ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs MI: ಗೋಲ್ಡನ್‌ ಡಕ್‌ ಮೂಲಕ ಅನಗತ್ಯ ದಾಖಲೆ ಬರೆದ ವಿರಾಟ್‌ ಕೊಹ್ಲಿ

IPL 2026: ಸದ್ಯ ಕೊಹ್ಲಿ ಐಪಿಎಲ್‌ನಲ್ಲಿ ಜಂಟಿಯಾಗಿ ಮೂರನೇ ಅತಿ ಹೆಚ್ಚು ಗೋಲ್ಡನ್ ಡಕ್‌ಗಳನ್ನು ಹೊಂದಿದ್ದಾರೆ. ಇಶಾನ್ ಕಿಶನ್ ಮತ್ತು ಸುನಿಲ್ ನರೈನ್ ಅವರಂತಹ ಅನಗತ್ಯ ದಾಖಲೆಗಳ ಪಟ್ಟಿಯಲ್ಲಿ ಸೇರಿದ್ದಾರೆ. ಈ ಪಟ್ಟಿಯಲ್ಲಿ ರಶೀದ್ ಖಾನ್(12) ಮೊದಲ ಸ್ಥಾನದಲ್ಲಿದ್ದಾರೆ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್(10) ಎರಡನೇ ಸ್ಥಾನದಲ್ಲಿದ್ದಾರೆ.

ಗೋಲ್ಡನ್‌ ಡಕ್‌ ಮೂಲಕ ಅನಗತ್ಯ ದಾಖಲೆ ಬರೆದ ವಿರಾಟ್‌ ಕೊಹ್ಲಿ

Virat Kohli -

Abhilash BC
Abhilash BC May 11, 2026 7:59 AM

ರಾಯ್ಪುರ, ಮೇ 11: ಭಾನುವಾರ ನಡೆದ ಮುಂಬೈ ಇಂಡಿಯನ್ಸ್(RCB vs MI) ವಿರುದ್ಧ ಐಪಿಎಲ್‌ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾದ ವಿರಾಟ್ ಕೊಹ್ಲಿ(Virat Kohli) ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಇದು ಕೊಹ್ಲಿ ಐಪಿಎಲ್‌ನಲ್ಲಿ 12ನೇ ಡಕ್ ಮತ್ತು ಟೂರ್ನಮೆಂಟ್ ಇತಿಹಾಸದಲ್ಲಿ ಎಂಟನೇ ಗೋಲ್ಡನ್ ಡಕ್ ಆಗಿದೆ. ಹಾಲಿ ಆವೃತ್ತಿಯಲ್ಲಿ ಸತತ ಎರಡನೇ ಡಕ್‌. ಕಳೆದ ಲಖನೌ ಎದುರಿನ ಪಂದ್ಯದಲ್ಲಿಯೂ ಕೊಹ್ಲಿ ಶೂನ್ಯ ಸುತ್ತಿದ್ದರು.

ಸದ್ಯ ಕೊಹ್ಲಿ ಐಪಿಎಲ್‌ನಲ್ಲಿ ಜಂಟಿಯಾಗಿ ಮೂರನೇ ಅತಿ ಹೆಚ್ಚು ಗೋಲ್ಡನ್ ಡಕ್‌ಗಳನ್ನು ಹೊಂದಿದ್ದಾರೆ. ಇಶಾನ್ ಕಿಶನ್ ಮತ್ತು ಸುನಿಲ್ ನರೈನ್ ಅವರಂತಹ ಅನಗತ್ಯ ದಾಖಲೆಗಳ ಪಟ್ಟಿಯಲ್ಲಿ ಸೇರಿದ್ದಾರೆ. ಈ ಪಟ್ಟಿಯಲ್ಲಿ ರಶೀದ್ ಖಾನ್(12) ಮೊದಲ ಸ್ಥಾನದಲ್ಲಿದ್ದಾರೆ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್(10) ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲ್ಡನ್ ಡಕ್‌ಗಳು

ರಶೀದ್ ಖಾನ್-12

ಗ್ಲೆನ್ ಮ್ಯಾಕ್ಸ್‌ವೆಲ್-10

ವಿರಾಟ್ ಕೊಹ್ಲಿ-8

ಇಶಾನ್ ಕಿಶನ್-8

ಸುನಿಲ್ ನರೈನ್-8

ಮುಂಬೈ ಇಂಡಿಯನ್ಸ್‌ ವಿರುದ್ಧ ವಿರಾಟ್‌ ಕೊಹ್ಲಿಯ ಮೂರನೇ ಡಕೌಟ್‌ ಇದಾಗಿದೆ. ಉಳಿದಂತೆ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧವೂ ಅವರು ಮೂರು ಬಾರಿ ಡಕೌಟ್‌ ಆಗಿದ್ದರು.

3 vs ಮುಂಬೈ ಇಂಡಿಯನ್ಸ್

3 vs ಸನ್‌ರೈಸರ್ಸ್ ಹೈದರಾಬಾದ್

2 vs ಲಕ್ನೋ ಸೂಪರ್ ಜೈಂಟ್ಸ್

ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್‌ ಅನ್‌ ಫಾಲೋ ಮಾಡಿದ ಹಾರ್ದಿಕ್‌ ಪಾಂಡ್ಯ!

ಏತನ್ಮಧ್ಯೆ, ಐಪಿಎಲ್‌ನಲ್ಲಿ ಕೊಹ್ಲಿ ಸತತ ಎರಡು ಬಾರಿ ಡಕ್ ಔಟ್ ಆಗಿದ್ದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಪ್ರಿನ್ಸ್ ಯಾದವ್ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಔಟ್ ಆಗಿದ್ದರು. ಈ ಋತುವಿನ ಮೊದಲು, 2022 ರಲ್ಲಿ ಎಲ್‌ಎಸ್‌ಜಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊಹ್ಲಿ ಸತತ ಡಕ್ ಔಟ್ ಆಗಿದ್ದರು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ತಂಡ, ನಮನ್‌ಧೀರ್(47) ಹಾಗೂ ತಿಲಕ್‌ ವರ್ಮಾ(57) ಹೋರಾಟದಿಂದಾಗಿ 7 ವಿಕೆಟ್‌ಗೆ 166 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ಕೊನೆಯ ಎಸೆತದವರೆಗೂ ಹೋರಾಡಿ ರೋಚಕ ಗೆಲುವು ಸಾಧಿಸಿತು. ತಂಡವನ್ನು ಕಾಪಾಡಿದ್ದು ಕೃನಾಲ್‌ ಪಾಂಡ್ಯ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಅಬ್ಬರಿಸಿದ ಅವರು 46 ಎಸೆತಕ್ಕೆ 73 ರನ್‌ ಸಿಡಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ 20 ಓವರಲ್ಲಿ 166/7 (ತಿಲಕ್‌ 57, ನಮನ್‌ 47, ಭುವನೇಶ್ವರ್‌ 4-23), ಆರ್‌ಸಿಬಿ 20 ಓವರಲ್ಲಿ 167/8 (ಕೃನಾಲ್‌ 73, ಬೆಥೆಲ್‌ 27, ಕಾರ್ಬಿನ್‌ 4-26)

ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌.