯಸುತ್ತೇನೆ," ಎಂದು ಗಂಭೀರ್ ಜಿಯೋಸ್ಟಾರ್ ಮೂಲಕ ತಿಳಿಸಿದ್ದಾರೆ.

IND vs AUS 1st ODI: ತಂಡಗಳ ಪ್ಲೇಯಿಂಗ್‌ 11, ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ

"ನಾನು ಯಾವಾಗಲೂ ಅವರನ್ನು ಬೆಂಬಲಿಸಲು, ಪರ ನಿಲ್ಲಲು ಮತ್ತು ರಕ್ಷಿಸಲು ಇಲ್ಲಿದ್ದೇನೆ ಎಂದು ನಾನು ಅವರಿಗೆ ಹೇಳಿದ್ದೇನೆ. ಅವರು ತಂಡಕ್ಕೆ ಸರಿಯಾದ ಕೆಲಸಗಳನ್ನು ಮಾಡುವವರೆಗೆ ಮತ್ತು ಡ್ರೆಸ್ಸಿಂಗ್ ಕೊಠಡಿಯೊಳಗೆ ಆಟಗಾರರೊಂದಿಗೆ ಪಾರದರ್ಶಕ ಮತ್ತು ಪ್ರಾಮಾಣಿಕರಾಗಿರುವವರೆಗೆ, ತರಬೇತುದಾರನಾಗಿ ನನ್ನ ಪಾತ್ರವು ಒತ್ತಡ ಮತ್ತು ಟೀಕೆಗಳನ್ನು ಅವರ ಹೆಗಲ ಮೇಲಿನಿಂದ ತೆಗೆದುಹಾಕುವುದು. ಗೌರವವನ್ನು ಗಳಿಸಲು ಅದು ಅಡಿಪಾಯವಾಗಿದೆ. ಇಲ್ಲಿಯವರೆಗೆ, ಅವರು ಸಂಪೂರ್ಣವಾಗಿ ಅದ್ಭುತವಾಗಿ ಕಂಡಿದ್ದಾರೆ. ಪಾರದರ್ಶಕ, ಮುಂಚೂಣಿಯಲ್ಲಿರುವ, ಕಠಿಣ ಪರಿಶ್ರಮಿ ಮತ್ತು ಸರಿಯಾದ ಕೆಲಸಗಳನ್ನು ಮಾಡುವತ್ತ ಗಮನಹರಿಸಿದ್ದಾರೆ. ಎಲ್ಲವನ್ನೂ ಪಣಕ್ಕಿಡಲು ಸಿದ್ಧರಿರುವ ನಾಯಕನಿಂದ ತರಬೇತುದಾರ ಇನ್ನೇನು ಕೇಳಲು ಸಾಧ್ಯ?" ಅವರು ಶ್ಲಾಘಿಸಿದ್ದಾರೆ.