IND vs AUS: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ದಾಖಲೆ ಹೇಗಿದೆ?
ಉಭಯ ತಂಡಗಳು ಮಾರ್ಚ್ 4, 2025 ರಂದು ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯಬಾರಿಗೆ ಏಕದಿನ ಸ್ವರೂಪದಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯವನ್ನು ಭಾರತ 4 ವಿಕೆಟ್ ಅಂತರದಿಂದ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ 264 ರನ್ ಬೆನ್ನಟ್ಟಿದ ಭಾರತ, 48.1 ಓವರ್‌ಗಳಲ್ಲಿ 267 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತ್ತು.

-

ಪರ್ತ್: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಪ್ರವಾಸಿ ಭಾರತ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಅ.19ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಪರ್ತ್ ಅಂಗಳದಲ್ಲಿ ನಡೆಯಲಿದೆ. ಆತಿಥೇಯರ ಪರ ಗಾಯದ ಸಮಸ್ಯೆಯಿಂದ ಹಲವು ಸ್ಟಾರ್ ಆಟಗಾರರು ಈ ಸರಣಿ ಆಡುತ್ತಿಲ್ಲ. ಉಭಯ ತಂಡಗಳ ಏಕದಿನ ದಾಖಲೆಯ ಹಿನ್ನೋಟ ಇಲ್ಲಿದೆ.
ಏಕದಿನ ಮಾದರಿಯಲ್ಲಿ ಇತ್ತಂಡಗಳು ಈವರೆಗೂ ಒಟ್ಟು 152 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ಪೈಕಿ ಭಾರತ 58 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೇ, ಆಸ್ಟ್ರೇಲಿಯಾ 84 ಪಂದ್ಯಗಳನ್ನು ಗೆದ್ದುಕೊಂಡಿದೆ. ಹತ್ತು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ಉಭಯ ತಂಡಗಳು ಮಾರ್ಚ್ 4, 2025 ರಂದು ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯಬಾರಿಗೆ ಏಕದಿನ ಸ್ವರೂಪದಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯವನ್ನು ಭಾರತ 4 ವಿಕೆಟ್ ಅಂತರದಿಂದ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ 264 ರನ್ ಬೆನ್ನಟ್ಟಿದ ಭಾರತ, 48.1 ಓವರ್‌ಗಳಲ್ಲಿ 267 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ IND vs AUS: ಆಸೀಸ್‌ಗೆ ಮತ್ತೊಂದು ಗಾಯದ ಆಘಾತ; ಸರಣಿಯಿಂದ ಹೊರಬಿದ್ದ ಗ್ರೀನ್
ಭಾರತ vs ಆಸ್ಟ್ರೇಲಿಯಾ ಹಿಂದಿನ 5 ಸರಣಿ ಫಲಿತಾಂಶ
2019- 5 ಪಂದ್ಯಗಳ ಸರಣಿ- ಆಸ್ಟ್ರೇಲಿಯಾ 3-2 ಅಂತರದಿಂದ ಗೆಲುವು
2020- 5 ಪಂದ್ಯಗಳ ಸರಣಿ- ಭಾರತ 3-1 ಅಂತರದಿಂದ ಗೆಲುವು
2021- 3 ಪಂದ್ಯಗಳ ಸರಣಿ- ಆಸೀಸ್ 2-1 ಅಂತರದಿಂದ ಜಯ
2023- 3 ಪಂದ್ಯಗಳ ಸರಣಿ- ಆಸೀಸ್‌ಗೆ 2-1 ಅಂತರದ ಗೆಲುವು
2023- 3 ಪಂದ್ಯಗಳ ಸರಣಿ- ಭಾರತ 2-1 ಅಂತರದ ಜಯ.