ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯ ಹೇಳಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಶತಕ ಹಾಗೂ ವಿರಾಟ್ ಕೊಹ್ಲಿಯ ಅರ್ಧಶತಕದ ಬಲದಿಂದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಗೆದ್ದುಕೊಂಡಿತು. ಇದು ರೋಹಿತ್ ಹಾಗೂ ಕೊಹ್ಲಿ ಪಾಲಿಗೆ ಕೊನೆಯ ಆಸ್ಟ್ರೇಲಿಯಾದ ಒಡಿಐ ಪಂದ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯವನ್ನು ಹೇಳಿದರು.
ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯ ಹೇಳಿದ ಕೊಹ್ಲಿ, ರೋಹಿತ್. -
ಸಿಡ್ನಿ: ರೋಹಿತ್ ಶರ್ಮಾ (Rohit Sharma) ಶತಕ ಹಾಗೂ ವಿರಾಟ್ ಕೊಹ್ಲಿಯ (Virat Kohli) ಅರ್ಧಶತಕದ ಬಲದಿಂದ ಭಾರತ ತಂಡ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ (IND vs AUS) ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ 1-2 ಅಂತರದಲ್ಲಿ ಏಕದಿನ ಸರಣಿಯನ್ನು ಸೋತರೂ ಕೊನೆಯ ಪಂದ್ಯವನ್ನು ಗೆದ್ದು ಗೌರವಯುತವಾಗಿ 50 ಓವರ್‌ಗಳ ಸರಣಿಯನ್ನು ಮುಗಿಸಿತು. ಅಂದ ಹಾಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಪಾಲಿಗೆ ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸವಾಗಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರೂ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಭಾವನಾತ್ಮಕ ವಿದಾಯವನ್ನು ಹೇಳಿದ್ದಾರೆ.
ಮೂರನೇ ಏಕದಿನ ಪಂದ್ಯದ ಬಳಿಕ ಈ ಇಬ್ಬರೂ ಸಂದರ್ಶನದಲ್ಲಿ ಭಾಗವಹಿಸಿದ್ದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧವನ್ನು ನೆನಪಿಸಿಕೊಂಡರು ಮತ್ತು ಕಳೆದ ಅನಕ ವರ್ಷಗಳಲ್ಲಿ ಅಭಿಮಾನಿಗಳು ನೀಡಿದ ಅಭಿಮಾನ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಈ ಜೋಡಿ ಮೂರನೇ ಏಕದಿನ ಪಂದ್ಯದಲ್ಲಿ ಈ ಇಬ್ಬರೂ ತಮ್ಮ ತಮ್ಮ ಕೊನೆಯ ಆಸ್ಟ್ರೇಲಿಯಾದಲ್ಲಿನ ಪಂದ್ಯದಲ್ಲಿ 168 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡವನ್ನು ಗೆಲ್ಲಿಸಿದರು. ಈ ಜೋಡಿಯ ಆಟವನ್ನು ಆಸೀಸ್ ಅಭಿಮಾನಿಗಳು ಕಣ್ತುಂಬಿಕೊಂಡರು.
IND vs ರೋಹಿತ್, ಕೊಹ್ಲಿ ಅಜೇಯ ಶತಕದ ಜತೆಯಾಟ; ವೈಟ್‌ವಾಶ್‌ನಿಂದ ಪಾರಾದ ಭಾರತ
ಭಾವನಾತ್ಮಕ ಸಂದೇಶ ಹಂಚಿಕೊಂಡ ಕೊಹ್ಲಿ
ಆಡಂ ಗಿಲ್‌ಕ್ರಿಸ್ಟ್ ಹಾಗೂ ರವಿ ಶಾಸ್ತ್ರಿ ನಡೆಸಿದ ಸಂದರ್ಶನದಲ್ಲಿ ಮೊದಲು ವಿರಾಟ್ ಕೊಹ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಆಸ್ಟ್ರೇಲಿಯಾ ಪ್ರವಾಸವನ್ನು ಭಾರತ ತಂಡ ಯಾವಾಗಲೂ ಇಷ್ಟಪಡುತ್ತದೆ. ದೊಡ್ಡ ಮತ್ತು ಉತ್ಸಾಹಭರಿತ ಜನಸಮೂಹದ ಮುಂದೆ ಆಡುವ ಸವಾಲನ್ನು ಆನಂದಿಸಿದೆ ಎಂದು ಹೇಳಿದ್ದಾರೆ.
"ನಾವು ಕೂಡ ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ದೇಶಕ್ಕೆ ಬಂದು ಇಷ್ಟು ದೊಡ್ಡ ಜನಸಮೂಹದ ಮುಂದೆ ಆಡಲು ನಾವು ಇಷ್ಟಪಡುತ್ತೇವೆ. ನಾವು ಇಲ್ಲಿಯೂ ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ. ಆದ್ದರಿಂದ, ನಮ್ಮನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನೀವು ಅದ್ಭುತರು; ನಮಗೆ ಇಲ್ಲಿ ಬೆಂಬಲದ ಕೊರತೆ ಎಂದಿಗೂ ಅನಿಸಿಲ್ಲ," ಎಂದು ಕ್ರಿಕೆಟ್ ದಂತಕಥೆ ತಿಳಿಸಿದ್ದಾರೆ.
Virat Kohli and Rohit Sharma post match interview ❤️ pic.twitter.com/xfi9nCJCKH
— Abhinav (@KohliArchives) October 25, 2025
ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಹಿಟ್‌ಮ್ಯಾನ್ ಧನ್ಯವಾದ
ವಿರಾಟ್ ಕೊಹ್ಲಿಯ ಭಾವನೆಗಳನ್ನು ರೋಹಿತ್ ಶರ್ಮ ಪ್ರತಿಧ್ವನಿಸುತ್ತಾ, 2008 ರಲ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮ ಪ್ರಯಾಣವು ಹೇಗೆ ಪ್ರಾರಂಭವಾಯಿತು ಎಂಬುದರಂತೆಯೇ ತನ್ನ ಆಸ್ಟ್ರೇಲಿಯಾ ಪ್ರಯಾಣವನ್ನು ಕೊನೆಗೊಳಿಸುವುದು ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದರು. ಆ ಪ್ರವಾಸದ ಸಮಯದಲ್ಲಿ, ಯುವ ಆಟಗಾರ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಅವರೊಂದಿಗೆ 87 ಎಸೆತಗಳಲ್ಲಿ 66 ರನ್ ಗಳಿಸಿ, ಸಿಬಿ ಸರಣಿಯ ಮೊದಲ ಫೈನಲ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.
"ನಾನು ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವುದನ್ನು ಯಾವಾಗಲೂ ಆನಂದಿಸಿದ್ದೇನೆ. ನನಗೆ 2008 ರ ಪ್ರೀತಿಯ ನೆನಪುಗಳಿವೆ, ಮತ್ತು ಅದನ್ನು ಮುಗಿಸಲು, ಆ ಮಾತುಕತೆಯನ್ನು ಪಡೆಯಲು, ಆ ಗೆಲುವನ್ನು ಪಡೆಯಲು ಮತ್ತು ಆ ಸಂಪರ್ಕವನ್ನು ಮತ್ತೆ ಅನುಭವಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ. ನಾವು ಆಸ್ಟ್ರೇಲಿಯಾಕ್ಕೆ ಹಿಂತಿರುಗುತ್ತೇವೆಯೇ ಎಂದು ನನಗೆ ತಿಳಿದಿಲ್ಲ, ಆದರೆ ನಾವು ಇಲ್ಲಿ ಆಡಿದ ಈ ಎಲ್ಲಾ ವರ್ಷಗಳಲ್ಲಿ ಇದು ತುಂಬಾ ಖುಷಿ ನೀಡಿದೆ. ಧನ್ಯವಾದಗಳು, ಆಸ್ಟ್ರೇಲಿಯಾ," ಎಂದು ವಿರಾಟ್ ಅವರ ಹೇಳಿಕೆಗಳಿಗೆ ರೋಹಿತ್ ಶರ್ಮಾ ಸೇರಿಸಿದರು.