ಈ ಆಟಗಾರನಿಂದ ಟಿ20ಐ ನಾಯಕತ್ವ ಕಳೆದುಕೊಳ್ಳುವ ಭಯ ಶುರುವಾಗಿದೆ-ಸೂರ್ಯಕುಮಾರ್!
Suryakumar Yadav on his Captaincy: ಶುಭಮನ್ ಗಿಲ್ ವಿರುದ್ಧ ನಾಯಕತ್ವ ಕಳೆದುಕೊಳ್ಳುವ ಭಯದ ಬಗ್ಗೆ ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಹತ್ವದ ಹೇಳಿಕೆ ನೀಡಿದ್ದಾರೆ. ನಾಯಕತ್ವ ಕಳೆದುಕೊಳ್ಳುವ ಬಗ್ಗೆ ಯಾವಾಗಲೂ ಭಯದಲ್ಲಿತ್ತೇನೆಂದು ಅವರು ಒಪ್ಪಿಕೊಂಡಿದ್ದಾರೆ.

ಟಿ20ಐ ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿ ಸೂರ್ಯಕುಮಾರ್ ಯಾದವ್. -

ನವದೆಹಲಿ: ಭಾರತ ಟಿ20ಐ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಭವಿಷ್ಯದ ನಾಯಕತ್ವ ಬದಲಾವಣೆಯ ಕುರಿತು ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. ಯುವ ಪ್ರತಿಭೆ ಮತ್ತು ಎರಡೂ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಪ್ರಸ್ತುತ ನಾಯಕ ಶುಭಮನ್ ಗಿಲ್ (Shubman Gill) ಅವರಿಂದ ತಮ್ಮ ಟಿ20ಐ ನಾಯಕತ್ವವನ್ನು ಕಳೆದುಕೊಳ್ಳುವ ಭಯವಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ಭಯವು ತಮ್ಮನ್ನು ಉತ್ತಮವಾಗಿ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ ಎಂದು ಸೂರ್ಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ (IND vs AUS) ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
26ನೇ ವಯಸ್ಸಿನ ಶುಭಮನ್ ಗಿಲ್, ಟೀಮ್ ಇಂಡಿಯಾದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರಿಸಿದ್ದಾರೆ ಮತ್ತು ಇದೀಗ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಭವಿಷ್ಯದ ನಾಯಕ ಎಂದು ಪರಿಗಣಿಸಲ್ಪಡುತ್ತಿದ್ದಾರೆ. ಗಿಲ್ ಈಗಾಗಲೇ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಮುನ್ನಡೆಸುತ್ತಿದ್ದಾರೆ ಮತ್ತು ಟಿ20ಐ ಸ್ವರೂಪದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಉಪನಾಯಕರಾಗಿದ್ದಾರೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಜಯಗಳಿಸಿದ ನಂತರ ಅವರಿಗೆ (ಸೂರ್ಯಕುಮಾರ್) ಈ ಜವಾಬ್ದಾರಿಯನ್ನು ನೀಡಲಾಗಿತ್ತು.
IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಇರ್ಫಾನ್ ಪಠಾಣ್!
ಇತ್ತೀಚಿನ ಸಂದರ್ಶನವೊಂದರಲ್ಲಿ ಸೂರ್ಯಕುಮಾರ್ ಯಾದವ್ ಈ ಬದಲಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ನಾನು ಸುಳ್ಳು ಹೇಳುವುದಿಲ್ಲ, ಎಲ್ಲರಿಗೂ ಈ ಭಯ ಇದ್ದೇ ಇರುತ್ತದೆ. ಆದರೆ ಆ ಭಯವು ನಿಮ್ಮನ್ನು ಪ್ರೇರೇಪಿಸುತ್ತದೆ," ಎಂದ ಅವರು, ಗಿಲ್ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. "ಅವರು ಎರಡೂ ಸ್ವರೂಪಗಳ ನಾಯಕರಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮೈದಾನದಲ್ಲಿ ಮತ್ತು ಹೊರಗೆ ನನ್ನ ಮತ್ತು ಅವರ ನಡುವಿನ ಸ್ನೇಹ ಅದ್ಭುತವಾಗಿದೆ. ಗಿಲ್ ಅವರ ಪ್ರದರ್ಶನ ಮತ್ತು ವ್ಯಕ್ತಿತ್ವವು ಉತ್ತಮ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ," ಎಂದು ಅವರು ಒತ್ತಿ ಹೇಳಿದ್ದಾರೆ.
ಭಯವು ತನ್ನ ಪ್ರದರ್ಶನವನ್ನು ನಿರ್ದೇಶಿಸಲು ಬಿಡುವುದಿಲ್ಲ ಎಂದು ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದರು. ತಮ್ಮ ಮನಸ್ಥಿತಿಯನ್ನು ಒತ್ತಿ ಹೇಳುತ್ತಾ, "ನಾನು ಅಂತಹ ವಿಷಯಗಳಿಂದ ಪ್ರಭಾವಿತನಾಗಿ ಹೆಚ್ಚು ಯೋಚಿಸುವ ವ್ಯಕ್ತಿಯಾಗಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ಮೊದಲ ಪಂದ್ಯವನ್ನು ನಾನು ಈ ರೀತಿ ಆಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನಾನು ಬಹಳ ಹಿಂದೆಯೇ ಆ ಭಯವನ್ನು ನನ್ನ ಹಿಂದೆ ಇಟ್ಟಿದ್ದೇನೆ. ಒಬ್ಬ ಆಟಗಾರ ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ತನ್ನ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದರೆ, ಉಳಿದೆಲ್ಲವೂ ಅನುಸರಿಸುತ್ತದೆ," ಎಂದು ಅವರು ತಿಳಿಸಿದ್ದಾರೆ.
IND vs AUS 1st ODI: ತಂಡಗಳ ಪ್ಲೇಯಿಂಗ್ 11, ಪಂದ್ಯ ಆರಂಭ, ಪ್ರಸಾರದ ಮಾಹಿತಿ ಇಲ್ಲಿದೆ
ಆಸ್ಟ್ರೇಲಿಯಾ ಎದುರು ಟಿ20ಐ ಸರಣಿಗೆ ಸೂರ್ಯಕುಮಾರ್ ಸಜ್ಜು
ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ, ಟಿ20ಐ ಸರಣಿಯನ್ನು ಆಡಲಿದೆ. ಅಕ್ಟೋಬರ್ 29 ರಂದು ಮೊದಲನೇ ಟಿ20 ಪಂದ್ಯದ ಮೂಲಕ ಟಿ20ಐ ಸರಣಿ ಆರಂಭವಾಗಲಿದ್ದು, ನವೆಂಬರ್ 8 ರಂದು ಕೊನೆಯ ಪಂದ್ಯದ ಮೂಲಕ ಚುಟುಕು ಸರಣಿ ಅಂತ್ಯವಾಗಲಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸೂರ್ಯ, ಆಸೀಸ್ ಎದುರು ಉತ್ತಮ ಪ್ರದರ್ಶನ ತೋರಬೇಕಾದ ಅಗತ್ಯವಿದೆ.