ಲಂಡನ್: ಇಲ್ಲಿನ ಕೆನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕೂ ಒಂದು ದಿನದ ಮುನ್ನ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಹಾಗೂ ಇಲ್ಲಿನ ಚೀಫ್ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ನಡುವೆ ವಾಗ್ವಾದ ನಡೆದಿತ್ತು. ಬುಧವಾರ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಅವರಿಗೂ ಈ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಕೂಡ ಈ ಘಟನೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಐದನೇ ಪಂದ್ಯದ ನಿಮಿತ್ತ ಭಾರತ ತಂಡ ಓವಲ್ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸುತ್ತಿತ್ತು. ಈ ವೇಳೆ ಗೌತಮ್ ಗಂಭೀರ್ ಅವರು ಮುಖ್ಯ ಪಿಚ್ ಬಳಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ಅವರು, ಪಿಚ್‌ನಿಂದ 2.5 ಮೀಟರ್ ಅಂತರ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಿದ್ದರು. ಈ ವೇಳೆ ಗೌತಮ್ ಗಂಭೀರ್ ವಾಗ್ವಾದ ನಡೆಸಿದ್ದರು. ಈ ವೇಳೆ ಈ ಇವರಿಬ್ಬರ ನಡುವೆ ಜಗಳ ನಡೆದಿತ್ತು. ನಂತರ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಈ ಬಗ್ಗೆ ಮಾತನಾಡಿದ್ದರು.
IND vs ENG: ಓವಲ್ ಪಿಚ್ ಕ್ಯುರೇಟರ್ ಜತೆ ಗಂಭೀರ್ ಜಗಳದ ಬಗ್ಗೆ ಶುಭಮನ್ ಗಿಲ್ ಪ್ರತಿಕ್ರಿಯೆ!
ಐದನೇ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಗೆ ಬಂದಿದ್ದ ಬೆನ್ ಸ್ಟೋಕ್ಸ್‌ಗೆ "ನೀವು ಪಿಚ್ ಅನ್ನು 2.5 ಮೀಟರ್ ದೂರದಿಂದ ಮಾತ್ರ ವೀಕ್ಷಿಸಬಹುದು ಎಂದು ನಿಮಗೆ ಯಾವುದೇ ಸೂಚನೆಗಳನ್ನು ನೀಡಲಾಗಿದೆಯೇ?" ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್, "ಇದು ನಿನ್ನೆಯ ಮಾತು. ಆ ವಸ್ತುವನ್ನು (ಪಿಚ್) ನೋಡದೇ ಇರುವುದು ಕಷ್ಟ ಆದರೆ ನಾನು ಇಲ್ಲಿ ಇರಲಿಲ್ಲ, ಹಾಗಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ," ಎಂದು ಹೇಳಿದ್ದಾರೆ.
ಓವಲ್ ಪಿಚ್ ಫಾಸ್ಟ್ ಬೌಲರ್‌ಗಳಿಗೆ ನೆರವು ನೀಡಲಿದೆಯಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೊದಲ ದಿನದಿಂದಲೇ ನಾನು ಇದನ್ನು ನಿರೀಕ್ಷಿಸುತ್ತಿದ್ದೇನೆ. ಆದರೆ ನಾನು ಸುಳ್ಳು ಹೇಳುವುದಿಲ್ಲ, ನಾವು ಆಡುತ್ತಿದ್ದ ಪಿಚ್‌ಗಳಿಗಿಂತ ಇಲ್ಲಿನ ವಿಕೆಟ್ ಮೇಲೆ ಹೆಚ್ಚು ಹುಲ್ಲು ಕಾಣುತ್ತಿದೆ. ಆದ್ದರಿಂದ, ಸೀಮರ್‌ಗಳಿಗೆ ಇಲ್ಲಿನ ಪಿಚ್ ಸ್ವಲ್ಪ ಹೆಚ್ಚಿನ ನೆರವು ನೀಡಿದರೆ ಆಶ್ಚರ್ಯವಾಗುವುದಿಲ್ಲ," ಎಂದು ಅವರು ತಿಳಿಸಿದ್ದಾರೆ.
IND vs ENG: ಐದನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ವಾಸೀಮ್ ಜಾಫರ್!
ಕಳೆದ ನಾಲ್ಕೂ ಟೆಸ್ಟ್ ಪಂದ್ಯಗಳ ಫಲಿತಾಂಶ ಕೊನೆಯ ದಿನ ಕೊನೆಯ ಸೆಷನ್‌ನಲ್ಲಿ ಮೂಡಿ ಬಂದಿರುವುದು ಆಸಕ್ತದಾಯಕ ಸಂಗತಿಯಾಗಿದ್ದು, ಬೌಲರ್‌ಗಳ ಕಠಿಣ ಪರಿಶ್ರಮ ಸಾಬೀತಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 157.1 ಓವರ್‌ಗಳ ಕಾಲ ಫೀಲ್ಡಿಂಗ್‌ನಲ್ಲಿದ್ದರು. ಇಂಗ್ಲೆಂಡ್ ತಂಡ 257.1 ಓವರ್‌ಗಳವರೆಗೂ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿತ್ತು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು.