ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ ಅಲ್ಲ! ಈ ಆಟಗಾರನ ಜೊತೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳಬೇಕೆಂದ ಟ್ರಾವಿಡ್‌ ಹೆಡ್‌!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇನ್ನೂ ಒಂದೇ ಒಂದು ದಿನ ಮಾತ್ರ ಬಾಕಿ ಇದೆ. ಇದರ ನಡುವೆ ಆಸ್ಟ್ರೇಲಿಯಾ ಓಪನಿಂಗ್‌ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌, ಭಾರತದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ರೋಹಿತ್‌ ಶರ್ಮಾ ಜೊತೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳಬೇಕೆಂದ ಹೆಡ್‌!

ರೋಹಿತ್‌ ಶರ್ಮಾ ಜೊತೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳಬೇಕೆಂದ ಟ್ರಾವಿಸ್‌ ಹೆಡ್. -

Profile Ramesh Kote Oct 17, 2025 4:15 PM

ಪರ್ತ್‌: ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit sharma) ಅವರನ್ನು ಆಸ್ಟ್ರೇಲಿಯಾ ಸ್ಪೋಟಕ ಆರಂಭಿಕ ಟ್ರಾವಿಸ್‌ ಹೆಡ್‌ (Travis Head) ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರ ಆಟವನ್ನು ವೀಕ್ಷಿಸುವ ಮೂಲಕ ಸಾಕಷ್ಟು ಕಲಿತಿದ್ದೇನೆಂದು ಹೇಳಿಕೊಂಡ ಅವರು, ಭಾರತದ ಮಾಜಿ ನಾಯಕನ ಜೊತೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳುವ ಬಯಕೆ ಇದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್‌ 19 ರಂದು ಇಲ್ಲಿನ ಅಪ್ಟಸ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಏಕದಿನ ಪಂದ್ಯದಲ್ಲಿ (IND vs AUS) ಈ ಇಬ್ಬರೂ ಆಟಗಾರರು ಮುಖಾಮುಖಿ ಕಾದಾಟ ನಡೆಸಲಿದ್ದಾರೆ. ಈ ಪಂದ್ಯದ ಮೂಲಕ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸ ಆರಂಭವಾಗಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ನಿಮಿತ್ತ ಅಪ್ಟಸ್‌ ಸ್ಟೇಡಿಯಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಟ್ರಾವಿಸ್‌ ಹೆಡ್‌, ಭಾರತೀಯ ಕ್ರಿಕೆಟ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ಕಮ್‌ಬ್ಯಾಕ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಬಳಿಕ ಇದೇ ಮೊದಲ ಬಾರಿ ಈ ಇಬ್ಬರೂ ಆಧುನಿಕ ಕ್ರಿಕೆಟ್‌ ದಿಗ್ಗಜರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಇದೀಗ ಅವರು 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.

IND vs AUS: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ದಾಖಲೆ ಹೇಗಿದೆ?

ಕೊಹ್ಲಿ-ರೋಹಿತ್‌ಗೆ ಟ್ರಾವಿಸ್‌ ಹೆಡ್‌ ಮೆಚ್ಚುಗೆ

"ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ವಿರಾಟ್‌ ಕೊಹ್ಲಿ ಸೀಮಿತ ಓವರ್‌ಗಳ ಸ್ವರೂಪದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌. ರೋಹಿತ್‌ ಶರ್ಮಾ ಕೂಡ ಅದಕ್ಕಿಂತ ಕಡಿಮೆ ಏನಿಲ್ಲ. ನನ್ನ ಶೈಲಿಯಲ್ಲಿ ಬ್ಯಾಟ್‌ ಮಾಡುವ ಆಟಗಾರರಲ್ಲಿ ಇವರು ಕೂಡ ಒಬ್ಬರು. ಅವರು ಏನು ಮಾಡಿದ್ದಾರೆಂದು ನನಗೆ ತುಂಬಾ ಮೆಚ್ಚುಗೆ ಇದೆ. ಒದು ಹಂತದಲ್ಲಿ ನಾವು ಅವರನ್ನು ಕಳೆದುಕೊಳ್ಳಲಿದ್ದೇವೆ. ಅವರು 2027ರ ವರೆಗೆ ಆಡಬಹುದೆಂದು ನಾನು ಭಾವಿಸುತ್ತೇನೆ. ಏಕದಿನ ವಿಶ್ವಕಪ್‌ ಗೆಲ್ಲಲು ಅವರು ಪ್ರಯತ್ನಿಸಲಿದ್ದಾರೆ. ಅವರಿನ್ನೂ ಆಡುತ್ತಿರುವುದು ಕ್ರಿಕೆಟ್‌ ಪಾಲಿಗೆ ಒಳ್ಳೆಯ ಸಂಗತಿ," ಎಂದು ಟ್ರಾವಿಸ್‌ ಹೆಡ್‌ ತಿಳಿಸಿದ್ದಾರೆ.

ರೋಹಿತ್‌ ಜತೆ ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳುವ ಬಯಕೆ

ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಆಸೀಸ್‌ ಆರಂಭಿಕ, ಮುಂದಿನ ವರ್ಷಗಳಲ್ಲಿ (ಐಪಿಎಲ್‌ ಟೂರ್ನಿ) ರೋಹಿತ್‌ ಶರ್ಮ ಅವರ ಜೊತೆ ಆಡುವ ಅವಕಾಶ ಸಿಕ್ಕರೆ, ಅದು ನನ್ನ ಪಾಲಿಗೆ ಅದ್ಭುತವಾಗಲಿದೆ ಎಂದು ಹೇಳಿದ್ದಾರೆ.

IND vs AUS: ಆಸೀಸ್‌ಗೆ ಮತ್ತೊಂದು ಗಾಯದ ಆಘಾತ; ಸರಣಿಯಿಂದ ಹೊರಬಿದ್ದ ಗ್ರೀನ್‌

"ನಾನು ರೋಹಿತ್‌ ಶರ್ಮಾ ಅವರ ಜೊತೆ ನೇರವಾಗಿ ಸಂಭಾಷಣೆ ನಡೆಸಿಲ್ಲ ಹಾಗೂ ಅವರ ಜೊತೆ ಆಡಲು ಕೂಡ ಇನ್ನೂ ಅವಕಾಶ ಲಭಿಸಿಲ್ಲ. ಆದರೆ, ನನ್ನ ಶೈಲಿಯಲ್ಲಿಯೇ ಬ್ಯಾಟ್‌ ಮಾಡುವ ಅವರನ್ನು ನೋಡುವುದು ನಿಜಕ್ಕೂ ಸಂತಸವಾಗಿದೆ. ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಐಪಿಎಲ್‌ ಪಂದ್ಯಗಳಲ್ಲಿ ನಾನು ಅವರ ವಿರುದ್ದ ಆಡಿದ್ದೇನೆ, ಅವರು ಯಾವಾಗಲೂ ಸರಿಯಾದ ಹಾದಿಯಲ್ಲಿ ಆಡುತ್ತಾರೆ. ಯಾವುದೇ ಹಂತದಲ್ಲಿ ಅವರ ಜೊತೆ ಆಡಲು ಇನ್ನೂ ಅವಕಾಶ ಸಿಕ್ಕಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಬಹುದು. ಭಾರತದಲ್ಲಿ (ಐಪಿಎಲ್‌) ಅವರು ಇನ್ನಷ್ಟು ದಿನಗಳ ಕಾಲ ಆಡಬಹುದು. ಆಗ ನನಗೆ ಅವಕಾಶ ಬರಬಹುದು. ಅವರು ಕೂಡ ಓಪನಿಂಗ್‌ ಮಾಡುತ್ತಾರೆ ಹಾಗೂ ನನ್ನ ರೀತಿಯ ಶೈಲಿಯಲ್ಲಿ ಆಡುತ್ತಾರೆ, ಹಾಗಾಗಿ ಅವರ ಆಟವನ್ನು ನೋಡಿ ನಾನು ಏಕೆ ಕಲಿಯಬಾರದು?," ಎಂದು ಟ್ರಾವಿಸ್‌ ಹೆಡ್‌ ತಿಳಿಸಿದ್ದಾರೆ.