ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICC T20I Rankings: ಎರಡನೇ ಸ್ಥಾನಕ್ಕೆ ಕುಸಿದ ಸ್ಮೃತಿ ಮಾಂಧನಾ, ಅಗ್ರ ಸ್ಥಾನಕ್ಕೇರಿದ ದೀಪ್ತಿ ಶರ್ಮಾ!

Women's ICC T20I Rankings: ಭಾರತ ಮಹಿಳಾ ಟಿ20ಐ ತಂಡದ ಉಪ ನಾಯಕಿ ಸ್ಮೃತಿ ಮಂಧಾನಾ ಅವರು ಐಸಿಸಿ ಟಿ20ಐ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಡ್ಟ್ ಅವರು ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಇನ್ನು ಬೌಲರ್‌ಗಳ ಶ್ರೇಯಾಂಕದಲ್ಲಿ ಭಾರತದ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

ಟಿ20ಐ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ಸ್ಮೃತಿ ಮಂಧಾನ.

ನವದೆಹಲಿ: ಭಾರತ ತಂಡಕ್ಕೆ ಮೊದಲ ಮಹಿಳಾ ವಿಶ್ವಕಪ್ ಟ್ರೋಫಿ (Women's ODI World Cup 2025) ತಂದುಕೊಟ್ಟ ಆಲ್‌ರೌಂಡರ್ ದೀಪ್ತಿ ಶರ್ಮಾ (Deepti Sharma) ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಅವರು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಮಂಗಳವಾರ ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಐಸಿಸಿ ಟಿ20ಐ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ, ಭಾರತದ ಉಪನಾಯಕಿ ಮತ್ತು ಅನುಭವಿ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನಾ (Smriti Mandhana) ಹಿನ್ನಡೆ ಅನುಭವಿಸಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನಾ ಅವರಿಂದ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಧಾನಾ ಈಗ ನಂಬರ್ ಒನ್ ಸ್ಥಾನವನ್ನು ತಲುಪಿದ್ದಾರೆ. ಶ್ರೇಯಾಂಕದಲ್ಲಿ ಇತರ ಹಲವಾರು ಭಾರತೀಯ ಆಟಗಾರ್ತಿಯರು ಸಹ ತಮ್ಮ ಸ್ಥಾನಗಳಲ್ಲಿ ಬದಲಾವಣೆಯನ್ನು ಕಂಡಿದ್ದಾರೆ.

ಐಸಿಸಿ ಮಂಗಳವಾರ ಮಹಿಳಾ ಟಿ20ಐ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ, ಇದರಲ್ಲಿ ದೀಪ್ತಿ ಶರ್ಮಾ ಆಸ್ಟ್ರೇಲಿಯಾದ ವೇಗದ ಬೌಲರ್ ಅನ್ನಾಬೆಲ್ ಸದರ್ಲೆಂಡ್‌ ಅವರನ್ನು ಕೇವಲ ಒಂದು ಪಾಯಿಂಟ್‌ನಿಂದ ಹಿಂದಿಕ್ಕಿದ್ದಾರೆ. 28ನೇ ಪ್ರಾಯದ ಆಫ್-ಸ್ಪಿನ್ನರ್ ದೀಪ್ತಿ ಶರ್ಮಾ 737 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ ಬೌಲರ್ ಆಗಿದ್ದಾರೆ, ಆದರೆ ಸದರ್ಲ್ಯಾಂಡ್ 736 ಅಂಕಗಳನ್ನು ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ದೀಪ್ತಿ ಅವರ ಅದ್ಭುತ ಪ್ರದರ್ಶನದಿಂದಾಗಿ ಅವರ ಶ್ರೇಯಾಂಕ ಏರಿಕೆಯಾಗಿದೆ. ಪಂದ್ಯದಲ್ಲಿ ಅವರು ಕೇವಲ 20 ರನ್‌ಗಳಿಗೆ 1 ವಿಕೆಟ್ ಪಡೆದರು.

ಕ್ರಿಕೆಟ್‌ ವೃತ್ತಿ ಜೀವನಕ್ಕೆ ಎಂಎಸ್‌ ಧೋನಿ ವಿಲನ್‌?: ವದಂತಿಗಳ ಬಗ್ಗೆ ಅಮಿತ್‌ ಮಿಶ್ರಾ ಸ್ಪಷ್ಟನೆ!

2025ರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅವರು ನಿರ್ಣಾಯಕ ಅರ್ಧಶತಕ ಗಳಿಸಿದ್ದಲ್ಲದೆ, 5 ವಿಕೆಟ್‌ಗಳನ್ನು ಸಹ ಪಡೆದಿದ್ದರು. ಅವರ ಆಲ್‌ರೌಂಡ್ ಪ್ರದರ್ಶನದ ಸಹಾಯದಿಂದ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಭಾರತೀಯ ವೇಗಿ ಅರುಂಧತಿ ರೆಡ್ಡಿ ಕೂಡ ಬೌಲಿಂಗ್ ಶ್ರೇಯಾಂಕದಲ್ಲಿ 5 ಸ್ಥಾನಗಳನ್ನು ಗಳಿಸಿ, ಇದೀಗ 36ನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತೀಯ ಸ್ಪಿನ್ನರ್ ಶ್ರೀ ಚರಣಿ ಅವರು ಶ್ರೇಯಾಂಕದಲ್ಲಿ 19 ಸ್ಥಾನಗಳನ್ನು ಜಿಗಿದು ಈಗ 69ನೇ ಸ್ಥಾನಕ್ಕೆ ತಲುಪಿದ್ದಾರೆ.

ಅಗ್ರ 10ಕ್ಕೆ ಲಗ್ಗೆಯಿಟ್ಟ ಜೆಮಿಮಾ ರೊಡ್ರಿಗಸ್‌

ಜೆಮಿಮಾ ರೊಡ್ರಿಗಸ್‌ ಅವರು ಮಹಿಳಾ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ. ಸ್ಮೃತಿ ಮಂಧಾನಾ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮ್ಯಾಚ್‌ ವಿನ್ನಿಂಗ್‌ ಶತಕ ಸಿಡಿಸಿದ್ದ ಜೆಮಿಮಾ ರೊಡ್ರಿಗಸ್ ಕೂಡ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಅವರು ಈಗ ಟಾಪ್ -10 ರಲ್ಲಿ ಸ್ಥಾನ ಪಡೆದಿದ್ದಾರೆ. ವಿಶಾಖಪಟ್ಟಣದಲ್ಲಿ ಶ್ರೀಲಂಕಾ ವಿರುದ್ಧ 44 ಎಸೆತಗಳಲ್ಲಿ 69 ರನ್ ಗಳಿಸಿದ ಜೆಮಿಮಾ, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ಇದೀಗ ಐದು ಸ್ಥಾನಗಳನ್ನು ಜಿಗಿದು ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 9ನೇ ಸ್ಥಾನಕ್ಕೆ ತಲುಪಿದ್ದಾರೆ.

Virat Kohli: ವಿರಾಟ್‌ ಕೊಹ್ಲಿ ಭಾಗವಹಿಸಬೇಕಿದ್ದ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಇಲ್ಲ, ಮತ್ತೆಲ್ಲಿ?

ಭಾರತದ ಉಪನಾಯಕಿ ಸ್ಮೃತಿ ಮಂಧಾನ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಡ್ ವಿರುದ್ಧ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ವೊಲ್ವಾರ್ಡ್ ಇದೀಗ ಅಗ್ರ ಬ್ಯಾಟರ್‌ ಆಗಿದ್ದರೆ, ಸ್ಮೃತಿ ಮಂಧಾನ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದಾಗ್ಯೂ, ಸ್ಮೃತಿ ಶ್ರೇಯಾಂಕದಲ್ಲಿ ಅತ್ಯುನ್ನತ ಶ್ರೇಯಾಂಕದಲ್ಲಿರುವ ಭಾರತೀಯ ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ. ವೊಲ್ವಾರ್ಡ್ ಈ ಹಿಂದೆ ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ್ದರು. ವೋಲ್ವಾರ್ಡ್ 820 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಇದು ಅವರ ಅತ್ಯುತ್ತಮ ರೇಟಿಂಗ್ ಪಾಯಿಂಟ್‌ಗಳಾಗಿವೆ. ವೋಲ್ವಾರ್ಡ್ ಸ್ಮೃತಿಗಿಂತ ಒಂಬತ್ತು ಪಾಯಿಂಟ್‌ಗಳ ಮುಂದಿದ್ದಾರೆ.