ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: 5 ಪ್ರಶಸ್ತಿಗಳಿಂದ 55 ಲಕ್ಷ ರು, ವೈಭವ್‌ ಸೂರ್ಯವಂಶಿ ಗಳಿಸಿದ್ದು ಒಟ್ಟು ಎಷ್ಟು ಕೋಟಿ ರು ಗೊತ್ತೆ?

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಬಹುತೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಐದು ಪ್ರಶಸ್ತಿಗಳ ಜೊತೆಗೆ ನಗದು ಬಹುಮಾನ 55 ಲಕ್ಷ ರುಗಳನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ಈ ಟೂರ್ನಿಯಲ್ಲಿ ಒಟ್ಟು ಎಷ್ಟು ಹಣವನ್ನು ಗಳಿಸಿದ್ದಾರೆಂದು ಇಲ್ಲಿ ವಿವರಸಲಾಗಿದೆ.

2026ರ ಐಪಿಎಲ್‌ನಲ್ಲಿ ವೈಭವ್‌ ಸೂರ್ಯವಂಶಿಗೆ ಸೇರಿದ್ದು ಎಷ್ಟು ಕೋಟಿ ರು ಗೊತೆ?

ಅಹಮದಬಾದ್‌: ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ತಮ್ಮ ವೃತ್ತಿ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಅವರು ಒಟ್ಟು ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 776 ರನ್‌ಗಳ ಮೂಲಕ ಆರೆಂಜ್‌ ಕ್ಯಾಪ್‌ ಸೇರಿ ಒಟ್ಟು 5 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. 2025ರ ಮೆಗಾ ಹರಾಜಿನಲ್ಲಿ 15ನೇ ವಯಸ್ಸಿನ ವೈಭವ್‌ ಅವರನ್ನು ರಾಜಸ್ಥಾನ್‌ ರಾಯಲ್ಸ್‌ ತಂಡ 1.10 ಕೋಟಿ ರು. ಗಳಿಗೆ ಖರೀದಿಸಿತ್ತು ಹಾಗೂ 2026ರ ಟೂರ್ನಿಗೂ ಅವರನ್ನು ಅದೇ ಮೊತ್ತಕ್ಕೆ ಉಳಿಸಿಕೊಂಡಿತ್ತು. ಅಂದ ಹಾಗೆ ಈ ಸೀಸನ್‌ನಲ್ಲಿ ತೋರಿದ ಸ್ಥಿರ ಪ್ರದರ್ಶನದ ಬಲದಿಂದ ಅವರು ಇನ್ನಷ್ಟು ಹೆಚ್ಚಿನ ಮೊತ್ತವನ್ನು ಗಳಿಸಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ತಂಡ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ವಿರುದ್ಧ ಸೋಲು ಅನುಭವಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್‌ ಪಂದ್ಯವನ್ನು ವೀಕ್ಷಿಸಲು ವೈಭವ್‌ ಸೂರ್ಯವಂಶಿ ಆಗಮಿಸಿದ್ದರು. ಈ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸುವ ಮೂಲಕ ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಫೈನಲ್‌ ಬಳಿಕ ವೈಭವ್‌ ಸೂರ್ಯವಂಶಿ ಬಹುತೇಕ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡರು.

IPL 2026 Award winners: ವೈಭವ್‌ ಸೂರ್ಯವಂಶಿಗೆ ಅಗ್ರ ಸ್ಥಾನ, ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ!

2026ರ ಐಪಿಎಲ್‌ ಟೂರ್ನಿಯಲ್ಲಿ ವೈಭವ್‌ ಸೂರ್ಯವಂಶಿ ಗೆದ್ದ ಪ್ರಶಸ್ತಿಗಳ ವಿವರ

  • ಅತ್ಯಂತ ಮೌಲ್ಯಯುತ ಆಟಗಾರ: Rs 15 ಲಕ್ಷ ರು
  • ಆರೆಂಜ್‌ ಕ್ಯಾಪ್‌ (ಟೂರ್ನಿಯಲ್ಲಿ ಅತಿ ಹೆಚ್ಚು ರನ್‌): Rs 10 ಲಕ್ಷ ರು
  • ಸೂಪರ್‌ ಸ್ಟ್ರೈಕರ್‌ ಆಫ್‌ ದ ಸೀಸನ್‌: Rs 10 ಲಕ್ಷ ರು (ಇದರ ಜೊತೆಗೆ ಟಾಟಾ ಸಿಯಾರಾ ಕಾರು)
  • ಸೂಪರ್‌ ಸಿಕ್ಸರ್‌ ಆಫ್‌ ದ ಸೀಸನ್‌: Rs 10 ಲಕ್ಷ ರು (72 ಸಿಕ್ಸರ್‌)
  • ಎಮರ್ಜಿಂಗ್‌ ಪ್ಲೇಯರ್‌ ಆಫ್‌ ದಿ ಸೀಸನ್‌: Rs 10 ಲಕ್ಷ ರು

ಈ ಮೇಲಿನ ಐದು ಪ್ರಶಸ್ತಿಗಳಿಂದ ಒಟ್ಟು ನಗದು ಬಹುಮಾನ 55 ಲಕ್ಷ ರು ವೈಭವ್‌ ಸೂರ್ಯವಂಶಿಗೆ ಸೇರಿದೆ. ಇದರ ಜೊತೆಗೆ ಅವರು ಆಡುವ ಪ್ರತಿಯೊಂದು ಪಂದ್ಯಕ್ಕೂ 7.5 ಲಕ್ಷ ರು. ಗಳನ್ನು ಪಂದ್ಯದ ಸಂಭಾವನೆ ಪಡೆದಿದ್ದಾರೆ. ಅವರು ರಾಜಸ್ಥಾನ್‌ ರಾಯಲ್ಸ್‌ ಪರ ಈ ಸೀಸನ್‌ನಲ್ಲಿ ಒಟ್ಟು ಆಡಿದ 16 ಪಂದ್ಯಗಳಿಂದ 1.20 ಕೋಟಿ ರು ಪಂದ್ಯದ ಸಂಭಾವನೆಯನ್ನು ತಮ್ಮ ಕಿಸೆಗೆ ಸೇರಿಸಿಕೊಂಡಿದ್ದಾರೆ.

ಐಪಿಎಲ್ 2026 ಬಹುಮಾನದ ಮೊತ್ತ ಸೇರಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರು ಗೆದ್ದ ಮೊತ್ತದ ವಿವರ ಇಲ್ಲಿದೆ

ಇದರ ಜೊತೆಗೆ ಎಡಗೈ ಬ್ಯಾಟ್ಸ್‌ಮನ್‌ ಟೂರ್ನಿಯುದ್ದಕ್ಕೂ ಮ್ಯಾನ್‌ ಆಫ್‌ ದಿ ಮ್ಯಾಚ್‌ ಹಾಗೂ ಪಂದ್ಯದ ಇತರೆ ಪ್ರಶಸ್ತಿಗಳಿಂದ ತಲಾ ಒಂದೊಂದು ಲಕ್ಷ ರು. ಗಳನ್ನು ಗಳಿಸಿದ್ದಾರೆ. ಅಂದರೆ ಎಲೆಕ್ಟ್ರಿಕ್‌ ಸ್ಟ್ರೈಕರ್‌ ಆಫ್‌ ದಿ ಮ್ಯಾಚ್‌ ಹಾಗೂ ಅತಿ ಹೆಚ್ಚು ಸಿಕ್ಸರ್‌ ಹಾಗೂ ಅತಿ ಹೆಚ್ಚು ಬೌಂಡರಿ ಬಾರಿಸಿದ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ. ಇದರಿಂದ ಅವರು ಒಂದೊಂದು ಪ್ರಶಸ್ತಿಗೆ ತಲಾ ಒಂದೊಂದು ಲಕ್ಷ ರು ಪಡೆದಿರುತ್ತಾರೆ. ಇದೆಲ್ಲವೂ ಸೇರಿ ಅವರು 2026ರ ಐಪಿಎಲ್‌ ಟೂರ್ನಿಯಿಂದ ಒಟ್ಟು 2.50 ಕೋಟಿ ರು ಗಳನ್ನು ಗಳಿಸಿದ್ದಾರೆ.