ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾನು ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರತಿನಿಧಿಸುತ್ತೇನೆ, ಡೆರೆನ್‌ ಸಾಮಿಯನ್ನು ಅಲ್ಲ: ಆಲ್ಝಾರಿ ಜೋಸೆಫ್‌ ತಿರುಗೇಟು!

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ವೇಗಿ ಆಲ್ಝಾರಿ ಜೋಸೆಫ್ ಮತ್ತು ಮುಖ್ಯ ಕೋಚ್ ಡೆರೆನ್ ಸಾಮಿ ನಡುವೆ ವಿವಾದ ಉಂಟಾಗಿದೆ. ಜೋಸೆಫ್ ಅವರ ಅಲಭ್ಯತೆಗೆ ಮಂಡಳಿಯು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿತ್ತು. ಈ ಬಗ್ಗೆ ವಿಂಡೀಸ್‌ ಕೋಚ್‌ ವಿರುದ್ಧ ಜೋಸೆಫ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಡೆರೆನ್‌ ಸಾಮಿ ವಿರುದ್ಧ ಗುಡುಗಿದ ಆಲ್ಝಾರಿ ಜೋಸೆಫ್‌.

ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ (WI vs PAK) ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ನಡುವೆ ಕೆರಿಬಿಯನ್ ತಂಡದೊಳಗಿನ ಆಂತರಿಕ ಬಿರುಕುಗಳು ಮುನ್ನೆಲೆಗೆ ಬಂದಿವೆ. ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಅನ್ನು ಆರಾಮದಾಯಕವಾಗಿ ಗೆದ್ದಿದ್ದರೂ, ತಂಡದ ಸ್ಟಾರ್ ವೇಗಿ ಆಲ್ಜಾರಿ ಜೋಸೆಫ್ (Alzarri Joseph) ಅವರನ್ನು ಹೊರಗಿಟ್ಟಿರುವ ಬಗ್ಗೆ ವಿವಾದ ಹೆಚ್ಚಾಗಿದೆ. ಈ ಬಗ್ಗೆ ವೇಗಿ ಆಲ್ಝಾರಿ ಜೋಸೆಫ್‌ ಅವರು ತಮ್ಮ ತಂಡದ ಕೋಚ್‌ ಡೆರೆನ್‌ ಸಾಮಿ (Daren Sammy) ಅವರ ವಿರುದ್ಧ ಕಿಡಿಕಾರಿದ್ದಾರೆ.

ಕ್ರಿಕೆಟ್ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಿದಾಗ ಆಲ್ಜಾರಿ ಜೋಸೆಫ್ ಅವರನ್ನು ಕೈಬಿಟ್ಟಿರುವುದನ್ನು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಆರಂಭದಲ್ಲಿ, ಮಂಡಳಿಯು ಅಧಿಕೃತ ಪ್ರಕಟಣೆಯಲ್ಲಿ ಜೋಸೆಫ್ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಹೇಳಿತ್ತು. ಆದಾಗ್ಯೂ, ಮರುದಿನವೇ ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಡೆರೆನ್ ಸಾಮಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಆಲ್ಝಾರಿ ಜೋಸೆಫ್ ಸ್ವತಃ ಸರಣಿಗೆ ಆಯ್ಕೆಯನ್ನು ನಿರಾಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

IPL 2027: ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ತಲೆ ನೋವು!

"ನಾನು ಮತ್ತು ಮುಖ್ಯ ಕೋಚ್‌ ಮಾತನಾಡಿದ್ದೇವೆ. ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಿದ್ದೇನೆ. ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ 'ವೈಯಕ್ತಿಕ ಕಾರಣಗಳು' ಎಂದು ಉಲ್ಲೇಖಿಸಲಾಗಿತ್ತು. ಡೆರೆನ್ ಸಾಮಿ ಬಹಳ ವರ್ಷಗಳಿಂದ ಕ್ರಿಕೆಟ್‌ನಲ್ಲಿದ್ದಾರೆ. ಆ ಹೇಳಿಕೆ ಸಾರ್ವಜನಿಕರಲ್ಲಿ ಯಾವ ರೀತಿಯ ಚರ್ಚೆ ಮತ್ತು ಅಭಿಪ್ರಾಯವನ್ನು ಹುಟ್ಟುಹಾಕುತ್ತದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದ ಅವರ ಹೇಳಿಕೆಯ ಬಗ್ಗೆ ನಾನು ಹೇಳಲು ಹೆಚ್ಚಾಗಿ ಏನೂ ಇಲ್ಲ. ಆ ಹೇಳಿಕೆ ಯಾವ ರೀತಿಯ ಕಥೆಯನ್ನು ಜನರ ಮುಂದೆ ತಳ್ಳುತ್ತದೆ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು," ಎಂದು ಜೋಸೆಫ್ ಹೇಳಿದ್ದಾರೆ.

ಬಾಬರ್‌ ಆಝಮ್‌ ನಾಯಕನಾಗಿ ಮರಳಿದರೂ ಪಾಕಿಸ್ತಾನ ತಂಡದ ಹಣೆ ಬರಹ ಬದಲಾಗಲಿಲ್ಲ!

"ನಾನು ವೃತ್ತಿಪರ ಆಟಗಾರ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾನು ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ, ಡೆರೆನ್ ಸಾಮಿಯನ್ನು ಅಲ್ಲ. ಆದ್ದರಿಂದ ನಮ್ಮಿಬ್ಬರ ವೈಯಕ್ತಿಕ ಸಂಬಂಧದ ಬಗ್ಗೆ ನನಗೆ ಹೇಳಲು ಏನೂ ಇಲ್ಲ. ನಾನು ಅಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಲು ಹೋಗುವುದಿಲ್ಲ. ನನ್ನ ಕೆಲಸವನ್ನು ನಿರ್ವಹಿಸಲು ಮತ್ತು ವೆಸ್ಟ್ ಇಂಡೀಸ್ ಜನರನ್ನು ಪ್ರತಿನಿಧಿಸಲು ಹೋಗುತ್ತೇನೆ," ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ವೆಸ್ಟ್ ಇಂಡೀಸ್ ತಂಡಕ್ಕೆ ಕ್ರಿಕೆಟ್‌ನಿಂದ ಸ್ವಲ್ಪ ವಿರಾಮ ಸಿಗಲಿದೆ. ಬಳಿಕ ಸೆಪ್ಟೆಂಬರ್ 27ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ (ODI) ಸರಣಿಯಲ್ಲಿ ಭಾರತ ವಿರುದ್ಧ ಕಣಕ್ಕಿಳಿಯುವ ಮೂಲಕ ತಂಡ ಮತ್ತೆ ಮೈದಾನಕ್ಕೆ ಮರಳಲಿದೆ. ಮೂರು ಏಕದಿನ ಪಂದ್ಯಗಳ ಸರಣಿ ಮುಗಿದ ನಂತರ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಮುಖಾಮುಖಿಯಾಗಲಿವೆ.