ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಸ್ಟ್ರೇಲಿಯಾ ವಿರುದ್ದ ಸೋತರೇ ಭಾರತ ಮಹಿಳಾ ತಂಡಕ್ಕೆ ಸಮೀಸ್‌ಗೆ ಚಾನ್ಸ್‌ ಇದೆಯಾ? ಇಲ್ಲಿದೆ ಲೆಕ್ಕಾಚಾರ!

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳಾ ತಂಡ, 2026ರ ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ರೇಸ್‌ನಲ್ಲಿದೆ. ಟೂರ್ನಿಯ ಎ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಯಾ ಎದುರು ಕಾದಾಟ ನಡೆಸಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಸೋತರೆ, ಸೆಮೀಸ್‌ ಲೆಕ್ಕಾಚಾರ ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.

ಭಾರತ ಮಹಿಳಾ ತಂಡದ ಸೆಮೀಸ್‌ ಲೆಕ್ಕಾಚಾರ.

ನವದೆಹಲಿ: ಮಹಿಳಾ ಟಿ20 ವಿಶ್ವಕಪ್‌ (ICC Women's T20 World Cup 2026) ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ (India women) ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದ್ದು, ಒಂದು ಪಂದ್ಯದಲ್ಲಿ ಸೋಲು ಅನುಭವಿಸಿದೆ. ಇದೀಗ ಒಟ್ಟು 6 ಅಂಕಗಳ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಎ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಲಿದೆ. ಜೂನ್‌ 28 ರಂದು ಭಾನುವಾರ ಲಂಡನ್‌ನ ಲಾರ್ಡ್ಸ್‌ನಲ್ಲಿ ಈ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ಕೂಡ ಇದೇ ದಿನ ತನ್ನ ಕೊನೆಯ ಕೊನೆಯ ಲೀಗ್‌ ಪಂದ್ಯವನ್ನು ಬಾಂಗ್ಲಾದೇಶ ಎದುರು ಆಡಲಿದೆ. ಈ ಎರಡೂ ಪಂದ್ಯಗಳು ಸೆಮಿಫೈನಲ್‌ ದೃಷ್ಟಿಯಲ್ಲಿ ನಿರ್ಣಾಯಕವಾಗಲಿವೆ.

ಈ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್‌ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಬಾಂಗ್ಲಾದೇಶ ತಂಡದ ಸೆಮಿಫೈನಲ್ಸ್‌ ಲೆಕ್ಕಾಚಾರ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಮೂರು ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಹಾಗಾಗಿ ಸೆಮಿಫೈನಲ್ಸ್‌ನ ಎರಡು ಸ್ಥಾನಗಳಿಗೆ ಅರ್ಹತೆ ಪಡೆಯುವ ನಿಟ್ಟಿಯಲ್ಲಿ ಆಸ್ಟ್ರೇಲಿಯಾ, ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಗುರುವಾರ ಭಾರತ ತಂಡ, ಬಾಂಗ್ಲಾದೇಶ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು, ಆ ಮೂಲಕ ಸೆಮಿಫೈನಲ್‌ ರೇಸ್‌ನಲ್ಲಿ ಉಳಿದಿತ್ತು. ಇನ್ನು ನೆದರ್ಲೆಂಡ್ಸ್‌ ವಿರುದ್ಧ 88 ರನ್‌ಗಳಿಂದ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಕೂಡ ಸೆಮಿ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಲೀಗ್‌ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡ, ಎ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

IPL 2027: ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿ ಡಿ ವಿಲಿಯರ್ಸ್‌!

ಆಸ್ಟ್ರೇಲಿಯಾ ತಂಡ (+4.724) ಅತ್ಯುತ್ತಮ ರನ್‌ರೇಟ್‌ ಹೊಂದಿದ್ದರೆ, ಭಾರತ ತಂಡ (+2.268) ಎರಡನೇ ಸ್ಥಾನದಲ್ಲಿದೆ. ಸೆಮಿಫೈನಲ್‌ಗೆ ಭಾರತ ತಂಡ ಅರ್ಹತೆ ಪಡೆಯಬೇಕೆಂದರೆ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.

ಎ ಗುಂಪಿನ ಇನ್ನುಳಿದ ಪಂದ್ಯಗಳ ವಿವರ

ಪಂದ್ಯ 26: ಪಾಕಿಸ್ತಾನ vs ನೆದರ್ಲೆಂಡ್ಸ್‌, ಬ್ರಿಸ್ಟಲ್, ಜೂನ್ 27

ಪಂದ್ಯ 29: ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ, ಲಾರ್ಡ್ಸ್, ಜೂನ್ 28

ಪಂದ್ಯ 30: ಆಸ್ಟ್ರೇಲಿಯಾ vs ಭಾರತ , ಲಾರ್ಡ್ಸ್, ಜೂನ್ 28

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡದ ಸೆಮಿಫೈನಲ್‌ ಲೆಕ್ಕಾಚಾರ

ಆಸ್ಟ್ರೇಲಿಯಾ ವಿರುದ್ಧ ಸೋತರೆ

ಬಾಂಗ್ಲಾದೇಶ ತಂಡ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಬೇಕಾದ ಅಗತ್ಯವಿದೆ. ಒಂದು ವೇಳೆ ಹರಿಣ ಪಡೆ ಸೋತರೆ ಆಗ ಸೆಮಿಫೈನಲ್‌ ಎರಡನೇ ಸ್ಥಾನಕ್ಕೆ ರನ್‌ರೇಟ್‌ ಪ್ರಮುಖ ಪಾತ್ರವಹಿಸಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಲಾ 6 ಅಂಕಗಳನ್ನು ಹೊಂದಿ ಸಮಬಲ ಸಾಧಿಸಿದ್ದರೂ ಇಲ್ಲಿ ಉತ್ತಮ ರನ್‌ರೇಟ್‌ ಹೊಂದಿದ ತಂಡ, ಆಸ್ಟ್ರೇಲಿಯಾ ಜೊತೆಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ. ಸದ್ಯ ದಕ್ಷಿಣ ಆಫ್ರಿಕಾ ತಂಡಕ್ಕಿಂತ ಭಾರತದ ರನ್‌ರೇಟ್‌ ಉತ್ತಮವಾಗಿದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಆಡಲ್ಲ ಎಂದ ಸಂಜಯ್‌ ಮಾಂಜ್ರೇಕರ್‌!

ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದರೆ

ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ ಗೆದ್ದರೂ, ಈ ಲೆಕ್ಕಾಚಾರದ ಪ್ರಕಾರ ಭಾರತ ತಂಡ ಎಂಟು ಅಂಕಗಳನ್ನು ಕಲೆ ಹಾಕಲಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಗೆದ್ದರೆ, ಎರಡೂ ತಂಡಗಳು ಸಮಬಲವಾಗಲಿವೆ, ಆಗ ರನ್‌ರೇಟ್‌ ಪ್ರಮುಖ ಪಾತ್ರವಹಿಸಲಿದೆ.

ಫಲಿತಾಂಶವಿಲ್ಲ

ಒಂದು ವೇಳೆ ಭಾರತ ತಂಡದ ಪರ ಮಳೆಗೆ ರದ್ದಾದರೆ, ಆಗ ಬಾಂಗ್ಲಾದೇಶ ತಂಡ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಬೇಕು. ಆದರೆ, ದಕ್ಷಿಣ ಆಫ್ರಿಕಾ ತಂಡ ಗೆದ್ದರೆ, ಆಗ ಭಾರತ ತಂಡ 7 ಅಂಕಗಳ ಮೂಲಕ ಟೂರ್ನಿಯಿಂದ ಎಲಿಮಿನೇಟ್‌ ಆಗಲಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಎ ಗುಂಪಿನಿಂದ ಸೆಮಿಫೈನಲ್ಸ್‌ಗ ಅರ್ಹತೆ ಪಡೆಯಲಿವೆ.