ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೂರನೇ ಟಿ20ಐನಲ್ಲಿ ವೈಭವ್‌ ಸೂರ್ಯವಂಶಿ ಆಡ್ತಾರಾ? ಬಿಗ್‌ ಅಪ್‌ಡೇಟ್‌ ನೀಡಿದ ಶ್ರೇಯಸ್‌ ಅಯ್ಯರ್‌!

ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ಬಳಿಕ ಮಾತನಾಡಿದ ಟೀಮ್‌ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇದುವರೆಗೆ ಆಡುವ ಅವಕಾಶ ಪಡೆಯದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ನೀಡುವ ಬಗ್ಗೆ ಶ್ರೇಯಸ್‌ ಸುಳಿವು.

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಎರೆಡನೇ ಪಂದ್ಯವನ್ನು (IND vs AFG) 7 ವಿಕೆಟ್‌ಗಳಿಣದ ಗೆದ್ದ ಬಳಿಕ 3 ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ಈಗಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿದೆ. ಹೀಗಾಗಿ ಗುರುವಾರ ನಡೆಯಲಿರುವ ಮೂರನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ತಂಡದ ಬೆಂಚ್‌ ಸಾಮರ್ಥ್ಯವನ್ನು ಪರೀಕ್ಷಿಸಲು ಟೀಮ್‌ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಸುಳಿವು ನೀಡಿದ್ದಾರೆ. ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಗೂ (Vaibhav Sooryavanshi) ಪ್ಲೇಯಿಂಗ್‌ Xiನಲ್ಲಿ ಅವಕಾಶ ನೀಡುವ ಬಗ್ಗೆ ಕ್ಯಾಪ್ಟನ್ ಹೇಳಿದ್ದಾರೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಟಿ20ಐ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದ ಬಳಿಕ ಮಾತನಾಡಿದ ಅಯ್ಯರ್, ಅಂತಿಮ ಪಂದ್ಯದಲ್ಲಿ ವಿಭಿನ್ನ ತಂಡದ ಸಂಯೋಜನೆಗಳನ್ನು ಪ್ರಯತ್ನಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಇದರಿಂದ ಇದುವರೆಗೆ ಆಡುವ ಬಳಗದಲ್ಲಿ ಅವಕಾಶ ಪಡೆಯದ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆಯಿದೆ.

ವಿಶೇಷವಾಗಿ 15ರ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮೂರನೇ ಟಿ20ಐನಲ್ಲಿ ಕಣಕ್ಕೆ ಇಳಿಯುವ ಬಗ್ಗೆ ಚರ್ಚೆ ಜೋರಾಗಿದೆ. ಅಯ್ಯರ್ ಅವರ ಹೇಳಿಕೆಯ ಪ್ರಕಾರ, ತಂಡದಲ್ಲಿ ಇದುವರೆಗೆ ಹೊರಗುಳಿದಿರುವ ಆಟಗಾರರಿಗೆ ಪಂದ್ಯದಲ್ಲಿ ಅವಕಾಶ ನೀಡಿ, ವಿಕೆಟ್‌ನ ಪರಿಸ್ಥಿತಿಗೆ ಹೊಂದಿಕೊಳ್ಳಲು ಹಾಗೂ ಪಂದ್ಯ ಅಭ್ಯಾಸ ಪಡೆಯಲು ಅವಕಾಶ ನೀಡಲು ಭಾರತ ಬಯಸಿದೆ.

IND vs AFG: ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ಗೆ ಆಫ್ಘನ್ ತತ್ತರ, ಭಾರತಕ್ಕೆ ಟಿ20ಐ ಸರಣಿ!

“ಖಂಡಿತವಾಗಿಯೂ. ಎಲ್ಲರೂ ವಿಕೆಟ್‌ಗೆ ಹೊಂದಿಕೊಳ್ಳಬೇಕು ಮತ್ತು ಸ್ವಲ್ಪ ಅಭ್ಯಾಸ ಪಡೆಯಬೇಕು ಎಂದು ನಾವು ಬಯಸುತ್ತೇವೆ. ಹೀಗಾಗಿ ಹೊರಗೆ ಕುಳಿತಿರುವ ಆಟಗಾರರಿಗೆ ಅವಕಾಶ ನೀಡಲು ಇದು ಉತ್ತಮ ಸಂದರ್ಭವಾಗಲಿದೆ,” ಎಂದು ಶ್ರೇಯಸ್‌ ಅಯ್ಯರ್ ಹೇಳಿದ್ದಾರೆ.

ನಾಯಕತ್ವದ ಆರಂಭದ ಬಗ್ಗೆ ಅಯ್ಯರ್ ಮಾತು

ತಮ್ಮ ಟಿ20ಐ ನಾಯಕತ್ವದ ಆರಂಭದ ದಿನಗಳ ಬಗ್ಗೆಯೂ ಶ್ರೇಯಸ್ ಅಯ್ಯರ್ ಮಾತನಾಡಿದ್ದಾರೆ. ನಾಯಕನಾಗಿ ಆರಂಭಿಕ ಹಂತದಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಸೋಲು ಅನುಭವಿಸಿದ್ದು ಕಠಿಣವಾಗಿತ್ತು ಎಂದು ಅವರು ಹೇಳಿದ್ದಾರೆ.

“ಆರಂಭದಲ್ಲಿ ಅದು ನುಂಗಲು ಕಷ್ಟವಾದ ಸಂಗತಿಯಾಗಿತ್ತು. ಆದರೆ ಪ್ರಯಾಣ ಯಾವಾಗಲೂ ಏರಿಳಿತಗಳಿಂದ ಕೂಡಿರುತ್ತದೆ. ಸಾಧ್ಯವಾದಷ್ಟು ಸಮತೋಲನದಲ್ಲಿರಬೇಕು. ಕ್ಷಣವನ್ನು ಆನಂದಿಸಬೇಕು ಮತ್ತು ಹಿಂದೆ ಏನಾಯಿತು ಎಂಬುದರ ಬಗ್ಗೆ ಹೆಚ್ಚು ಯೋಚಿಸಬಾರದು,” ಎಂದು ಅಯ್ಯರ್ ತಿಳಿಸಿದ್ದಾರೆ.

ತಮ್ಮ ಮೊದಲ ಸರಣಿ ಗೆಲುವನ್ನು ಅಫ್ಘಾನಿಸ್ತಾನ ವಿರುದ್ಧ ದಾಖಲಿಸಿರುವ ಅಯ್ಯರ್, ಪರಿಸ್ಥಿತಿಯನ್ನು ಸ್ವೀಕರಿಸಿದಷ್ಟೂ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ಒತ್ತಿ ಹೇಳಿದ್ದಾರೆ.

ʻವೈಫೈ ಸ್ವಿಚ್‌ ಆಫ್‌ ಮಾಡಿದ್ದೆʼ-ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬಾರದೆಂದ ಸಂಜು ಸ್ಯಾಮ್ಸನ್‌!

ನಿತೀಶ್ ಕುಮಾರ್ ರೆಡ್ಡಿ ಹೇಳಿಕೆ

ಎರಡನೇ ಟಿ20ಐನಲ್ಲಿ ಭಾರತದ ಗೆಲುವಿನಲ್ಲಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಪ್ರಮುಖ ಪಾತ್ರ ವಹಿಸಿದರು. ಅವರು 3 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು.ಬವತಮ್ಮ ವೇಗದ ಬೌಲಿಂಗ್‌ನಲ್ಲಿ ಸುಧಾರಣೆ ಕಂಡಿರುವುದಾಗಿ ನಿತೀಶ್ ಹೇಳಿದ್ದಾರೆ. “ನಾನು ಅತ್ಯುತ್ತಮ ಆಲ್‌ರೌಂಡರ್ ಆಗಬೇಕೆಂದು ಯಾವಾಗಲೂ ಬಯಸಿದ್ದೇನೆ. ಅದಕ್ಕಾಗಿ ನನಗೆ ಹೆಚ್ಚುವರಿ ವೇಗದ ಅಗತ್ಯವಿತ್ತು. ಇದೀಗ ಆ ವೇಗವನ್ನು ಪಡೆಯುತ್ತಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.