ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 1st ODI: 2023ರ ಬಳಿಕ ಪವರ್‌ ಪ್ಲೇಯಲ್ಲಿ ಕಡಿಮೆ ಮೊತ್ತ ದಾಖಲಿಸಿದ ಭಾರತ

2023ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಭಾರತ ಪವರ್‌ ಪ್ಲೇಯಲ್ಲಿ 3 ವಿಕೆಟ್‌ಗೆ 27 ರನ್‌ ಬಾರಿಸಿತ್ತು. ಇದೀಗ 2025ರಲ್ಲಿಯೂ ಪವರ್‌ ಪ್ಲೇಯಲ್ಲಿ 3 ವಿಕೆಟ್‌ಗೆ 27 ರನ್‌ ಬಾರಿಸಿ ಎರಡು ಬಾರಿ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ಅನಗತ್ಯ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದೆ.

2023ರ ಬಳಿಕ ಪವರ್‌ ಪ್ಲೇಯಲ್ಲಿ ಕಡಿಮೆ ಮೊತ್ತ ದಾಖಲಿಸಿದ ಭಾರತ

-

Abhilash BC Abhilash BC Oct 19, 2025 2:52 PM

ಪರ್ತ್‌: ಆಸ್ಟ್ರೇಲಿಯಾ(IND vs AUS 1st ODI) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಅನಗತ್ಯ ದಾಖಲೆಯೊಂದನ್ನು ಬರೆದಿದೆ. 2023ರ ಬಳಿಕ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದೆ. ಈ ಹಿಂದೆ ಕೂಡ ಆಸ್ಟ್ರೇಲಿಯಾ ವಿರುದ್ಧವೇ ಕಡಿಮೆ ಮೊತ್ತ ದಾಖಲಿಸಿತ್ತು.

2023ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಭಾರತ ಪವರ್‌ ಪ್ಲೇಯಲ್ಲಿ 3 ವಿಕೆಟ್‌ಗೆ 27 ರನ್‌ ಬಾರಿಸಿತ್ತು. ಇದೀಗ 2025ರಲ್ಲಿಯೂ ಪವರ್‌ ಪ್ಲೇಯಲ್ಲಿ 3 ವಿಕೆಟ್‌ಗೆ 27 ರನ್‌ ಬಾರಿಸಿ ಎರಡು ಬಾರಿ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ಅನಗತ್ಯ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದೆ.

ಭಾರತದ ಅತಿ ಕಡಿಮೆ ಪವರ್‌ಪ್ಲೇ ಸ್ಕೋರ್

27/3- ಆಸ್ಟ್ರೇಲಿಯಾ ವಿರುದ್ಧ (2023)

27/3- ಆಸ್ಟ್ರೇಲಿಯಾ ವಿರುದ್ಧ(2025*)

35/2- ಇಂಗ್ಲೆಂಡ್ ವಿರುದ್ಧ(2023)

37/3- ನ್ಯೂಜಿಲೆಂಡ್ ವಿರುದ್ಧ (2025)

39/3- ಆಸ್ಟ್ರೇಲಿಯಾ ವಿರುದ್ಧ (2023)

ಇದನ್ನೂ ಓದಿ Mitchell Starc: ಗಂಟೆಗೆ 176.5 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದರೇ ಮಿಚೆಲ್‌ ಸ್ಟಾರ್ಕ್‌?

26 ಓವರ್‌ಗೆ ಪಂದ್ಯ ಸೀಮಿತ

ಪಂದ್ಯಕ್ಕೆ ಹಲವು ಬಾರಿ ಮಳೆ ಅಡಚಣೆ ಉಂಟು ಮಾಡಿದ ಕಾರಣ ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ ಪಂದ್ಯವನ್ನು 26 ಓವರ್‌ಗೆ ಸೀಮಿತ ಮಾಡಲಾಗಿದೆ. ಆರಂಭದಲ್ಲಿ ಪಂದ್ಯಕ್ಕೆ ಎರಡು ಬಾರಿ ಮಳೆ ಅಡಚಣೆಯಾದ ಕಾರಣ ಪಂದ್ಯವನ್ನು 32 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಮತ್ತೆ ಮಳೆಯಿಂದ ಕೆಲ ಕಾಲ ಪಂದ್ಯ ಸ್ಥಗಿತಗೊಳಿಸಲಾಯಿತು. ಹೀಗಾಗಿ ಎರಡನೇ ಬಾರಿಗೆ ಪಂದ್ಯದ ಓವರ್‌ ಕಡಿತ ಮಾಡಲಾಯಿತು.