ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ವೈಟ್‌ಬಾಲ್ ಸರಣಿಗಳ (IND vs AUS) ಭಾರತ ತಂಡದಿಂದ ತನ್ನನ್ನು ಕೈ ಬಿಟ್ಟ ಬಗ್ಗೆ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ (IND vs WI) ಮೊಹಮ್ಮದ್ ಶಮಿ ಅವರನ್ನು ಕಡೆಗಣಿಸಲಾಗಿತ್ತು. ಇದೀಗ ಆಸ್ಟ್ರೇಲಿಯಾ ವಿರುದ್ದದ ಏಕದಿನ ಹಾಗೂಟಿ20ಐ ಸರಣಿಗಳಿಂದಲೂ ಕೈ ಬಿಡಲಾಗಿದೆ. ಅಕ್ಟೋಬರ್ 19 ರಂದು ಮೊದಲನೇ ಏಕದಿನ ಪಂದ್ಯದ ಮೂಲಕ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಇದೀಗ ಆಸ್ಟ್ರೇಲಿಯಾ ಪ್ರವಾಸದ ಮೂಲಕ ಭಾರತ ತಂಡಕ್ಕೆ ಮರಳಬಹುದು ಎಂದು ಹೇಳಲಾಗಿತ್ತು. ಆದರೆ,ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿ ಶಮಿಯನ್ನು ಆಯ್ಕೆಗೆ ಪರಿಗಣಿಸಿಲ್ಲ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, ತಮ್ಮ ಫಿಟ್‌ನೆಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದ್ದವು ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಶಮಿ ಬಗ್ಗೆ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಪ್ರತಿಕ್ರಿಯೆ ನೀಡಿದ್ದರು. ದೇಶಿ ಕ್ರಿಕೆಟ್ ಆಡದ ಕಾರಣ ಶಮಿ ರಾಷ್ಟೀಯ ತಂಡದ ಆಯ್ಕೆಗೆ ಅಲಭ್ಯರಾಗಿದ್ದಾರೆಂದು ತಿಳಿಸಿದ್ದಾರೆ.
IND vs AUS: ಕುಮಾರ ಸಂಗಕ್ಕಾರ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
"ನನ್ನ ಬಗ್ಗೆ ಸಾಕಷ್ಟು ಊಹಾಪೋಹಗಳು ಹಾಗೂ ಮೀಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಚಾಲ್ತಿಯಲ್ಲಿವೆ. ತಂಡಕ್ಕೆ ಆಯ್ಕೆಯಾಗುವುದು ನನ್ನ ಕೈಯಲ್ಲಿ ಇಲ್ಲ. ಇದು ಆಯ್ಕೆ ಸಮಿತಿ, ಕೋಚ್ ಹಾಗೂ ನಾಯಕನ ಕೆಲಸವಾಗಿದೆ. ಅವರು ಮನಸು ಮಾಡಿ ನನ್ನನ್ನು ಆಯ್ಕೆ ಮಾಡಿದರೆ ನಾನು ತಂಡದಲ್ಲಿ ಇರುತ್ತೇನೆ, ಇಲ್ಲವಾದಲ್ಲಿ ಇಲ್ಲ. ನನಗೆ ಇನ್ನಷ್ಟು ಹೆಚ್ಚಿನ ಸಮಯದ ಅಗತ್ಯವಿದೆ ಎನ್ನುವುದಾದರೆ, ಅದು ಅವರ ಕರೆಯಾಗಿದೆ. ಅವರು ಕರೆ ಮಾಡಿದಾಗ ನಾನು ಆಡಲು ಸಿದ್ದ," ಎಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಶಮಿ ಹೇಳಿದ್ದಾರೆ.
ತಮ್ಮ ಫಿಟ್‌ನೆಸ್ ಬಗ್ಗೆ ಮಾತನಾಡಿದ ಮೊಹಮ್ಮದ್ ಶಮಿ, ಫಿಟ್‌ನೆಸ್ ಬಗ್ಗೆ ಒಳ್ಳೆಯ ಭಾವನೆ ಉಂಟಾಗುತ್ತಿದೆ ಹಾಗೂ ಎಂದಿನಂತೆ ಸಾಮಾನ್ಯವಾಗಿ ಲಯದಲ್ಲಿ ಬೌಲ್ ಮಾಡುತ್ತಿದ್ದೇನೆ. ಶಮಿ ಕೊನೆಯ ಬಾರಿ ಈಸ್ಟ್ ಝೋನ್ ಪರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಇಲ್ಲಿ ಅವರು ಒಟ್ಟು 34 ಓವರ್‌ಗಳನ್ನು ಬೌಲ್ ಮಾಡಿದ್ದರು. ತಂಡದಿಂದ ದೂರ ಉಳಿದರೂ ಪ್ರೇರಣೆಯೊಂದಿಗೆ ಉಳಿಯುವುದು ಇಲ್ಲ ತುಂಬಾ ಮುಖ್ಯ. ಭಾರತ ತಂಡದ ಪರ ಆಡಲು ಇನ್ನಷ್ಟು ಉತ್ತಮವಾಗಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.
IND vs AUS: ರೋಹಿತ್ ಶರ್ಮಾ ಬಗ್ಗೆ ಬಿಸಿಸಿಐ ಸೆಲೆಕ್ಟರ್ಸ್‌ಗೆ ಎಚ್ಚರಿಕೆ ನೀಡಿದ ಮೊಹಮ್ಮದ್ ಕೈಫ್!
"ನನ್ನ ಫಿಟ್‌ನೆಸ್ ಕೂಡ ಚೆನ್ನಾಗಿದೆ. ಇನ್ನಷ್ಟು ಉತ್ತಮವಾಗಲು ನಾನು ಪ್ರಯತ್ನಿಸುತ್ತಿದ್ದೇನೆ ಏಕೆಂದರೆ ಮೈದಾನದಿಂದ ಹೊರಗೆ ಉಳಿದರೆ, ನೀವು ಪ್ರೇರೇಪಿತರಾಗಿ ಉಳಿಯುವುದು ತುಂಬಾ ಅಗತ್ಯವಾಗಿದೆ. ನಾನು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದೇನೆ. ನಾನು ಆರಾಮದಾಯಕವಾಗಿದ್ದೇನೆ, ನನ್ನ ಲಯ ಉತ್ತಮವಾಗಿದೆ ಎಂಬ ಭಾವನೆ ನನಗೆ ಉಂಟಾಗಿತ್ತು. ಅಲ್ಲಿ ನಾನು 35 ಓವರ್‌ಗಳನ್ನು ಬೌಲ್ ಮಾಡಿದ್ದೆ. ಅಂದ ಹಾಗೆ ನನ್ನ ಫಿಟ್‌ನೆಸ್‌ನಲ್ಲಿ ಯಾವುದೇ ಸಮಸ್ಯೆಗಳು ಇಲ್ಲ," ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ.
ಬಂಗಾಳ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಮೂಲಕ ರೆಡ್ ಬಾಲ್ ಕ್ರಿಕೆಟ್‌ಗೆ ಮರಳಲು ಮೊಹಮ್ಮದ್ ಶಮಿ ಎದುರು ನೋಡುತ್ತಿದ್ದಾರೆ. ಬಂಗಾಳ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಶಮಿ ಮುನ್ನಡೆಸಲಿದ್ದು, ಆಕಾಶ ದೀಪ್ ಮತ್ತು ಇಶಾನ್ ಪೊರೆಲ್ ಆಡಲಿದ್ದಾರೆ.