ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಸೂರ್ಯಕುಮಾರ್ ಯಾದವ್‌ಗೆ ವಾರ್ನಿಂಗ್‌ ಕೊಟ್ಟ ಪಾರ್ಥಿವ್ ಪಟೇಲ್!

ಸೂರ್ಯಕುಮಾರ್ ಯಾದವ್‌ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿ ಅತ್ಯಂತ ಮಹತ್ವದ್ದಾಗಿದೆ. ಅವರು ಒಂದು ಕಾಲದಲ್ಲಿ ವಿಶ್ವದ ನಂ 1 ಟಿ20ಐ ಬ್ಯಾಟ್ಸ್‌ಮನ್‌ ಆಗಿದ್ದರು. ಆದರೆ ಆ ಸ್ಪೋಟಕ ಬ್ಯಾಟಿಂಗ್ ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ. ಅವರು ಆದಷ್ಟು ಬೇಗ ಲಯಕ್ಕೆ ಮರಳುವುದು ಅವರ ವೈಯಕ್ತಿಕ ಮಾತ್ರವಲ್ಲದೆ ತಂಡಕ್ಕೂ ಅವಶ್ಯಕ ಎಂದು ಮಾಜಿ ವಿಕೆಟ್‌ ಕೀಪರ್‌ ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್‌ಗೆ ಪಾರ್ಥಿವ್ ಪಟೇಲ್ ವಾರ್ನಿಂಗ್‌!

ಸೂರ್ಯಕುಮಾರ್‌ ಯಾದವ್‌ಗೆ ಎಚ್ಚರಿಕೆ ನೀಡಿದ ಪಾರ್ಥಿವ್‌ ಪಟೇಲ್‌. -

Profile Ramesh Kote Oct 28, 2025 8:45 PM

ನವದೆಹಲಿ: ಕಾಂಗರೂ ನಾಡಿನಲ್ಲಿ ಏಕದಿನ ಸರಣಿ ಕಳೆದುಕೊಂಡಿರುವ ಭಾರತ ತಂಡ, ಇದೀಗ 5 ಪಂದ್ಯಗಳ ಟಿ20ಐ ಸರಣಿಗೆ (IND vs AUS) ಸಜ್ಜಾಗುತ್ತಿದೆ. ಸರಣಿಯ ಮೊದಲ ಪಂದ್ಯ ನಾಳೆ (ಅ.29) ಕ್ಯಾನ್​ಬೆರಾದಲ್ಲಿ ನಡೆಯಲಿದ್ದು, ಇದಕ್ಕಾಗಿ ಪ್ರವಾಸಿ ಭಾರತ ತಂಡ ಕಠಿಣ ತಯಾರಿ ನಡೆಸುತ್ತಿದೆ. ಇದರ ನಡುವೆ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ (Suryakumar Yadav), ಅವರ ಫಾರ್ಮ್ ಬಗ್ಗೆ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸಮನ್ ಪಾರ್ಥಿವ್ ಪಟೇಲ್ (Parthiv Patel) ಮಹತ್ವದ ಹೇಳಿಕೆ ನೀಡಿದ್ದಾರೆ. ಮುಖ್ಯವಾಗಿ ಈ ಸರಣಿ ಸೂರ್ಯಕುಮಾರ್ ಅವರಿಗೆ ನಿರ್ಣಾಯಕವಾಗಿದ್ದು, ಒಂದು ಕಾಲದಲ್ಲಿ ವಿಶ್ವದ ನಂ. 1 ಟಿ20ಐ ಬ್ಯಾಟ್ಸ್‌ಮನ್ ಆಗಿದ್ದ ಸೂರ್ಯಕುಮಾರ್ ಇತ್ತೀಚಿನ ತಿಂಗಳುಗಳಲ್ಲಿ ತಮ್ಮ ಸ್ಫೋಟಕ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್‌ ಟೂರ್ನಿಯಲ್ಲಿ ಸೂರ್ಯಕುಮಾರ್ ಏಳು ಪಂದ್ಯಗಳನ್ನಾಡಿ ಕೇವಲ 72 ರನ್‌ಗಳನ್ನು ಮಾತ್ರ ಗಳಿಸಿದ್ದರು. ಅವರ ಕೊನೆಯದಾಗಿ 2024ರ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 75 ರನ್ ಸಿಡಿಸಿದ್ದರು. ಇದಾದ ಬಳಿಕ ಅವರ ಬ್ಯಾಟ್‌ನಿಂದ ಸ್ಪೋಟಕ ಇನಿಂಗ್ಸ್ ಬರುತ್ತಿಲ್ಲ. ಸೂರ್ಯಕುಮಾರ್ ಫಾರ್ಮ್, ಅವರಿಗೆ ಮಾತ್ರವಲ್ಲ, ತಂಡದ ಒಟ್ಟಾರೆ ಯಶಸ್ಸಿಗೆ ಅತ್ಯಗತ್ಯ ಎಂದು ಪಾರ್ಥಿವ್‌ ಪಟೇಲ್‌ ಒತ್ತಿ ಹೇಳಿದ್ದಾರೆ.

ಅಕ್ಟೋಬರ್ 29 ರಂದು ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪಾರ್ಥಿವ್ ಪಟೇಲ್, "ವೈಯಕ್ತಿಕಕ್ಕಿಂತ ಹೆಚ್ಚಾಗಿ, ಸೂರ್ಯ ತಂಡಕ್ಕೆ ಫಾರ್ಮ್ ಕಂಡುಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಒಬ್ಬ ಬ್ಯಾಟ್ಸ್‌ಮನ್ ಆಗಿ ಅವರ ಸಾಮರ್ಥ್ಯ ನಮಗೆಲ್ಲರಿಗೂ ತಿಳಿದಿದೆ. ಅವರು ರನ್ ಗಳಿಸಿದರೆ, ಅವರು ಎದುರಾಳಿ ತಂಡವನ್ನು ನಾಶಮಾಡಬಹುದು. ಆ ದೃಷ್ಟಿಕೋನದಿಂದ ಸೂರ್ಯ ಕೆಲವು ರನ್‌ಗಳನ್ನು ಗಳಿಸಿದರೆ, ಅದು ತಂಡಕ್ಕೆ ದೊಡ್ಡ ಉತ್ತೇಜನ ನೀಡುತ್ತದೆ," ಎಂದು ಪಾರ್ಥಿವ್ ಪಟೇಲ್‌ ತಿಳಿಸಿದ್ದಾರೆ.

IND vs AUS: ಶ್ರೇಯಸ್ ಅಯ್ಯರ್ ಆರೋಗ್ಯದಲ್ಲಿ ಸುಧಾರಣೆ, ಐಸಿಯುನಿಂದ ವಾರ್ಡ್‌ಗೆ ಶಿಫ್ಟ್!

ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮಹತ್ವದ ಬಗ್ಗೆ ಮಾತನಾಡಿರುವ ಪಾರ್ಥಿವ್ ಪಟೇಲ್, ಆರಂಭದಲ್ಲಿ ಹೆಚ್ಚು ಹೆಚ್ಚು ರನ್ ಕಲೆಹಾಕಿದಷ್ಟು ತಂಡದ ಗೆಲುವು ಸುಲಭವಾಗುತ್ತದೆ. ಈ ಜವಾಬ್ದಾರಿ ಅಗ್ರ ಮೂರು ಕ್ರಮಾಂಕದ ಸ್ಥಿರತೆ ಮೇಲೆ ನಿಂತಿರುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

"ಅಗ್ರ ಕ್ರಮಾಂಕವು ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಅದು ಉತ್ತಮವಾಗಿರುತ್ತದೆ. ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ, ನಿಮಗೆ ಆರಂಭದಿಂದಲೂ ರನ್‌ಗಳು ಬೇಕಾಗುತ್ತವೆ. ಆದರೆ ನಮ್ಮ ಟಿ20 ತಂಡವು ಸಂಪೂರ್ಣ ಘಟಕವಾಗಿದೆ ಎಂದು ನಾನು ಭಾವಿಸುತ್ತೇನೆ. ಆಟಗಾರರು ಕ್ರಮಾಂಕದಲ್ಲಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುವುದನ್ನು ಮತ್ತು ಇನ್ನೂ ಪ್ರದರ್ಶನ ನೀಡುವುದನ್ನು ನಾವು ನೋಡಿದ್ದೇವೆ," ಎಂದು ಅವರು ತಿಳಿಸಿದರು.

AUS vs IND 1st T20I: ಆಸೀಸ್‌ ಎದುರಿನ ಮೊದಲ ಟಿ20ಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ

ಭಾರತದ ತಂಡವನ್ನು ಶ್ಲಾಘಿಸುತ್ತಾ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರ ಕೊಡುಗೆಗಳನ್ನು ನೆನಪಿಸಿಕೊಂಡರು. ಅವರು ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ತಂಡಕ್ಕೆ ನೇರವಾಗಿದ್ದರೆ ಎಂದರು. ಐದು ಪಂದ್ಯಗಳ ಸರಣಿಯು ಅಕ್ಟೋಬರ್ 29 ರಂದು ಆರಂಭವಾಗಲಿದ್ದು, ಭಾರತವು ಅತಿಥೇಯರ ವಿರುದ್ಧ ಏಕದಿನ ಸರಣಿ ಸೋತ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಭಾರತ ಟಿ20ಐ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ.

AUS vs IND 1st T20I: ಮೊದಲ ಟಿ20 ಪಂದ್ಯದ ಟೀಮ್‌ ಕಾಂಬಿನೇಷನ್ ತಿಳಿಸಿದ ಸೂರ್ಯಕುಮಾರ್‌

ಟಿ20ಐ ಸರಣಿ ವೇಳಾಪಟ್ಟಿ

ಅಕ್ಟೋಬರ್ 29: ಮೊದಲ ಟಿ20ಐ ಪಂದ್ಯ ಮನುಕಾ ಓವಲ್, ಕ್ಯಾನ್‌ಬೆರಾ

ಅಕ್ಟೋಬರ್ 31: ಎರಡನೇ ಟಿ20ಐ ಪಂದ್ಯ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌, ಮೆಲ್ಬೋರ್ನ್‌

ನವೆಂಬರ್ 2,: ಮೂರನೇ ಟಿ20ಐ ಪಂದ್ಯ, ಬೆಲ್ಲೆರಿವ್ ಓವಲ್, ಹೋಬಾರ್ಟ್

ನವೆಂಬರ್ 6: ನಾಲ್ಕನೇ ಟಿ20ಐ ಪಂದ್ಯ, ಗೋಲ್ಡ್ ಕೋಸ್ಟ್ ಕ್ರಿಕೆಟ್ ಸ್ಟೇಡಿಯಂ

ನವೆಂಬರ್ 8: ಐದನೇ ಟಿ20ಐ ಪಂದ್ಯ, ದಿ ಗಬ್ಬಾ ಸ್ಟೇಡಿಯಂ, ಬ್ರಿಸ್ಬೇನ್