ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವಿರಾಟ್‌ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ದುಡ್ಡು ಕೊಡ್ತಿವಿʼ: ಶಾಕಿಂಗ್‌ ಹೇಳಿಕೆ ಕೊಟ್ಟ ಜರ್ಮನ್‌ ಮಾಡೆಲ್‌!

ಜರ್ಮನ್‌ ಮಾಡೆಲ್‌ ಲಿಝ್‌ಲ್ಯಾಝ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ವಿರುದ್ಧ ರೂಪಿಸಿದ್ದ ಷಡ್ಯಂತ್ರವೊಂದನ್ನು ರಿವೀಲ್‌ ಮಾಡಿದ್ದಾರೆ. ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಿಮಗೆ ಹಣ ನೀಡುತ್ತೇವೆಂದು ಆಮಿಷ ಬಂದಿದ್ದ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ.

ಕೊಹ್ಲಿ ಬಗ್ಗೆ ಕೆಲವರು ಮಾಡಿದ್ದ ಷಡ್ಯಂತ್ರ ರಿವೀಲ್‌ ಮಾಡಿದ ಲಿಜ್ಲಾಜ್.

ನವದೆಹಲಿ: ಭಾರತ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಬ್ಯಾಟಿಂಗ್ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ವಿರುದ್ಧ ಕೆಟ್ಟದಾಗಿ ಪ್ರಚಾರ ನಡೆಸುವಂತೆ ತಮಗೆ ಭಾರೀ ಪ್ರಮಾಣದ ಹಣದ ಆಫರ್ ಬಂದಿತ್ತು ಎಂದು ಜರ್ಮನ್‌-ದಕ್ಷಿಣ ಆಫ್ರಿಕಾ ಮೂಲದ ಮಾಡೆಲ್‌ ಲಿಜ್ಲಾಜ್‌ (Lizlaz) ಬಹಿರಂಗಪಡಿಸಿದ್ದಾರೆ. ಈ ಘಟನೆ ಈ ವರ್ಷದ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಲಿಜ್ಲಾಜ್‌ ಅವರ ಬೋಲ್ಡ್‌ ಫೋಟೋವೊಂದಕ್ಕೆ ಲೈಕ್ ಮಾಡಿದ ಬಳಿಕ ನಡೆದಿರುವುದಾಗಿ ವರದಿಯಾಗಿದೆ. ಈ ಬಹಿರಂಗ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿರಾಟ್‌ ಕೊಹ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅತ್ಯಧಿಕ ಫಾಲೋವರ್ಸ್‌ ಹೊಂದಿರುವ ಕ್ರೀಡಾ ತಾರೆಯರಲ್ಲಿ ಒಬ್ಬರಾಗಿದ್ದು, ಅವರ ಖಾತೆಯನ್ನು 273 ಮಿಲಿಯನ್‌ಗಿಂತ ಹೆಚ್ಚು ಜನ ಹಿಂಬಾಲಿಸುತ್ತಿದ್ದಾರೆ. ಆದ್ದರಿಂದ ಅವರ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಪ್ರತಿಯೊಂದನ್ನೂ ಕ್ರಿಕೆಟ್ ಅಭಿಮಾನಿಗಳು ನಿಕಟವಾಗಿ ಗಮನಿಸುವುದು ಅಚ್ಚರಿಯ ವಿಷಯವೇ ಅಲ್ಲ.

RCB vs MI: ಗೋಲ್ಡನ್‌ ಡಕ್‌ ಮೂಲಕ ಅನಗತ್ಯ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಇನ್‌ಸ್ಟಾಗ್ರಾಂ ‘ಲೈಕ್’ ಘಟನೆ ಬಳಿಕ ಜರ್ಮನ್ ಮಾಡೆಲ್ ಲಿಜ್ಲಾಜ್‌ ಅವರು ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದರು. ಭಾರತದಲ್ಲಿನ ಕೆಲವು ಮಾಧ್ಯಮ ಸಂಸ್ಥೆಗಳು ವಿರಾಟ್ ಕೊಹ್ಲಿ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ನೀಡಲು ಹಾಗೂ ಸುಳ್ಳು ವದಂತಿಗಳನ್ನು ಹಬ್ಬಿಸಲು ತಮಗೆ ಹಣದ ಆಫರ್ ನೀಡಿದ್ದವು ಎಂದು ಅವರು ಆರೋಪ ಮಾಡಿದ್ದಾರೆ.

ಆದರೆ, ಆ ರೀತಿಯ ಆಫರ್‌ಗಳನ್ನು ಅವರು ತಿರಸ್ಕರಿಸಿದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ತಮ್ಮ ಅಚ್ಚುಮೆಚ್ಚಿನ ಕ್ರಿಕೆಟಿಗರಾಗಿದ್ದು, ಅವರ ವಿರುದ್ಧ ತಾವು ಎಂದಿಗೂ ಮಾತನಾಡುವುದಿಲ್ಲ ಎಂದು ಲಿಜ್ಲಾಜ್‌ ಸ್ಪಷ್ಟಪಡಿಸಿದರು. ಜೊತೆಗೆ, ಕೊಹ್ಲಿ ತಮ್ಮ ರೀಲ್ಸ್‌ಗೆ ಲೈಕ್ ಮಾಡಿರುವ ವಿಚಾರ ತಿಳಿದಾಗ ತಾವು ಭಾವನಾತ್ಮಕವಾಗಿದ್ದು, ಅಚ್ಚರಿಗೊಳಗಾಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

Bhuvneshwar Kumar: ಆರ್‌ಸಿಬಿ ವೇಗಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆಂದ ಆರ್‌ ಅಶ್ವಿನ್‌!

“ನಾನು ತುಂಬಾ ಸಂತೋಷಪಟ್ಟೆ ಮತ್ತು ಸ್ವಲ್ಪ ಭಾವನಾತ್ಮಕವಾಗಿಯೂ ಆಗಿದ್ದೆ. ಆದರೆ ಇದರಿಂದ ಇಷ್ಟು ದೊಡ್ಡ ವಿಚಾರವಾಗುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಂತರ ವಿವಿಧ ಮ್ಯಾಗಜಿನ್‌ಗಳಿಂದ ನನಗೆ ಅನೇಕ ಕರೆಗಳು ಬರಲು ಆರಂಭವಾಯಿತು. ಕೆಲವರು ನೀವು ಹೇಳಲು ಇಷ್ಟಪಡದ ವಿಷಯಗಳನ್ನು ಹೇಳುವಂತೆ ಒತ್ತಡ ಹೇರುತ್ತಿದ್ದರು. ಕೆಲವು ಪತ್ರಕರ್ತರು ವಿರಾಟ್‌ ಕೊಹ್ಲಿ ವಿರುದ್ಧ ಕೆಟ್ಟ ಮಾತುಗಳನ್ನು ಹೇಳಲು ಹಾಗೂ ಅವರು ಎಂದಿಗೂ ಮಾಡದ ಆರೋಪಗಳನ್ನು ಮಾಡಲು ನನಗೆ ಹಣದ ಆಫರ್ ಕೂಡ ನೀಡಿದರು. ಆದರೆ ನಾನು ಯಾಕೆ ಹಾಗೆ ಮಾಡಬೇಕು? ಅವರು ನನ್ನ ಅಚ್ಚುಮೆಚ್ಚಿನ ಕ್ರಿಕೆಟಿಗ ಎಂದು ನಾನು ಅವರಿಗೆ ಹೇಳಿದ್ದೆ. ಹಾಗಾಗಿ ಕೇವಲ ಹಣಕ್ಕಾಗಿ ಅವರ ವಿರುದ್ಧ ನಾನು ಯಾಕೆ ಮಾತನಾಡಬೇಕು? ನಾನು ಆ ರೀತಿಯ ವ್ಯಕ್ತಿಯಲ್ಲ,” ಎಂದು ಲಿಜ್ಜಾಜ್ ಅವರು ದೈನಿಕ್‌ ಬಾಸ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.



ಈ ಘಟನೆಯ ಬಳಿಕ ಲಿಜ್ಜಾಜ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆರ್‌ಸಿಬಿ ತಂಡದ ಜೆರ್ಸಿ ಧರಿಸಿರುವ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗಳು ಮೇ 10ರ ಭಾನುವಾರ ರಾಯ್ಪುರದಲ್ಲಿ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ವೈರಲ್ ಆಗಿದ್ದವು. ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಎರಡು ವಿಕೆಟ್‌ಗಳಿಂದ ಗೆದ್ದಿತ್ತು.