RCB vs SRH: ಬೌಂಡರಿ ಲೈನ್‌ನಲ್ಲಿ ಇಶಾನ್ ಕಿಶನ್ರ ಸ್ಟನಿಂಗ್ ಕ್ಯಾಚ್ ಪಡೆದ ಫಿಲ್ ಸಾಲ್ಟ್! ವಿಡಿಯೊ
ಆರ್‌ಸಿಬಿ ತಂಡದ ಫಿಲ್ ಸಾಲ್ಟ್ 2026ರ ಐಪಿಎಲ್ ಮೊದಲ ಪಂದ್ಯದಲ್ಲೇ ಎರಡು ಅದ್ಭುತ ಕ್ಯಾಚ್‌ಗಳನ್ನು ಪಡೆದಿದ್ದಾರೆ. ತಮ್ಮ ಫೀಲ್ಡಿಂಗ್ ಪರಾಕ್ರಮದ ಮೂಲಕ, ಅವರು ಮೊದಲು ಹೆನ್ರಿಚ್ ಕ್ಲಾಸೆನ್ ಮತ್ತು ನಂತರ ಇಶಾನ್ ಕಿಶನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಅದರಲ್ಲಿಯೂ ಇಶಾನ್ ಕಿಶನ್ ಅವರ ಬೌಂಡರಿ ಲೈನ್‌ನಲ್ಲಿ ಪಡೆದ ಸ್ಟನಿಂಗ್ ಕ್ಯಾಚ್ ಐಪಿಎಲ್ ಇತಿಹಾಸದ ಅತ್ಯಂತ ಶ್ರೇಷ್ಠ ಕ್ಯಾಚ್‌ಗಳಲ್ಲಿ ಒಂದೆನಿಸಿತು.
ಇಶಾನ್ ಕಿಶನ್ರ ಸ್ಟನಿಂಗ್ ಕ್ಯಾಚ್ ಪಡದ ಫಿಲ್ ಸಾಲ್ಟ್. -
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ (IPL 2026) ಮೊದಲ ಪಂದ್ಯದಲ್ಲಿಯೇ ಫಿಲ್ ಸಾಲ್ಟ್ 'ಕ್ಯಾಚ್ ಆಫ್ ದಿ ಸೀಸನ್' ಪ್ರಶಸ್ತಿಗಾಗಿ ತಮ್ಮ ಬಲವಾದ ಹಕ್ಕನ್ನು ಚಲಾಯಿಸಿದ್ದಾರೆ. ಶನಿವಾರ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ(RCB vs SRH) ಫಿಲ್ ಸಾಲ್ಟ್ (Phil Salt) ಸತತ ಎರಡು ಅದ್ಭುತ ಕ್ಯಾಚ್‌ಗಳನ್ನು ಪಡೆದರು. ಮೊದಲು, ಅವರು ಸ್ಫೋಟಕ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ಅವರ ಕ್ಯಾಚ್ ಅನ್ನು ಪಡೆದರು. ನಂತರ, ಅವರು ಇಶಾನ್ ಕಿಶನ್ ಅವರ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಹಾರಿ ಒಂದೇ ಕೈಯಿಂದ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.
ಆರ್‌ಸಿಬಿ ಪರ ರೊಮಾರಿಯೊ ಶೆಫರ್ಡ್ 14ನೇ ಓವರ್ ಬೌಲ್ ಮಾಡಿದರು. ಶೆಫರ್ಡ್ ಅವರ ಮೊದಲ ಎಸೆತದಲ್ಲಿ ಹೆನ್ರಿಚ್ ಕ್ಲಾಸೆನ್ ಮಿಡ್-ವಿಕೆಟ್ ಕಡೆಗೆ ಹೊಡೆದರು. ಚೆಂಡು ಅಪಾಯಕಾರಿಯಾಗಿ ಬೌಂಡರಿ ಲೈನ್‌ನ ಹತ್ತಿರ ಸಾಗುತ್ತಿತ್ತು. ಫಿಲ್ ಸಾಲ್ಟ್ ಅದ್ಭುತವಾಗಿ ಕ್ಯಾಚ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆನ್-ಫೀಲ್ಡ್ ಅಂಪೈರ್ ಔಟ್ ಅಥವಾ ನಾಟ್ ಔಟ್ ನಿರ್ಧಾರ ತೆಗೆದುಕೊಳ್ಳಲು ಮೂರನೇ ಅಂಪೈರ್‌ಗೆ ಮೊರೆ ಹೋದರು. ಮೂರನೇ ಅಂಪೈರ್ ವಿಡಿಯೊ ಪರಿಶೀಲಿಸಿದ ನಂತರ, ಕ್ಲಾಸೆನ್ ಅವರನ್ನು ಔಟ್ ಎಂದು ತೀರ್ಪು ನೀಡಿದರು. ಕ್ಲಾಸೆನ್ ಈ ನಿರ್ಧಾರದಿಂದ ತೃಪ್ತರಾಗಲಿಲ್ಲ. ಅವರು 22 ಎಸೆತಗಳಲ್ಲಿ 31 ರನ್ ಗಳಿಸಿದ ಬಳಿಕ ಪೆವಿಲಿಯನ್‌ಗೆ ಮರಳಿದರು.
IPL 2026: ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅಭಿನಂದನ್ ಸಿಂಗ್ ಯಾರು!
ಒಂದೇ ಕೈನಲ್ಲಿ ಸ್ಟನಿಂಗ್ ಕ್ಯಾಚ್ ಪಡೆದ ಫಿಲ್ ಸಾಲ್ಟ್
ಮೊದಲನೇ ಕ್ಯಾಚ್‌ಗೆ ಫಿಲ್ ಸಾಲ್ಟ್ ತೃಪ್ತರಾಗಲಿಲ್ಲ. ಇದರ ನಂತರ, ಅವರು ಕೇವಲ ಒಂದು ಕೈಯಿಂದ ಅದ್ಭುತವಾದ ಫ್ಲೈಯಿಂಗ್ ಕ್ಯಾಚ್ ಪಡೆದರು. ಆ ಕ್ಯಾಚ್ ಇಶಾನ್ ಕಿಶನ್ ಅವರದ್ದಾಗಿತ್ತು. ಹೈದರಾಬಾದ್ ನಾಯಕ ಸ್ಫೋಟಕ ಬ್ಯಾಟ್ ಮಾಡುತ್ತಿದ್ದರು. ಅಭಿನಂದನ್ ಸಿಂಗ್ ಅವರ ಎಸೆತದಲ್ಲಿ ಇಶಾನ್ ಕಿಶನ್ ತಮ್ಮ ಬ್ಯಾಟ್‌ನ ಮುಖ ತೆರೆದು ಚೆಂಡನ್ನು ಪಾಯಿಂಟ್ ಪ್ರದೇಶದ ಕಡೆಗೆ ಮೇಲಕ್ಕೆತ್ತಿದರು. ಬಲ ಭಾಗಕ್ಕೆ ಓಡಿ ಬಂದ ಫಿಲ್ ಸಾಲ್ಟ್ ಬಲಗೈನಿಂದ ಚೆಂಡನ್ನು ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಫಿಲ್ ಸಾಲ್ಟ್ ಅವರ ಈ ಕ್ಯಾಚ್ 2026ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ. ಎಸ್‌ಆರ್‌ಎಚ್ ನಾಯಕ ಇಶಾನ್ ಕಿಶನ್, ಕೇವಲ 38 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್ ಗಳೊಂದಿಗೆ 80 ರನ್ ಗಳಿಸಿದರು.
CATCH OF THE TOURNAMENT. 🥶
— Mufaddal Vohra (@mufaddal_vohra) March 28, 2026
- Phil Salt has produced one of the greatest catches on Day 1 of IPL 2026. 🤯pic.twitter.com/qdcVniVfWR
201 ರನ್ ಕಲೆ ಹಾಕಿದ ಸನ್‌ರೈಸರ್ಸ್ ಹೈದರಾಬಾದ್
ಇನ್ನು ಇಶಾನ್ ಕಿಶನ್ (80 ರನ್) ಹಾಗೂ ಅನಿಕೇತ್ ವರ್ಮಾ (43 ರನ್) ಅವರ ಬ್ಯಾಟಿಂಗ್ ಬಲದಿಂದ ಸನ್‌ರೈಸರ್ಸ್ ತಂಡ, 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕ 201 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿ ತಂಡಕ್ಕೆ 202 ರನ್‌ಗಳ ಗುರಿಯನ್ನು ನೀಡಿತು. ಹೆನ್ರಿಚ್ ಕ್ಲಾಸೆನ್ 31 ರನ್‌ಗಳನ್ನು ಗಳಿಸಿದರು. ಆರ್‌ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಜೇಕಬ್ ಡಫಿ ಅವರು 4 ಓವರ್‌ಗಳಿಗೆ 22 ರನ್ ನೀಡಿ ಮೂರು ವಿಕೆಟ್ ಪಡೆದರೆ, ರೊಮ್ಯಾರಿಯೊ ಶೆಫರ್ಡ್ 4 ಓವರ್‌ಗಳಿಗೆ 54 ರನ್ ನೀಡಿದರೂ ಮೂರು ವಿಕೆಟ್ ಕಿತ್ತರು.