ನವದೆಹಲಿ: ಭಾರತ ಟಿ20 ತಂಡದಲ್ಲಿ ಅರ್ಷದೀಪ್ ಸಿಂಗ್ (Arshdeep Singh) ಅತ್ಯಂತ ಯಶಸ್ವಿ ಬೌಲರ್. ಅವರು ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ 100ಕ್ಕೂ ಅಧಿಕ ವಿಕೆಟ್ ಕಬಳಿಸಿದ ಬೌಲರ್ ಆಗಿದ್ದಾರೆ. ಆದರೂ ಕಳೆದ ಏಷ್ಯಾ ಕಪ್ ಟೂರ್ನಿಯ (Asia Cup 2025) ಬಳಿಕ ಅವರಿಗೆ ಭಾರತ ಟಿ20 ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಗುತ್ತಿಲ್ಲ. ಇದೀಗ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಟಿ20ಐ ಸರಣಿಯಲ್ಲಿಯೂ ಅವರು ಆರಂಭಿಕ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಆಡಿದ್ದರು. ಅದರಲ್ಲಿಯೂ ಮೂರನೇ ಪಂದ್ಯದಲ್ಲಿ ಅವರು 35 ರನ್ ನೀಡಿ ಮೂರು ವಿಕೆಟ್ ಕಿತ್ತಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಅರ್ಷದೀಪ್ ಸಿಂಗ್ ಅವರು ಟಿ20ಐ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದರೂ ಭಾರತ ಟಿ20ಐ ತಂಡದ ಆಡುವ ಬಳಗದಲ್ಲಿ ಅವಕಾಶವನ್ನು ನೀಡಲಾಗುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಎರಡು ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಬೆಂಚ್ ಕಾದಿದ್ದರು. ನಾಲ್ಕನೇ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು, ಅರ್ಷದೀಪ್ ಸಿಂಗ್ ಅವರಿಗೆ ನಿರಂತರವಾಗಿ ಅವಕಾಶ ನೀಡದೇ ಇರಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ತಂಡ ವಿಭಿನ್ನ ಕಾಂಬಿನೇಷನ್ ಅನ್ನು ಪ್ರಯತ್ನಿಸುತ್ತಿದೆ. ಈ ಕಾರಣಿದಿಂದಲೇ ಅವರನ್ನು ಕೈ ಬಿಡಲಾಗುತ್ತಿದೆ ಎಂದು ಹೇಳಿದ್ದಾರೆ.
IND vs AUS 4th T20: ಭಾರತ vs ಆಸೀಸ್ 4ನೇ ಟಿ20 ಪಂದ್ಯ ಯಾವಾಗ?
"ಅರ್ಷದೀಪ್ ಸಿಂಗ್ ಅನುಭವಿ ಬೌಲರ್. ನಾವು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸುತ್ತಿರುವ ಒಂದು ದೊಡ್ಡ ಚಿತ್ರಣವೂ ಇದೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ವಿಶ್ವ ದರ್ಜೆಯ ಬೌಲರ್ ಹಾಗೂ ಅವರು ಪವರ್‌ಪ್ಲೇನಲ್ಲಿ ನಮ್ಮ ಪರವಾಗಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ತಂಡಕ್ಕೆ ಎಷ್ಟೊಂದು ಮೌಲ್ಯ ಎಂಬುದು ನಮಗೆ ಗೊತ್ತಿದೆ. ಆದರೆ, ಈ ಪ್ರವಾಸದಲ್ಲಿ ನಾವು ವಿಭಿನ್ನ ಸಂಯೋಜನೆಯನ್ನು ಪ್ರಯತ್ನಿಸುತ್ತಿದ್ದೇವೆ, ಇದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ," ಎಂದು ಮಾರ್ನೆ ಮಾರ್ಕೆಲ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ಗೂ ಮುನ್ನ ಕಡಿಮೆ ಪಂದ್ಯಗಳಿವೆ
ಮುಂದಿನ ವರ್ಷ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಇದೆ ಹಾಗೂ ಇದಕ್ಕಾಗಿ ನಾವು ವಿಭಿನ್ನ ಸಂಯೋಜನೆಯನ್ನು ಪ್ರಯತ್ನಿಸುತ್ತಿದ್ದೇವೆ. ನಮಗೆ ಇನ್ನುಳಿದಿರುವುದು ಕಡಿಮೆ ಪಂದ್ಯಗಳು. ಹಾಗಾಗಿ ನಮಗೆ ಕಠಿಣ ಆಯ್ಕೆಗಳು ನಮ್ಮ ಮುಂದಿವೆ ಎಂದು ಮಾರ್ಕೆಲ್ ತಿಳಿಸಿದ್ದಾರೆ.
IND vs AUS 4th T20: ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20ಗೆ ಭಾರತದ ಸಂಭಾವ್ಯ ಆಡುವ ಬಳಗ
"ಇದು ನಿಜಕ್ಕೂ ಸುಲಭವಲ್ಲ. ಆಟಗಾರರನ್ನು ಆಯ್ಕೆ ಮಾಡುವಾಗ ಯಾವಾಗಲೂ ಅಸಮಾಧಾನಗಳು ಉಂಟಾಗುವುದು ಸಹಜ. ಕೆಲವೊಮ್ಮೆ ಆಟಗಾರರ ಪರವಾಗಿ ಈ ಸಂಗತಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆಟಗಾರರು ಕಠಿಣ ಪರಿಶ್ರಮ ಪಟ್ಟು, ಅತ್ಯುತ್ತಮ ಪ್ರದರ್ಶನ ತೋರುವಂತೆ ಹಾಗೂ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ನಾವು ಹುರಿದುಂಬಿಸುತ್ತೇವೆ. ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಸೀಮಿತ ಪಂದ್ಯಗಳು ನಡೆಯುವುದರಿಂದ, ಒತ್ತಡದಲ್ಲಿರುವ ಕೆಲವು ಸಂದರ್ಭಗಳಲ್ಲಿ ಆಟಗಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡುವುದು ನಮಗೆ ಬಹಳ ಮುಖ್ಯ; ಇಲ್ಲದಿದ್ದರೆ, ಅವರ ಸಾಮರ್ಥ್ಯಗಳ ಬಗ್ಗೆ ನಮಗೆ ಖಚಿತವಿರುವುದಿಲ್ಲ. ಆ ರೀತಿಯ ಆಟವನ್ನು ಆಡಿದ ನಂತರವೂ ಪಂದ್ಯವನ್ನು ವೇಗವಾಗಿ ಗೆಲ್ಲುವ ಮನಸ್ಥಿತಿಯನ್ನು ಹೊಂದಿರುವುದು ಸ್ವಲ್ಪ ಮಟ್ಟಿಗೆ ಸರಿ," ಎಂದು ಭಾರತೀಯ ಬೌಲಿಂಗ್ ತರಬೇತುದಾರ ಹೇಳಿದ್ದಾರೆ.