2027ರ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 4 ರಂದು ಆರಂಭ, ನವೆಂಬರ್ 21ಕ್ಕೆ ಫೈನಲ್!
2027 Men's ODI World Cup Schedule: 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಜಂಟಿ ಆತಿಥ್ಯದಲ್ಲಿ 50 ಓವರ್‌ಗಳ ಟೂರ್ನಿ ನಡೆಯಲಿದೆ. 2003ರ ಬಳಿಕ ಇದೇ ಮೊದಲ ಬಾರಿ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ಟೂರ್ನಿನಡೆಯಲಿದೆ. ಅಂದ ಹಾಗೆ ಈ ಟೂರ್ನಿ ಅಕ್ಟೋಬರ್ 4 ರಂದು ಆರಂಭವಾಗಿ, ನವೆಂಬರ್ 21ರಂದು ಫೈನಲ್ ಮೂಲಕ ಅಂತ್ಯವಾಗಲಿದೆ.
2027ರ ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ -
ನವದೆಹಲಿ: ಬಹುನಿರೀಕ್ಷಿತ 2027ರ ಐಸಿಸಿ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ವರ್ಷ ಬಾಕಿ ಇದೆ. 2003ರ ಬಳಿಕ ಇದೇ ಮೊದಲ ಬಾರಿ ಆಫ್ರಿಕಾ ಉಪಖಂಡದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. 2027ರ ಅಕ್ಟೋಬರ್ 4 ರಿಂದ ನವೆಂಬರ್ 21ರವರೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿ 50 ಓವರ್‌ಗಳ ಟೂರ್ನಿ ನಡೆಯಲಿದೆ. ಕಳೆದ ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದಿದ್ದ ಐಸಿಸಿ (ICC) ಬೋರ್ಡ್ ಮೀಟಿಂಗ್‌ನಲ್ಲಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇನ್ನು ಜುಲೈನಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆಯಲಿರುವ ವಾರ್ಷಿಕ ಸಭೆಯಲ್ಲಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಪ್ರಕಾರ, 50 ಓವರ್‌ಗಳ ಟೂರ್ನಿಯ ಬಹುತೇಕ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಲಿದೆ. ಟೂರ್ನಿಯ 54 ಪಂದ್ಯಗಳ ಪೈಕಿ 41 ಪಂದ್ಯಗಳು ದಕ್ಷಿಣ ಆಫ್ರಿಕಾದ ಎಂಟು ಸ್ಥಳಗಳಲ್ಲಿ ನಡೆಯಲಿವೆ. ಇನ್ನುಳಿದ 10 ಪಂದ್ಯಗಳ ಪೈಕಿ 8 ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಹೊಸದಾಗಿ ನಿರ್ಮಿಸಿರುವ ವಿಕ್ಟೋರಿಯಾ ಫಾಲ್ಸ್‌ನಲ್ಲಿ ನಡೆಯಲಿವೆ. ನಮೀಬಿಯಾದಲ್ಲಿ ಇನ್ನುಳಿದ ಮೂರು ಪಂದ್ಯಗಳು ನಡೆಯಬಹುದು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ 2027ರ ಒಡಿಐ ವಿಶ್ವಕಪ್ ಭವಿಷ್ಯ ನುಡಿದ ಆರ್ ಅಶ್ವಿನ್!
ನಮೀಬಿಯಾದ ವಿಕ್ಟೋರಿಯಾ ಫಾಲ್ಸ್‌ನಲ್ಲಿರುವ ಫಾಲೆ ಮೊಸಿ ಒ ಟುನ್ಯಾ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದ ಕಾಮಗಾರಿ ಈ ವರ್ಷದ ಅಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳು ಇಲ್ಲಿ ನಡೆಯುದಕ್ಕೂ ಮುನ್ನ ಮುಂದಿನ ವರ್ಷ ಮೇ ತಿಂಗಳಲ್ಲಿ ದೇಶಿ ಕ್ರಿಕೆಟ್ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
2027ರ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿದ್ದು, ಹಿಂದಿನ ಎರಡು ವಿಶ್ವಕಪ್ ಟೂರ್ನಿಗಳಿಗಿಂತ ಮುಂಚೆ ಬಳಸಲಾಗಿದ್ದ ಮಾದರಿಯನ್ನು ಮತ್ತೆ ಅನುಸರಿಸಲಾಗುತ್ತದೆ. ತಂಡಗಳನ್ನು ತಲಾ ಏಳು ತಂಡಗಳಿರುವ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲಿವೆ.
IND-A vs AFG-A: 200ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದರೂ ಸಿಕ್ಸರ್ ಬಾರಿಸಿದ ವೈಭವ್ ಸೂರ್ಯವಂಶಿ!
ಆತಿಥೇಯ ರಾಷ್ಟ್ರಗಳಲ್ಲೊಂದಾದ ದಕ್ಷಿಣ ಆಫ್ರಿಕಾ ಮತ್ತು ಪೂರ್ಣ ಸದಸ್ಯ ರಾಷ್ಟ್ರವಾದ ಜಿಂಬಾಬ್ವೆ ಈಗಾಗಲೇ ನೇರವಾಗಿ ಅರ್ಹತೆ ಪಡೆದುಕೊಂಡಿವೆ. ಆದರೆ ನಮೀಬಿಯಾ ಪೂರ್ಣ ಸದಸ್ಯ ರಾಷ್ಟ್ರವಲ್ಲದ ಕಾರಣ, ಸಾಮಾನ್ಯ ಅರ್ಹತಾ ಪ್ರಕ್ರಿಯೆಯ ಮೂಲಕವೇ ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆಯಬೇಕಾಗುತ್ತದೆ. ಈ ಮಾದರಿಯು ಹೆಚ್ಚು ತಂಡಗಳಿಗೆ ಅವಕಾಶ ಕಲ್ಪಿಸುವುದರ ಜೊತೆಗೆ, ಟೂರ್ನಿಯಲ್ಲಿ ಸ್ಪರ್ಧಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಈ ಟೂರ್ನಿಯು 2027-31ರ ಐಸಿಸಿ ಭವಿಷ್ಯದ ಪ್ರವಾಸ ಕಾರ್ಯಕ್ರಮ ಅಡಿಯಲ್ಲಿ ನಡೆಯುವ ಮೊದಲ ಐಸಿಸಿ ಟೂರ್ನಿಯಾಗಿಯೂ ಗುರುತಿಸಿಕೊಳ್ಳಲಿದೆ. ಹೊಸ ಎಫ್‌ಟಿಪಿ ಕುರಿತ ಚರ್ಚೆಗಳು ಇನ್ನೂ ಮುಂದುವರಿದಿದ್ದು, ಅದರಲ್ಲಿನ ಪ್ರಮುಖ ವಿಷಯಗಳಲ್ಲಿ ಒಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭವಿಷ್ಯದ ರಚನೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಐಸಿಸಿ ಪುರುಷರ ಏಕದಿನ ತಂಡ ಶ್ರೇಯಾಂಕ: ಅಗ್ರ ಸ್ಥಾನ ಉಳಿಸಿಕೊಂಡ ಭಾರತ
ಇದರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಎಲ್ಲಾ 12 ಪೂರ್ಣ ಸದಸ್ಯ ರಾಷ್ಟ್ರಗಳಿಗೆ ವಿಸ್ತರಿಸುವ ಸಾಧ್ಯತೆ ಹಾಗೂ ಏಕೈಕ (ಒನ್-ಆಫ್) ಟೆಸ್ಟ್ ಪಂದ್ಯಗಳನ್ನು ಕೂಡ ಟೂರ್ನಿಯ ಭಾಗವನ್ನಾಗಿ ಸೇರಿಸುವ ಪ್ರಸ್ತಾವನೆಗಳು ಪರಿಗಣನೆಯಲ್ಲಿವೆ. ಈ ಬದಲಾವಣೆಗಳು ಜಾರಿಯಾದರೆ, ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಸಿಗುವ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ವ್ಯಾಪ್ತಿ ಮತ್ತು ಸ್ಪರ್ಧಾತ್ಮಕತೆಯೂ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.
ಆಸ್ಟ್ರೇಲಿಯಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದ್ದು, 1987, 1999, 2003, 2007, 2015 ಹಾಗೂ 2023ರಲ್ಲಿ ಪ್ರಶಸ್ತಿ ಗೆದ್ದು ಒಟ್ಟು ಆರು ವಿಶ್ವಕಪ್ ಕಿರೀಟಗಳನ್ನು ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆ, ಭಾರತ ಮತ್ತು ವೆಸ್ಟ್ ಇಂಡೀಸ್ ತಲಾ ಎರಡು ಬಾರಿ ವಿಶ್ವಕಪ್ ಪ್ರಶಸ್ತಿ ಜಯಿಸಿರುವ ಸಾಧನೆ ಹೊಂದಿವೆ. ಭಾರತ 1983 ಮತ್ತು 2011ರಲ್ಲಿ ವಿಶ್ವಕಪ್ ಗೆದ್ದಿದ್ದರೆ, ವೆಸ್ಟ್ ಇಂಡೀಸ್ 1975 ಮತ್ತು 1979ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.