ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs SRH: ʻಫಿಲ್‌ ಸಾಲ್ಟ್‌ ಪಡೆದ ಕ್ಯಾಚ್‌ ವಿವಾದʼ-ಮೂರನೇ ಅಂಪೈರ್‌ ವಿರುದ್ಧ ಹೆನ್ರಿಚ್‌ ಕ್ಲಾಸೆನ್‌ ಆಕ್ರೋಶ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವಣ ಪಂದ್ಯದಲ್ಲಿ ಹೆನ್ರಿಚ್‌ ಕ್ಲಾಸೆನ್‌ ಅವರ ಕ್ಯಾಚ್‌ ವಿವಾದಕ್ಕೆ ಕಾರಣವಾಗಿದೆ. ಫಿಲ್‌ ಸಾಲ್ಟ್‌ ಪಡೆದ ಕ್ಯಾಚ್ ಕುರಿತು ಅಭಿಪ್ರಾಯಗಳು ವಿಭಜನೆಯಾಗಿದ್ದು, ಅದು ನ್ಯಾಯಸಮ್ಮತವೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಹೆನ್ರಿಚ್‌ ಕ್ಲಾಸೆನ್‌ ಅಂಪೈರ್‌ಗಳ ವಿರುದ್ಧ ಅಸಮಾಧಾನ.

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ದೊಡ್ಡ ವಿವಾದ ಉಂಟಾಯಿತು. ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs SRH) ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮಾರ್ಚ್ 28) ನಡೆದಿದ್ದ ಪಂದ್ಯದಲ್ಲಿ ಹೆನ್ರಿಚ್‌ ಕ್ಲಾಸೆನ್‌ ( Heinrich Klaasen) ಅವರ ಕ್ಯಾಚ್‌ ವಿವಾದವನ್ನು ಹುಟ್ಟು ಹಾಕಿದೆ. ಅಲ್ಲದೆ ಅಭಿಮಾನಿಗಳು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಭಾರೀ ಚರ್ಚೆಗಳನ್ನು ನಡೆಸುತ್ತಿದ್ದಾರೆ.

ಜೇಕಬ್‌ ಡಫಿ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ್ದ ಎಸ್‌ಆರ್‌ಎಚ್‌ ತಂಡ, ಬಹುಬೇಗ ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಅವರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇಶಾನ್‌ ಕಿಶನ್‌ ಅವರ ಜೊತೆ ನಾಲ್ಕನೇ ವಿಕೆಟ್‌ಗೆ 53 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟವನ್ನು ಆಡಿದ ಹೆನ್ರಿಚ್‌ ಕ್ಲಾಸೆನ್‌ 31 ರನ್‌ಗಳನ್ನು ಗಳಿಸಿದ್ದರು. ಆದರೆ, 14ನೇ ಓವರ್‌ನ ಮೊದಲನೇ ಎಸೆತದಲ್ಲಿ ರೊಮ್ಯಾರಿಯೊ ಶೆಫರ್ಡ್‌ ಎಸೆತದಲ್ಲಿ ಸಿಕ್ಸರ್‌ ಬಾರಿಸಲು ಹೋಗಿ ಬೌಂಡರಿ ಲೈನ್‌ ಬಳಿ ಫಿಲ್‌ ಸಾಲ್ಟ್‌ಗೆ ಕ್ಯಾಚ್‌ ಕೊಟ್ಟರು.

RCB vs SRH: ಬೌಂಡರಿ ಲೈನ್‌ನಲ್ಲಿ ಇಶಾನ್‌ ಕಿಶನ್‌ರ ಸ್ಟನಿಂಗ್‌ ಕ್ಯಾಚ್‌ ಪಡೆದ ಫಿಲ್‌ ಸಾಲ್ಟ್‌! ವಿಡಿಯೊ

ದಕ್ಷಿಣ ಆಫ್ರಿಕಾ ಆಟಗಾರ ಪುಲ್‌ ಶಾಟ್‌ ಹೊಡೆದರು ಹಾಗೂ ನೋಡಲು ಚೆಂಡು ಸುಲಭವಾಗಿ ಸಿಕ್ಸರ್‌ಹೋಗುವ ಹಾದಿಯಲ್ಲಿತ್ತು. ಆದರೆ, ಮಿಡ್‌ ವಿಕೆಟ್‌ ಬೌಂಡರಿ ಬಳಿ ಫಿಲ್‌ ಸಾಲ್ಟ್‌ ಅದ್ಭುತವಾಗಿ ವರ್ತಿಸಿದರು. ಅವರು ಬೌಂಡರಿ ಲೈನ್‌ಗೆ ಸನಿಹದಲ್ಲಿ ಕ್ಯಾಚ್‌ ಪಡೆದು ನೆಲಕ್ಕೆ ಉರುಳಿದರು. ಈ ವೇಳೆ ಅವರು ಬೌಂಡರಿ ಲೈನ್‌ಗೆ ತಾಗಿರುವ ರೀತಿ ಕಂಡು ಬರುತ್ತಿದ್ದರು. ಇದನ್ನು ಗಮನಿಸಿದ ಫೀಲ್ಡ್‌ ಅಂಪೈರ್‌ಗಳು ಕೂಡ ಗೊಂದಲಕ್ಕೆ ಒಳಗಾದರು ಹಾಗೂ ತೀರ್ಪಿಗಾಗಿ ಮೂರನೇ ಅಂಪೈರ್‌ ಮೋರೆ ಹೋದರು.



ಮೂರನೇ ಅಂಪೈರ್‌ ಹಲವು ಬಾರಿ ವಿಡಿಯೊ ರೀಪ್ಲೆ ನೋಡುವ ಮೂಲಕ ಫಿಲ್‌ ಸಾಲ್ಟ್‌ ಪಡೆದ ಕ್ಯಾಚ್‌ ನ್ಯಾಯಯುತವಾಗಿದೆ ಎಂದು ಪರದೆಯ ಮೇಲೆ ಪ್ರಕಟಿಸಿದರು. ಆದರೆ, ಹೆನ್ರಿಚ್‌ ಕ್ಲಾಸೆನ್‌ಗೆ ಈ ತೀರ್ಪು ತೃಪ್ತಿ ನೀಡಲಿಲ್ಲ. ಅವರು ಡ್ರೆಸ್ಸಿಂಗ್‌ ರೂಂಗೆ ತೆರಳುವ ಹಾದಿಯಲ್ಲಿ ಎದುರಾದ ನಾಲ್ಕನೇ ಅಂಪೈರ್‌ ಬಳಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ವಿವಿಧ ಭಂಗಿಗಳಲ್ಲಿ ಕ್ಯಾಚ್‌ ಅನ್ನು ಪರಿಶೀಲಿಸಬೇಕಾಗಿತ್ತು ಎಂಬುದು ದಕ್ಷಿಣ ಆಫ್ರಿಕಾ ಆಟಗಾರನ ವಾದವಾಗಿತ್ತು. ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು, ಸಾಲ್ಟ್‌ ಅವರ ಕಾಲು ಬೌಂಡರಿ ಲೈನ್‌ಗೆ ತಗುಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಕಾಲು ಬೌಂಡರಿ ಲೈನ್‌ಗೆ ತಾಗಿಲ್ಲ, ಅದು ನೆರಳು ಎಂದು ಹೇಳುತ್ತಿದ್ದಾರೆ.



201 ರನ್‌ ಕಲೆ ಹಾಕಿದ ಸನ್‌ರೈಸರ್ಸ್‌

ಪಂದ್ಯದ ಕುರಿತು ಮಾತನಾಡುವುದಾದರೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 201 ರನ್‌ಗಳನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ನಾಯಕತ್ವದ ಡೆಬ್ಯೂ ಮಾಡಿದ Ishan Kishan ಗಮನಸೆಳೆದರು. 27 ವಯಸ್ಸಿನ ಅವರು, ನಿಯಮಿತವಾಗಿ ವಿಕೆಟ್‌ ಬಿದ್ದರೂ ಕೇವಲ 38 ಎಸೆತಗಳಲ್ಲಿ 80 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು. ಕೊನೆಯ ಹಂತದಲ್ಲಿ ಅನಿಕೇತ್‌ ವರ್ಮಾ 18 ಚೆಂಡುಗಳಲ್ಲಿ 43 ರನ್‌ಗಳ ವೇಗದ ಇನಿಂಗ್ಸ್ ಆಡಿದ್ದು, ಇದರಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು.