IND vs ENG: ʻಎಜ್‌ಬಾಸ್ಟನ್ ಸ್ಟೇಡಿಯಂ ಬೌಂಡರಿ ಚಿಕ್ಕದುʼ-ಸ್ಟೀವನ್ ಫಿನ್ ಆರೋಪ!
Steven Finn on Edgbaston Boundaries: ಭಾರತ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿನ ಬೌಂಡರಿಗಳು ಕಿರಿದಾಗಿವೆ ಎಂದು ಇಂಗ್ಲೆಂಡ್ ಮಾಜಿ ವೇಗಿ ಸ್ಟೀವನ್ ಫಿನ್ ಆರೋಪ ಮಾಡಿದ್ದಾರೆ.

ಎಜ್‌ಬಾಸ್ಟನ್ ಬೌಂಡರಿ ಕಿರಿದಾಗಿದೆ ಎಂದ ಸ್ಟೀವನ್ ಫಿನ್.

ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ(IND vs ENG) ನಡೆಯುತ್ತಿರುವ ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದ ಬಗ್ಗೆ ಆಂಗ್ಲರ ಮಾಜಿ ವೇಗಿ ಸ್ಟೀವನ್ ಫಿನ್ (Steven Finn) ಗಂಭೀರ ಆರೋಪ ಮಾಡಿದ್ದಾರೆ. ಭಾರತ ತಂಡ (India) ಮೊದಲನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 310 ರನ್‌ಗಳನ್ನು ಕಲೆ ಹಾಕಿತು. ಇದಾದ ಬೆನ್ನಲ್ಲೆ ಇಂಗ್ಲೆಂಡ್ ಮಾಜಿ ವೇಗಿ ಸ್ಟೀವನ್ ಫಿನ್, ಎಜ್‌ಬಾಸ್ಟನ್ ಕ್ರೀಡಾಂಗಣದ ಬೌಂಡರಿಗಳು ಕಿರಿದಾಗಿವೆ ಎಂದು ಆರೋಪ ಮಾಡಿದ್ದಾರೆ. ಬ್ಯಾಝ್‌ಬಾಲ್ ಆಟಕ್ಕೆ ನೆರವು ನೀಡಲಿ ಎಂಬ ಕಾರಣಕ್ಕೆ ಈ ರೀತಿ ಚಿಕ್ಕ ಬೌಂಡರಿಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಬಿಬಿಸಿ ಬ್ರಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಸ್ಟೀವನ್ ಫಿನ್, "ನಾವು ಎಜ್‌ಬಾಸ್ಟನ್‌ನಲ್ಲಿದ್ದೇವೆ. ನಾನು ಬೌಂಡರಿ ಹಗ್ಗದ ಪಕ್ಕದಲ್ಲೇ ನಿಂತಿದ್ದೆ, ಇದು ಸಾಮಾನ್ಯ ಟೆಸ್ಟ್ ಪಂದ್ಯಕ್ಕೆ ನೀವು ಊಹಿಸಬಹುದಾದ ಒಂದು ಗಣನೀಯ ಮಾರ್ಗವಾಗಿದೆ," ಎಂದು ಹೇಳಿದ್ದಾರೆ.
IND vs ENG: ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಅಂಪೈರಿಂಗ್ ಬಗ್ಗೆ ಕ್ರಿಸ್ ವೋಕ್ಸ್ ಅಸಮಾಧಾನ!
ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿಯೂ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆ ಮೂಲಕ ಅವರು ನಾಲ್ಕನೇ ಇನಿಂಗ್ಸ್‌ನಲ್ಲಿ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದರು. ಭಾರತ ತಂಡ ನೀಡಿದ್ದ 371 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು ಚೇಸ್ ಮಾಡಿತ್ತು. ಅಂದ ಹಾಗೆ ಎಜ್‌ಬಾಸ್ಟನ್ ಕ್ರೀಡಾಂಗಣದ ಬೌಂಡರಿಗಳು ಕಿರಿದಾಗಿರುವ ಕಾರಣ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆಂದು ಸ್ಟೀವನ್ ಫಿನ್ ಆರೋಪ ಮಾಡಿದ್ದಾರೆ.
IND vs ENG: ಕುಲ್ದೀಪ್ ಯಾದವ್‌ರನ್ನು ಆಯ್ಕೆ ಮಾಡದ ಬಗ್ಗೆ ಸುನೀಲ್ ಗವಾಸ್ಕರ್ ಅಸಮಾಧಾನ!
ಬೆನ್ ಸ್ಟೋಕ್ಸ್ ಮೊದಲ ಬ್ಯಾಟಿಂಗ್ ಆರಿಸಿಕೊಳ್ಳಲು ಕಾರಣ
ಎಜ್‌ಬಾಸ್ಟನ್ ಕ್ರೀಡಾಂಗಣದ ಬೌಂಡರಿ ಕಿರಿದಾಗಿದೆ. ಈ ಕಾರಣದಿಂದಲೇ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಲು ಕಾರಣ ಎಂದು ಸ್ಟೀವನ್ ಫಿನ್ ಆರೊಪ ಮಾಡಿದ್ದಾರೆ. ನಾಲ್ಕನೇ ಇನಿಂಗ್ಸ್‌ನಲ್ಲಿ ಚೇಸಿಂಗ್ ವೇಳೆ ಬೌಂಡರಿಗಳ ಲಾಭ ಪಡೆಯುವ ಉದ್ದೇಶವನ್ನು ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ.
"ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದ ಬೌಂಡರಿಗಳು ಚಿಕ್ಕದಾಗಿವೆ. ಬಹುಶಃ ಈ ಕಾರಣದಿಂದಲೇ ಇಂಗ್ಲೆಂಡ್ ತಂಡ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಹಾಗೂ ಚೇಸ್ ಮಾಡುವ ಗುರಿಯನ್ನು ಹೊಂದಿದ್ದಾರೆ," ಎಂದು ಸ್ಟೀವನ್ ಫಿನ್ ಆರೋಪ ಮಾಡಿದ್ದಾರೆ.