IPL 2026 Award winners: ವೈಭವ್ ಸೂರ್ಯವಂಶಿಗೆ ಅಗ್ರ ಸ್ಥಾನ, ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ!
IPL 2026 award winners: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿದೆ. ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಬಳಿಕ ಆರ್‌ಸಿಬಿ ಸತತ ಎರಡನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಈ ಟೂರ್ನಿಯಲ್ಲಿನ ಪ್ರಶಸ್ತಿ ವಿಜೇತರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಅತಿ ಹೆಚ್ಚು ಪ್ರಶಸ್ತಿಗಳನ್ನು ಬೇಟೆಯಾಡಿದ ವೈಭವ್ ಸೂರ್ಯವಂಶಿ. -
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಮೇ 31 ರಂದು ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತು. ಇದರ ಶ್ರೇಯ ಆರ್‌ಸಿಬಿ ಬೌಲರ್‌ಗಳು ಹಾಗೂ 156 ರನ್‌ಗಳ ಚೇಸಿಂಗ್‌ನಲ್ಲಿ ನಿರ್ಣಾಯಕ 75 ರನ್‌ಗಳನ್ನು ಸಿಡಿಸಿದ ವಿರಾಟ್ ಕೊಹ್ಲಿಗೆ ಸಲ್ಲಬೇಕು. ಇದರ ಜೊತೆಗೆ ಟೂರ್ನಿಯುದ್ದಕ್ಕೂ ರಜತ್ ಪಾಟಿದಾರ್ (Rajat Patidar) ತಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು.
ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ಮೂರನೇ ತಂಡದ ಎಂಬ ದಾಖಲೆಯನ್ನು ಆರ್‌ಸಿಬಿ ಬರೆಯಿತು. ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡ 17 ವರ್ಷಗಳ ಬಳಿಕ ಚೊಚ್ಚಲ ಕಪ್ ಗೆದ್ದಿತ್ತು. ಅಂದಹಾಗೆ 2026ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ಸ್ ಆದ ಆರ್‌ಸಿಬಿ ತಂಡಕ್ಕೆ 20 ಕೋಟಿ ರು. ನಗದು ಬಹುಮಾನ ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು. ಇನ್ನು ರನ್ನರ್ ಅಪ್ ಆದ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ 13 ಕೋಟಿ ರು ಗಳನ್ನು ನೀಡುವ ಮೂಲಕ ಗೌರವಿಸಲಾಯಿತು.
RCB vs GT: ʻಈ ಸಲಾನು ಕಪ್ ನಮ್ದೇʼ-ಗುಜರಾತ್ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್ ಗರಿ!
ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ವೈಭವ್ ಸೂರ್ಯವಂಶಿ
ಅಂದ ಹಾಗೆ ಆರ್‌ಸಿಬಿ ಹಾಗೂ ಜಿಟಿ ನಡುವಣ ಫೈನಲ್ ಪಂದ್ಯಕ್ಕೆ 15ರ ವಯಸ್ಸಿನ ವೈಭವ್ ಸೂರ್ಯವಂಶಿ ಸಾಕ್ಷಿಯಾಗಿದ್ದರು. ಅವರು ಐಸಿಸಿ ಅಧ್ಯಕ್ಷ ಜಯ ಶಾ ಅವರ ಜೊತೆ ಪಂದ್ಯವನ್ನು ವೀಕ್ಷಿಸುತ್ತಿರುವುದು ಟಿವಿಯಲ್ಲಿ ಕಂಡಿತ್ತು. ಅಂದಹಾಗೆ ಈ ಸೀಸನ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ವಿಶ್ವ ದರ್ಜೆಯ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದ ವೈಭವ್ ಸೂರ್ಯವಂಶಿ ಒಟ್ಟು 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ಅವರು ಈ ಸೀಸನ್‌ನಲ್ಲಿ 776 ರನ್‌ಗಳ ಮೂಲಕ ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡರು. ಇದರ ಜೊತೆಗೆ ಎಮರ್ಜಿಂಗ್ ಪ್ಲೇಯರ್, ಅತ್ಯಂತ ಮೌಲ್ಯಯುತ ಆಟಗಾರ, ಬೆಸ್ಟ್ ಸ್ಟ್ರೈಕ್ ರೇಟ್ ಮತ್ತು ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.
He came. He entertained. He conquered 🔥
— IndianPremierLeague (@IPL) May 31, 2026
Vaibhav Sooryanashi delivers a season for ages winning the Orange Cap 🧢👑#TATAIPL | #Final | #TheFinalLeap | #RCBvGT pic.twitter.com/Vzvpm163UE
ಗುಜರಾತ್ ಟೈಟನ್ಸ್ ತಂಡದ ಹಿರಿಯ ವೇಗಿ 29 ವಿಕೆಟ್‌ಗಳ ಮೂಲಕ ಪರ್ಪಲ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡರು. ಇವರ ಹೊಸ ಚೆಂಡಿನಲ್ಲಿ ಪಾಲುದಾರ ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಡಾಟ್ ಬಾಲ್ಸ್ ಪ್ರಶಸ್ತಿಯನ್ನು ಪಡೆದರು.
Powerplay. Wickets. Match-winning spells 🔥
— IndianPremierLeague (@IPL) May 31, 2026
Kagiso Rabada had the perfect recipe this season to claim the Purple Cap 🧢👊#TATAIPL | #Final | #TheFinalLeap | #RCBvGT | @KagisoRabada25 pic.twitter.com/ddZLkanpWx
2026ರ ಐಪಿಎಲ್ ಟೂರ್ನಿಯ ಪ್ರಶಸ್ತಿ ವಿಜೇತರ ವಿವರ
ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
ರನ್ನರ್ ಅಪ್: ಗುಜರಾತ್ ಟೈಟನ್ಸ್
ಆರೆಂಜ್ ಕ್ಯಾಪ್: ವೈಭವ್ ಸೂರ್ಯವಂಶಿ (RR) - 776 ರನ್‌ಗಳು
ಪರ್ಪಲ್ ಕ್ಯಾಪ್: ಕಗಿಸೊ ರಬಾಡ (GT) - 29 ವಿಕೆಟ್‌ಗಳು
ಅತ್ಯಂತ ಮೌಲ್ಯಯುತ ಆಟಗಾರ: ವೈಭವ್ ಸೂರ್ಯವಂಶಿ (RR)
ಉದಯೋನ್ಮುಖ ಆಟಗಾರ: ವೈಭವ್ ಸೂರ್ಯವಂಶಿ (RR)
ಅತ್ಯಧಿಕ ಸಿಕ್ಸರ್‌ಗಳು: ವೈಭವ್ ಸೂರ್ಯವಂಶಿ (RR) - 71 ಸಿಕ್ಸರ್‌ಗಳು
ಅತ್ಯಧಿಕ ಬೌಂಡರಿಗಳು: ಸಾಯಿ ಸುದರ್ಶನ್ (GT) - 75 ಬೌಂಡರಿಗಳು
ಅತ್ಯುತ್ತಮ ಸ್ಟ್ರೈಕ್ ರೇಟ್: ವೈಭವ್ ಸೂರ್ಯವಂಶಿ (RR) - 237.31
ಅತ್ಯಧಿಕ ಡಾಟ್ ಬಾಲ್‌ಗಳು: ಮೊಹಮ್ಮದ್ ಸಿರಾಜ್ (GT) - 172 ಡಾಟ್ ಬಾಲ್‌ಗಳು
ಅತ್ಯುತ್ತಮ ಕ್ಯಾಚ್: ಮನೀಶ್ ಪಾಂಡೆ (KKR)
ಫೇರ್ ಪ್ಲೇ ಪ್ರಶಸ್ತಿ: ಪಂಜಾಬ್ ಕಿಂಗ್ಸ್
ಪಿಚ್ ಮತ್ತು ಗ್ರೌಂಡ್ಸ್ ಪ್ರಶಸ್ತಿ (ನಾಲ್ಕು ಪಂದ್ಯಗಳು ಅಥವಾ ಕಡಿಮೆ): ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್
ಪಿಚ್ ಮತ್ತು ಗ್ರೌಂಡ್ಸ್ ಪ್ರಶಸ್ತಿ: ಬಂಗಾಳ ಕ್ರಿಕೆಟ್ ಅಸೋಸಿಯೇಷನ್