IPL 2026: 13,600 ಕೋಟಿ ರುಗೆ ಅಮೆರಿಕಾ ಮೂಲದ ಉದ್ಯಮಿ ಪಾಲಾದ ರಾಜಸ್ಥಾನ್ ರಾಯಲ್ಸ್?
Rajasthan Royals Sold: ಅಮೇರಿಕ ನೇತೃತ್ವದ ಒಂದು ಗುಂಪು ರಾಜಸ್ತಾನ್ ರಾಯಲ್ಸ್ ತಂಡವನ್ನು 1.63 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ಖರೀದಿಸಿದ್ದು, ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದೆ ಎಂದು ವೆರದಿಯಾಗಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜು ಪ್ರಕ್ರಿಯೆ ತೀವ್ರಗೊಳ್ಳುತ್ತಿದ್ದು, 2025ರ ಐತಿಹಾಸಿಕ ಜಯದ ಬಳಿಕ ತಂಡದ ಮೌಲ್ಯ ಯುಎಸ್ ಡಾಲರ್ 2 ಬಿಲಿಯನ್ ಅನ್ನು ಮೀರಲಿದೆ ಎಂಬ ನಿರೀಕ್ಷೆ ಇದೆ.
ರಾಜಸ್ಥಾನ್ ರಾಯಲ್ಸ್ ತಂಡ ಯುಎಸ್ ಮೂಲದ ಕಂಪನಿಗೆ ಮಾರಾಟ. -
ನವದೆಹಲಿ: ಭಾರತೀಯ ಮೂಲದ ಅಮೇರಿಕನ್ ಉದ್ಯಮಿ ಕಲ್ ಸೋಮಾನಿ (Kal Somani) ನೇತೃತ್ವದ ಗುಂಪು ರಾಜಸ್ಥಾನ್ ರಾಯಲ್ಸ್ (Rajasthan Royals) ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಿಡ್ ಅನ್ನು ಗೆದ್ದಿದೆ. ಐಪಿಎಲ್‌ನ ಉದ್ಘಾಟನಾ ಚಾಂಪಿಯನ್ ತಂಡಕ್ಕಾಗಿ ಒಕ್ಕೂಟವು ಯುಎಸ್ ಡಾಲರ್ 1.63 ಬಿಲಿಯನ್ ಬಿಡ್ ಮಾಡಿದೆ ಎಂದು ವರದಿಯಾಗಿದೆ. ಇದು ಭಾರತೀಯ ರುಪಾಯಿ ಮೌಲ್ಯದಲ್ಲಿ 13,600 ಕೋಟಿ ರು. ಗಳಿಗೆ ಸಮ. 2026 ರ ಐಪಿಎಲ್ (IPL 2026) ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ರಿಯಾನ್ ಪರಾಗ್ ನಾಯಕತ್ವದಲ್ಲಿ ಮೈದಾನಕ್ಕೆ ಇಳಿಯಲಿದೆ. ಲೀಗ್ ಮಾರ್ಚ್ 28 ರಂದು ಪ್ರಾರಂಭವಾಗಲಿದೆ.
ಅಮೆರಿಕನ್ ಉದ್ಯಮಿ ರಾಬ್ ವಾಲ್ಟನ್ ಮತ್ತು ಹ್ಯಾಂಪ್ ಕುಟುಂಬವು ಸಹ ಕಲ್ ಸೋಮಾನಿ ಗುಂಪಿನ ಭಾಗವಾಗಿದೆ. ರಾಬ್ ವಾಲ್ಟನ್ ವಾಲ್ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್ ಅವರ ಹಿರಿಯ ಮಗ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಾಬ್ ವಾಲ್ಟನ್ ಅವರ ನಿವ್ವಳ ಮೌಲ್ಯ ಯುಎಸ್ ಡಾಲರ್ 146 ಬಿಲಿಯನ್ ಆಗಿದೆ. ಕಲ್ ಸೋಮಾನಿ ಈಗಾಗಲೇ ರಾಜಸ್ಥಾನ್ ರಾಯಲ್ಸ್‌ನಲ್ಲಿ ಹೂಡಿಕೆದಾರರಾಗಿದ್ದರು; ಅವರು ಮೊದಲು 2021 ರಲ್ಲಿ ಫ್ರಾಂಚೈಸಿಯಲ್ಲಿ ಪಾಲನ್ನು ಪಡೆದಿದ್ದರು. ಆ ಸಮಯದಲ್ಲಿ, ಸೋಮಾನಿ, "ಈ ಹೂಡಿಕೆಯಲ್ಲಿ ನಾವು ಅಪಾರ ಸಾಮರ್ಥ್ಯವನ್ನು ನೋಡುತ್ತೇವೆ ಮತ್ತು ಐಪಿಎಲ್‌ನ ಭವಿಷ್ಯದ ಬಗ್ಗೆ ಉತ್ಸುಕರಾಗಿದ್ದೇವೆ" ಎಂದು ಹೇಳಿದ್ದರು.
IPL 2026: ಜೈಸ್ವಾಲ್, ವೈಭವ್ ಜೋಡಿಯ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
ರಾಜಸ್ಥಾನ್ ರಾಯಲ್ಸ್ ಖರೀದಿದಾರ ಕಲ್ ಸೋಮಾನಿ ಯಾರು?
ಕಲ್ ಸೋಮಾನಿ ಅಮೆರಿಕದ ಅರಿಜೋನಾದ ಸ್ಕಾಟ್ಸ್‌ಡೇಲ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಭಾರತದಲ್ಲಿ ಜನಿಸಿದ್ದರು. ಅವರು 16 ನೇ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. 1998 ರಲ್ಲಿ ಅವರು ಭಾರತದಿಂದ ಯುನೈಟೆಡ್ ಸ್ಟೇಟ್ಸ್‌ಗೆ ತೆರಳಿದ್ದರು.
ಕಲ್ ಸೋಮಾನಿ ಕಳೆದ 15 ವರ್ಷಗಳಿಂದ ಎಡ್‌ಟೆಕ್, ಡೇಟಾ ಗೌಪ್ಯತೆ, AI ಆಡಳಿತ ಮತ್ತು ಕ್ರೀಡಾ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದ ಉದ್ಯಮಗಳನ್ನು ಸ್ಥಾಪಿಸಿ ಮತ್ತು ಮುನ್ನಡೆಸುತ್ತಿದ್ದಾರೆ. ಅವರು ಜಾಗತಿಕ ತಂತ್ರಜ್ಞಾನ ಸೇವೆಗಳ ಸಂಸ್ಥೆ ಇಂಟ್ರಾಎಡ್ಜ್, ಗೌಪ್ಯತೆ ಅನುಸರಣೆ ವೇದಿಕೆ ಟ್ರುಯೊ, AI ಆಡಳಿತ ಸಂಸ್ಥೆ ಟ್ರುಯೊ.ಐ ಮತ್ತು ಎಡ್‌ಟೆಕ್ ಸೇವಾ ಪೂರೈಕೆದಾರ ಅಕಾಡೆಮಿಯನ್‌ನ ಸ್ಥಾಪಕರಾಗಿದ್ದಾರೆ. ಹೆಚ್ಚುವರಿಯಾಗಿ, ಅವರು ಮೋಟಾರ್ ಸಿಟಿ ಗಾಲ್ಫ್ ಕ್ಲಬ್‌ನ ಸಹ-ಮಾಲೀಕರಾಗಿದ್ದಾರೆ ಮತ್ತು ಟಿಎಂಆರ್‌ಡಬ್ಲ್ಯೂ ಸ್ಪೋರ್ಟ್ಸ್ ಮತ್ತು ಟಿಜಿಎಲ್ ಗಾಲ್ಫ್ ಲೀಗ್‌ನಲ್ಲಿ ಆರಂಭಿಕ ಹೂಡಿಕೆದಾರರಾಗಿದ್ದಾರೆ.
IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕಠಿಣ ನಿಯಮ ಜಾರಿ; ಬೆಂಗಳೂರು ಕಮಿಷನರ್ ಮಹತ್ವದ ಸುದ್ದಿಗೋಷ್ಠಿ
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಪಯಣ
ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 2008ರಲ್ಲಿ ಚೊಚ್ಚಕ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆದಾಗ್ಯೂ, ತಂಡದ ಪ್ರದರ್ಶನವು ತರುವಾಯ ಕುಸಿಯಲು ಪ್ರಾರಂಭಿಸಿತು. ಅಂದಿನಿಂದ, ತಂಡ 2022 ರಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು. 2016 ಮತ್ತು 2017ರ ಋತುಗಳಲ್ಲಿ ರಾಜಸ್ಥಾನ್ ರಾಯಲ್ಸ್ ನಿಷೇಧವನ್ನು ಎದುರಿಸಿತ್ತು.