ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG: ವಿರಾಟ್‌ ಕೊಹ್ಲಿ ಸ್ಥಾನಕ್ಕೆ ಗಾಯಕ್ವಾಡ್‌ ಬದಲು ಜೈಸ್ವಾಲ್‌ಗೆ ಚಾನ್ಸ್‌ ನೀಡಲು ಕಾರಣ ತಿಳಿಸಿದ ಆಕಾಶ್‌ ಚೋಪ್ರಾ!

IND vs AFG: ವಿರಾಟ್‌ ಕೊಹ್ಲಿ ಅವರ ಬದಲಿಯಾಗಿ ಭಾರತದ ಏಕದಿನ ತಂಡದಲ್ಲಿ ಯಶಸ್ವಿ ಜೈಸ್ವಾಲ್‌ ಅವರನ್ನು ಆಯ್ಕೆ ಮಾಡಿರುವ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಸಮರ್ಥಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಗಾಯದಿಂದ ಇನ್ನೂ ಗುಣಮುಖರಾಗದ ಕಾರಣ, ಅವರು ಆಫ್ಘನ್‌ ವಿರುದ್ಧದ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

ಯಶಸ್ವಿ ಜೈಸ್ವಾಲ್‌ಗೆ ಭಾರತ ತಂಡದಲ್ಲಿ ಸ್ಥಾನ ನೀಡಲು ಕಾರಣ ತಿಳಿಸಿದ ಚೋಪ್ರಾ.

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ (IND vs AFG) ಎಡಗೈ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ (Yashasvi Jaiswal) ಅವರನ್ನು ಆರಂಭದಲ್ಲಿ ಪರಿಗಣಿಸಿರಲಿಲ್ಲ. ಆದರೆ, ಮಾಜಿ ನಾಯಕ ವಿರಾಟ್‌ ಕೊಹ್ಲಿ (virat Kohli) ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರ ನಡೆದ ಬಳಿಕ ಅವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ ಅವರನ್ನು ಕರೆಸಿಕೊಳ್ಳಲಾಗಿದೆ. 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕೊಹ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಆಯ್ಕೆದಾರರು ಋತುರಾಜ್‌ ಗಾಯಕ್ವಾಡ್‌ ಅವರನ್ನು ಪರಿಗಣಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಂತಿಮವಾಗಿ ಯಶಸ್ವಿ ಜೈಸ್ವಾಲ್‌ಗೆ ಗ್ರೀನ್‌ ಸಿಗ್ನಲ್‌ ನೀಡಲಾಯಿತು. ಇದೀಗ ಬಿಸಿಸಿಐ ಆಯ್ಕೆದಾರರ ಈ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash chopra) ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, "ವಿರಾಟ್‌ ಕೊಹ್ಲಿ ಅವರ ಬದಲಿ ಸ್ಥಾನಕ್ಕೆ ಋತುರಾಜ್‌ ಗಾಯಕ್ವಾಡ್‌ ಅವರನ್ನು ಏಕೆ ಆಯ್ಕೆ ಮಾಡಿಲ್ಲ? ನಾವು ಹೇಳುತ್ತಿದ್ದೇವೆ, ಇದೀಗ ಭಾರತ ಎ ತಂಡಕ್ಕೆ ತ್ರಿಕೋನ ಸರಣಿ ನಡೆಯುತ್ತಿದೆ ಹಾಗೂ ಈ ಸರಣಿಯಲ್ಲಿ ಗಾಯಕ್ವಾಡ್‌ ಅವರನ್ನು ಉಪ ನಾಯಕನಾಗಿ ನೇಮಿಸಲಾಗಿದೆ, ಮೊದಲನೇ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಶತಕ ಗಳಿಸಿದ್ದಾರೆ. ಅವರು ಏಕೆ ಭಾರತ ಏಕದಿನ ತಂಡದಲ್ಲಿ ಆಯ್ಕೆಯಾಗಿಲ್ಲ ಎನ್ನುವುದಕ್ಕೆ ಒಂದೇ ಕಾರಣ. ಅವರಿಗೂ ಹಾಗೂ ಈಗ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್‌ಗೂ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುವುದಿಲ್ಲ," ಎಂದು ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್‌ ಔಟ್‌, ಇಶಾನ್‌ ಕಿಶನ್‌ ಇನ್‌; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

"ಯಶಸ್ವಿ ಜೈಸ್ವಾಲ್‌ ಹಲವು ವರ್ಷಗಳಿಂದ ಭಾರತ ಟೆಸ್ಟ್‌ ತಂಡದಲ್ಲಿ ಆಡುತ್ತಾ ಬಂದಿದ್ದಾರೆ ಹಾಗೂ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿಯೂ ಅವರು ಆಡಿದ್ದರು. ಹಾಗಾಗಿ ಏಕದಿನ ತಂಡದಲ್ಲಿಯೂ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಅನ್ನೇ ಮುಂದುವರಿಸುವುದು ಸಾಮಾನ್ಯ ಜ್ಞಾನ. ಈ ಕಾರಣದಿಂದಲೇ ಅವರು ಚಂಡೀಗಢದಿಂದ ಧರ್ಮಶಾಲಾಗೆ ಬಂದಿದ್ದಾರೆ. ಅಲ್ಲಿಂದ ಇಲ್ಲಿಗೆ ಸಣ್ಣ ಪ್ರಯಾಣ. ಅಂದ ಹಾಗೆ ಪ್ಲೇಯಿಂಗ್‌ xiನಲ್ಲಿ ಇವರಿಗೆ ಸ್ಥಾನ ಸಿಗುವುದಿಲ್ಲ, ಇವರ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ ಆಡುತ್ತಾರೆ," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.

ಆಫ್ಘಾನ್‌ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಹೀಗಿರಲಿದೆ ಭಾರತ ಆಡುವ ಬಳಗ

ಋತುರಾಜ್‌ ಗಾಯಕ್ವಾಡ್‌ ಹಾಗೂ ಯಶಸ್ವಿ ಜೈಸ್ವಾಲ್‌ ಇಬ್ಬರೂ ತಮ್ಮ-ತಮ್ಮ ಕೊನೆಯ ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿರುವುದು ಆಸಕ್ತದಾಯಕ ಸಂಗತಿಯಾಗಿದೆ. ರಾಯ್ಪುರದಲ್ಲಿ ಸರಣಿಯ ಎರಡನೇ ಪಂದ್ಯದಲ್ಲಿ ಗಾಯಕ್ವಾಡ್‌ ಸೆಂಚುರಿಯನ್ನು ಬಾರಿಸಿದ್ದರು. ನಂತರ ಮೂರನೇ ಪಂದ್ಯದಲ್ಲಿ ಅವರಿಗೆ ಬ್ಯಾಟ್‌ ಮಾಡಲು ಅವಕಾಶ ಸಿಕ್ಕಿರಲಿಲ್ಲ.

ಯಶಸ್ವಿ ಜೈಸ್ವಾಲ್‌ ಮೂರನೇ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದರು. ಇದಾದ ಬಳಿಕ ನ್ಯೂಜಿಲೆಂಡ್‌ ವಿರುದ್ಧದ ತವರು ಏಕದಿನ ಸರಣಿಯಿಂದ ಗಾಯಕ್ವಾಡ್‌ ಅವರನ್ನು ಕೈ ಬಿಡಲಾಗಿತ್ತು ಹಾಗೂ ಈ ಸರಣಿಯಲ್ಲಿ ಋತುರಾಜ್‌ ಗಾಯಕ್ವಾಡ್‌ ಬೆಂಚ್‌ ಕಾದಿದ್ದರು.

2027ರ ಏಕದಿನ ವಿಶ್ವಕಪ್‌ ಟೂರ್ನಿ ಅಕ್ಟೋಬರ್‌ 4 ರಂದು ಆರಂಭ, ನವೆಂಬರ್‌ 21ಕ್ಕೆ ಫೈನಲ್‌!

ಒಡಿಐ ಸರಣಿಯ ವೇಳಾಪಟ್ಟಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಪಂದ್ಯಗಳು ಕ್ರಮವಾಗಿ ಜೂನ್ 13, 17 ಮತ್ತು 20 ರಂದು ಧರ್ಮಶಾಲಾ, ಲಖನೌ ಹಾಗೂ ಚೆನ್ನೈ ನಗರಗಳಲ್ಲಿ ನಡೆಯಲಿವೆ.ಇದಕ್ಕೂ ಮುನ್ನ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಇನಿಂಗ್ಸ್ ಅಂತರದ ಭರ್ಜರಿ ಜಯ ದಾಖಲಿಸಿತ್ತು. ಭಾರತದ ಸಂಪೂರ್ಣ ಮೇಲುಗೈ ಕಂಡುಬಂದ ಈ ಪಂದ್ಯ ಮೂರನೇ ದಿನವೇ ಮುಕ್ತಾಯಗೊಂಡಿದ್ದು, ಆತಿಥೇಯರ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿತ್ತು.