Asia Cup 2025: ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ!
ಸೆಪ್ಟಂಬರ್ 9 ರಂದು ಆರಂಭವಾಗಲಿರುವ 2025ರ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ ತಯಾರಿ ನಡೆಸುತ್ತಿದೆ. ಸೆಪ್ಟಂಬರ್ 10 ರಂದು ಯುಎಇ ವಿರುದ್ದ ಕಾದಾಟ ನಡೆಸುವ ಮೂಲಕ ಭಾರತ ತಂಡ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 17 ರನ್ ಗಳಿಸಿದರೆ, ಏಷ್ಯಾ ಕಪ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ.

ಟಿ20 ಏಷ್ಯಾ ಕಪ್ ಟೂರ್ನಿಯಲ್ಲಿ ವಿಶೇಷ ದಾಖಲೆಯ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ. -

ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಟೂರ್ನಿಯ ಬಳಿಕ ಭಾರತ ತಂಡ, ಸೆಪ್ಟಂಬರ್ 9 ರಂದು ಆರಂಭವಾಗುವ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಮೂಲಕ ಅಂತಾರಾಷ್ಟ್ರೀಯ ವೈಟ್ ಬಾಲ್ ಕ್ರಿಕೆಟ್‌ಗೆ ಮರಳಲಿದೆ. ಹಾರ್ದಿಕ್ ಪಾಂಡ್ಯ (Hardik pandya) ಅವರು ಕೂಡ ರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಅವರು ಏಷ್ಯಾ ಕಪ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆಯುವ ಸನಿಹದಲ್ಲಿದ್ದಾರೆ. ಅಂದ ಹಾಗೆ ಹಾರ್ದಿಕ್ ಕೇವಲ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಬೌಲರ್ ಆಗಿ ಯುಎಇ ಕಂಡೀಷನ್ಸ್ ಅಷ್ಟೊಂದು ಸುಲಭವಾಗಿಲ್ಲ. ಆದರೂ ಅವರು ತಮ್ಮ ವಿಭಿನ್ನ ಬೌಲಿಂಗ್ ಸಾಮರ್ಥ್ಯದಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನರಾಗಬಹುದು. ಫಾಸ್ಟ್ ಬೌಲಿಂಗ್ ಆಯ್ಕೆಯಾಗಿ ಹಾರ್ದಿಕ್ ಆಡಬಹುದು. ಕೆಲ ಪಂದ್ಯಗಳಲ್ಲಿ ಅವರು ಹೊಸ ಚೆಂಡಿನಲ್ಲಿ ಓಪನಿಂಗ್ ಬೌಲ್ ಮಾಡುವ ಸಾಧ್ಯತೆ ಇದೆ. ಯುಎಇ ಕಂಡೀಷನ್ಸ್‌ಗೆ ಹೊಂದಿಕೊಳ್ಳಲು ಹಾರ್ದಿಕ್ ಪಾಂಡ್ಯ ಕೆಲ ಕಾಲ ಅಭ್ಯಾಸ ನಡೆಸಬೇಕಾದ ಅಗತ್ಯವಿದೆ.
Asia Cup 2025: ಈ ಆಟಗಾರನಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಇಲ್ಲವೆಂದ ಇರ್ಫಾನ್ ಪಠಾಣ್!
ವಿಶೇಷ ದಾಖಲೆಯ ಸನಿಹದಲ್ಲಿ ಹಾರ್ದಿಕ್ ಪಾಂಡ್ಯ
ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆ ಬರೆಯುವ ಸಾಧ್ಯತೆ ಇದೆ. ಟಿ20 ಏಷ್ಯಾ ಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ 8 ಪಂದ್ಯಗಳನ್ನು ಆಡಿದ್ದಾರೆ ಹಾಗೂ 11 ವಿಕೆಟ್‌ಗಳು ಮತ್ತು 83 ರನ್‌ಗಳನ್ನು ಕಲೆ ಹಾಕಿದ್ದಾರೆ. ಮುಂದಿನ ಟೂರ್ನಿಯಲ್ಲಿ ಅವರು 17 ರನ್ ಗಳಿಸಿದರೆ, ಏಷ್ಯಾ ಕಪ ಟೂರ್ನಿಯಲ್ಲಿ 100ಕ್ಕೂ ಅಧಿಕ ರನ್ ಹಾಗೂ 10 ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆಯಲಿದ್ದಾರೆ.ಟಿ20 ಸ್ವರೂಪವನ್ನು ಹಾರ್ದಿಕ್ ಪಾಂಡ್ಯ ಆನಂದಿಸುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಅವರು ತಮ್ಮ ಚುಟುಕು ಕ್ರಿಕೆಟ್‌ನಲ್ಲಿನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ.
Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಟಾಪ್-5 ಆಟಗಾರರು
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ವೇಳಾಪಟ್ಟಿ
ಸೆಪ್ಟಂಬರ್ 10 ರಂದು ಯುಎಇ ವಿರುದ್ಧ ಭಾರತ ತಂಡ ಯುಎಇ ವಿರುದ್ಧ ಏಷ್ಯಾ ಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಸೆಪ್ಟಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಸೆಪ್ಟಂಬರ್ 19 ರಂದು ಒಮನ್ ವಿರುದ್ದದ ಪಂದ್ಯದ ಮೂಲಕ ಗುಂಪು ಹಂತವನ್ನು ಟೀಮ್ ಇಂಡಿಯಾ ಮುಗಿಸಲಿವೆ. ಲೀಗ್ ಹಂತದಲ್ಲಿ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದರೆ ಭಾರತ ತಂಡ ಟೂರ್ನಿಯ ಸೂಪರ್-4ರ ಹಂತಕ್ಕೆ ಪ್ರವೇಶ ಮಾಡಲಿದೆ.
Hockey Asia Cup 2025: ಜಪಾನ್ ವಿರುದ್ದ ಗೆದ್ದು ಸೂಪರ್ ಫೋರ್‌ಗೆ ಅರ್ಹತೆ ಪಡೆದ ಭಾರತ!
ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ರಿಂಕು ಸಿಂಗ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಶಿವಂ ದುಬೆ