ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಅರ್ಜುನ್‌ ತೆಂಡೂಲ್ಕರ್‌ ಬಗ್ಗೆ ಮಾತನಾಡಲು ನೀನು ಯಾರು?ʼ: ಅಶ್ವಿನ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

IPL 2026: 19ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪ್ಲೇಯಿಂಗ್‌ XIನಲ್ಲಿ ಅರ್ಜುನ್‌ ತೆಂಡೂಲ್ಕರ್‌ಗೆ ಅವಕಾಶ ಸಿಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್ ಅವರನ್ನು ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಶ್ವಿನ್‌ ವಿರುದ್ಧ ಯೋಗರಾಜ್‌ ಸಿಂಗ್‌ ಗರಂ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 19ನೇ ಆವೃತ್ತಿಯಲ್ಲಿಯೂ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪ್ಲೇಯಿಂಗ್‌ xiನಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ (Arjun Tendulkar) ತೆಂಡೂಲ್ಕರ್‌ಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರಿಗೆ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಅರ್ಜುನ್‌ ಬಗ್ಗೆ ಅಶ್ವಿನ್‌ ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2026ರ ಐಪಿಎಲ್‌ ಟೂರ್ನಿಯು ಮಾರ್ಚ್‌ 28 ರಂದು ಆರಂಭವಾಗಲಿದೆ.

ಅರ್ಜುನ್‌ ತೆಂಡೂಲ್ಕರ್‌ ಅವರು ಮೂರು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಇದೀಗ 2026ರ ಟೂರ್ನಿಯಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರ ಆಡಲಿದ್ದಾರೆ. ಅರ್ಜುನ್‌ ದೇಶಿ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಿದ್ದು, ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಿಂದ ಮೂರು ವಿಕೆಟ್ ಪಡೆದಿದ್ದ ಅವರು, 2024ರ ಐಪಿಎಲ್ ಟೂರ್ನಿಯಲ್ಲಿ ಆಡಿದ ಏಕೈಕ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. 2026ರ ಐಪಿಎಲ್‌ ಹರಾಜಿನಲ್ಲಿ ಅವರನ್ನು 30 ಲಕ್ಷ ರು. ಗಳಿಗೆ ಲಖನೌ ಸೂಪರ್‌ ಜಯಂಟ್ಸ್‌ ಖರೀದಿಸಿತು.

IPL 2026: ʻವಿರಾಟ್‌ ಕೊಹ್ಲಿಯನ್ನು ನೋಡಿ ಕಲಿಯಿರಿʼ-ಅಜಿಂಕ್ಯ ರಹಾನೆಗೆ ಮೊಹಮ್ಮದ್‌ ಕೈಫ್‌ ಪಾಠ!

ಇದೀಗ ಭಾರತದ ಸ್ಪಿನ್ ದಿಗ್ಗಜ ಆರ್‌ ಅಶ್ವಿನ್, ಲಖನೌ ಸೂಪರ್‌ ಜಯಂಟ್ಸ್ ತಂಡದಲ್ಲಿ ಈಗಾಗಲೇ ಉತ್ತಮ ಭಾರತೀಯ ವೇಗದ ಬೌಲರ್‌ಗಳು ಇದ್ದಾರೆ, ಹಾಗಾಗಿ ಅರ್ಜುನ್‌ ತೆಂಡೂಲ್ಕರ್‌ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಗುವುದು ಕಷ್ಟವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಅರ್ಜುನ್ ತೆಂಡುಲ್ಕರ್ ಆಡಲೇ ಇಲ್ಲ, ಅದನ್ನು ಬಿಟ್ಟುಬಿಡೋಣ. ಈ ತಂಡದಲ್ಲಿ ಮಯಾಂಕ್‌ ಯಾದವ್‌, ಮೊಹ್ಸಿನ್‌ ಖಾನ್‌, ಆವೇಶ್‌ ಖಾನ್‌ ಮತ್ತು ಮೊಹಮ್ಮದ್‌ ಶಮಿ ಇದ್ದಾರೆ. ಇಷ್ಟು ವೇಗದ ಬೌಲರ್‌ಗಳು ಇದ್ದಾಗ ಅವರು ಹೇಗೆ ಆಡುತ್ತಾರೆ? ವೇಗದ ಬೌಲರ್‌ಗಳ ಪೈಕಿ ಕೆಲವರು ಗಾಯಕ್ಕೆ ತುತ್ತಾಗಾದ ಹೊರತು ಅರ್ಜುನ್‌ ತೆಂಡೂಲ್ಕರ್‌ಗೆ ಅವಕಾಶ ಸಿಗುತ್ತದೆ ಎಂದು ನನಗೆ ಅನಿಸುತ್ತಿಲ್ಲ,” ಎಂದು ಅವರು ತಿಳಿಸಿದ್ದಾರೆ.

IPL 2026: 13,600 ಕೋಟಿ ರುಗೆ ಅಮೆರಿಕಾ ಮೂಲದ ಉದ್ಯಮಿ ಪಾಲಾದ ರಾಜಸ್ಥಾನ್‌ ರಾಯಲ್ಸ್?

ಆರ್‌ ಅಶ್ವಿನ್‌ಗೆ ಯೋಗರಾಜ್‌ ತಿರುಗೇಟು

ಅಶ್ವಿನ್‌ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಯೋಗರಾಜ್‌ ಸಿಂಗ್, ಅರ್ಜುನ್‌ ತೆಂಡೂಲ್ಕರ್‌ ಕುರಿತು ಮಾಡಿದ ಅಭಿಪ್ರಾಯವನ್ನು ತಿರಸ್ಕರಿಸಿದರು.

“ಅವರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಈ ಆಶ್ವಿನ್ ಯಾರೇ ಆಗಿರಲಿ, ಯಾರ ಬಗ್ಗೆ ಏನು ಮಾತನಾಡಬೇಕು ಎಂಬುದು ಗೊತ್ತಿರಬೇಕು. ಟಿವಿಯಲ್ಲಿ ಕುಳಿತು ‘ಇವರು ಇದನ್ನು ಮಾಡಲಾರ, ಅದನ್ನು ಮಾಡಲಾರ’ ಎಂದು ಹೇಳುವುದು ಸರಿಯಲ್ಲ. ಅರೆ, ನೀನು ಯಾರು?” ಎಂದು ಯೋಗರಾಜ್‌ ಸಿಂಗ್‌ ಇನ್‌ಸೈಡ್‌ ಸ್ಪೋರ್ಟ್ಸ್‌‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

IPL 2026: 16,706 ಕೋಟಿ ರು. ಗಳಿಗೆ ಮಾರಾಟವಾದ ಆರ್‌ಸಿಬಿ, ಅತ್ಯಂತ ದುಬಾರಿ ಫ್ರಾಂಚೈಸಿ!

“ಕ್ರಿಕೆಟಿಗರು ಹೀಗೆ ಮಾತನಾಡಿದಾಗ... ಅವರು ಸಚಿನ್ ತೆಂಡುಲ್ಕರ್ ಮಗ ಎಂಬುದು ಬೇರೆ ವಿಷಯ. ಆದರೆ ನೀವು ಎಲ್ಲರೂ ತಪ್ಪು ದಿಕ್ಕಿನಲ್ಲಿ ಯೋಚಿಸುತ್ತಿದ್ದೀರಿ. ಅವರು ಬೌಲರ್ ಅಲ್ಲ. ಅವರಿಗೆ ಬೆನ್ನುಹುರಿ ಸಮಸ್ಯೆ ಇತ್ತು, ಅದರಿಂದ ಅವರ ಕೈ 45 ಡಿಗ್ರಿಯಿಂದ ಕೆಳಗೆ ಬರುತ್ತದೆ. ಅವರು ನನ್ನ ಬಳಿ ಇದ್ದಾಗ, ನಾನು ಅವರಿಗೆ ಹಾಗೂ ಗೋವಾ ತಂಡದ ಕೋಚ್‌ಗೆ ಇದನ್ನೇ ಹೇಳಿದ್ದೆ. ಅವರು ಬ್ಯಾಟ್‌ ಮಾಡುವಾಗ ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಹೊಡೆಯುತ್ತಿದ್ದ. ನಾನು ಕೋಚ್‌ಗೆ ‘ನೀವು ಏನು ಮಾಡುತ್ತಿದ್ದೀರಿ? ಆಗದಿದ್ದರೆ ಅವರನ್ನು ನನ್ನ ಬಳಿ ಕಳುಹಿಸಿ ಎಂದು ಹೇಳಿದ್ದೆ,” ಎಂದು ಅವರು ತಿಳಿಸಿದ್ದಾರೆ.

"ಅರ್ಜುನ್‌ ನನ್ನೊಂದಿಗೆ ಆರು ತಿಂಗಳು ತರಬೇತಿ ಪಡೆದರೆ, ಜಗತ್ತಿನ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಮೀರಿಸುತ್ತಾರೆ ಎಂದು ನಾನು ಸವಾಲು ಹಾಕುತ್ತೇನೆ. ಆಗದಿದ್ದರೆ, ನಾನು ನನ್ನ ಗಡ್ಡವನ್ನು ಕತ್ತರಿಸಿ ತೂರಿಬಿಡುತ್ತೇನೆ. ಇದೇ ನನ್ನ ಕೆಲಸ ಮಾಡುವ ವಿಧಾನ,” ಎಂದು ಯೋಗರಾಜ್‌ ಸಿಂಗ್‌ ಹೇಳಿದ್ದಾರೆ.