ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

T20 World Cup 2026: ʻಭಾರತ ತಂಡ ಫೈನಲ್‌ಗೆ ತಲುಪಲ್ಲʼ-ಪಾಕ್‌ ಮಾಜಿ ವೇಗಿಯ ಭವಿಷ್ಯ ನಿಜವಾಗುತ್ತಾ?

ಇಂಗ್ಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ತಂಡದ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಭಾರತ ತಂಡ ಈ ಬಾರಿ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡುವುದಿಲ್ಲ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ಭಾರತ ತಂಡ ಫೈನಲ್‌ಗೆ ಪ್ರವೇಶ ಮಾಡಲ್ಲ ಎಂದ ಮೊಹಮ್ಮದ್‌ ಆಮಿರ್‌.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೆಮಿಫೈನಲ್‌ ಪಂದ್ಯಕ್ಕೂ(IND vs ENG) ಮುನ್ನ ಭಾರತ ತಂಡದ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ (Mohammad Amir) ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಭಾರತ ತಂಡ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತು ಫೈನಲ್‌ಗೆ ಅರ್ಹತೆ ಪಡೆಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಆದರೆ, ಈ ಹಿಂದೆಯೂ ಟೀಮ್‌ ಇಂಡಿಯಾದ ಬಗ್ಗೆ ಆಮಿರ್‌ ಭವಿಷ್ಯ ನುಡಿದು ಟ್ರೋಲ್‌ಗೆ ಒಳಗಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಭಾರತ ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ, ಭಾರತ ತಂಡ ಜಿಂಬಾಬ್ವೆ ಮತ್ತು ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸುವ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಮಾಡಿತ್ತು.

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯ ಮಾರ್ಚ್‌ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್‌ ಅವರು ಭಾರತ ತಂಡದ ಬಗ್ಗೆ ನಕಾರಾತ್ಮಕ ಭವಿಷ್ಯವನ್ನು ನುಡಿದಿದ್ದಾರೆ.

ʻನೀವು ಒಂಟಿಯಲ್ಲ, ನಿಮ್ಮ ಜೊತೆ ನಾವಿದ್ದೇವೆʼ-ರಿಂಕು ಸಿಂಗ್‌ಗೆ ಧೈರ್ಯ ತುಂಬಿದ ಕೋಚ್‌ ಗಂಭೀರ್‌!

ಮೊಹಮ್ಮದ್‌ ಆಮಿರ್‌ ಹೇಳಿದ್ದೇನು?

“ಕ್ರಿಕೆಟ್ ದೃಷ್ಟಿಕೋನದಿಂದ ವಿಶ್ಲೇಷಿಸಿದರೆ, ಭಾರತ ಉತ್ತಮ ಕ್ರಿಕೆಟ್ ಆಡುತ್ತಿಲ್ಲ. ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಕೂಡ ಉತ್ತಮವಾಗಿಲ್ಲ. ಅವರು ಕನಿಷ್ಠ 3-4 ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ ಹಾಗೂ ಮೈದಾನದಲ್ಲಿ ತಪ್ಪುಗಳನ್ನು ಮಾಡಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಹೊರತುಪಡಿಸಿ ಪ್ರತಿಯೊಬ್ಬ ಬೌಲರ್ ಕೂಡ ರನ್‌ಗಳನ್ನು ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ದೊಡ್ಡ ತಂಡಗಳ ವಿರುದ್ಧ ಎಂದಿಗೂ ಪ್ರದರ್ಶನ ನೀಡುವುದಿಲ್ಲ ಎಂದು ನಾನು ಹೇಳಿದ್ದೆ. ಅವರು ತಮ್ಮ 4 ಓವರ್‌ಗಳಲ್ಲಿ 40 ರನ್‌ಗಳನ್ನು ನೀಡಿದ್ದಾರೆ. ವೆಸ್ಟ್ ಇಂಡೀಸ್ ಕೂಡ ವರುಣ್ ಚಕ್ರವರ್ತಿ ವಿರುದ್ಧ ಆಕ್ರಮಣಕಾರಿ ಪ್ರದರ್ಶನವನ್ನು ತೋರಿತ್ತು. ಸೆಮಿಫೈನಲ್‌ಗೆ ತಲುಪುವ ತಂಡಗಳು ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಆಡುತ್ತವೆ. ಈ ಟೂರ್ನಿಯಲ್ಲಿ ಭಾರತ ಇನ್ನೂ ಹಾಟ್ ಫೇವರಿಟ್ ಅಲ್ಲ ಎಂದು ನಾನು ನಂಬುತ್ತೇನೆ,” ಎಂದು ಮೊಹಮ್ಮದ್‌ ಆಮಿರ್‌ ಹೇಳಿದ್ದಾರೆ.

ಇದೇ ವೇಳೆ ಮೊಹಮ್ಮದ್‌ ಆಮಿರ್‌‘ವಿವಾದಾತ್ಮಕ’ ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ಮೂಲಕವೇ ಭಾರತ ಟೂರ್ನಿಯಿಂದ ಹೊರಬೀಳಬೇಕಾಗಿತ್ತು ಎಂದು ಹೇಳಿದ್ದಾರೆ. ವೆಸ್ಟ್ ಇಂಡೀಸ್ ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಎಸೆತದಲದಲ್ಲಿ ಶಿಮ್ರಾನ್‌ ಹೆಟ್ಮಾಯೆರ್‌ ಅವರು ಸ್ಲಾಗ್ ಹೊಡೆಯಲು ಪ್ರಯತ್ನಿಸಿ, ವಿಕೆಟ್‌ಗಳ ಹಿಂದೆ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು.

IND vs ENG: ಪವರ್‌ಪ್ಲೇನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಬೌಲಿಂಗ್‌ ಕೊಡಿ ಎಂದ ಸುನೀಲ್‌ ಗವಾಸ್ಕರ್‌!

ಬುಮ್ರಾ ಆತ್ಮವಿಶ್ವಾಸದಿಂದ ಕಾಟ್‌ ಬಿಹೈಂಡ್‌ಗೆ ಮನವಿ ಮಾಡಿದರು ಹಾಗೂ ಅಂಪೈರ್ ಯಾವುದೇ ಸಂಶಯವಿಲ್ಲದೆ ಔಟ್ ಎಂದು ಸೂಚಿಸಿದರು. ಆದರೆ ತಾನು ಔಟ್ ಇಲ್ಲವೆಂದು ಭಾವಿಸಿದ ಹೆಟ್ಮಾಯೆರ್‌ ರಿವ್ಯೂಗೆ ಮೊರೆಹೋದರು.

ರಿಪ್ಲೇಗಳಲ್ಲಿಯೂ ಚೆಂಡು ಬ್ಯಾಟ್‌ಗೆ ತಾಗಿರುವುದು ಕಾಣಿಸಿಕೊಂಡರೂ, ಬ್ಯಾಟರ್ ಮತ್ತು ವೆಸ್ಟ್ ಇಂಡೀಸ್ ಡಗೌಟ್ ತೃಪ್ತರಾಗಿರಲಿಲ್ಲ. ಪಾಕಿಸ್ತಾನದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆಮಿರ್‌, ಹೆಟ್ಮಾಯೆರ್‌ ಔಟ್ ಆಗಿರಲಿಲ್ಲವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

“ಹೆಟ್ಮಾಯೆರ್‌ ಔಟ್ ಆದ ಕ್ಷಣ ವಿವಾದಾತ್ಮಕವಾಗಿತ್ತು. ನನ್ನ ಅಭಿಪ್ರಾಯದಲ್ಲಿ ಅವರು ಔಟ್ ಅಲ್ಲ. ಅವರು ಇನ್ನೂ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಉಳಿದು, ತಂಡದ ಮೊತ್ತ 220–230ಕ್ಕೆ ತಲುಪಿದ್ದರೆ, ಭಾರತ ಇಂದು ಹೊರಗುಳಿದಿರಬಹುದಿತ್ತು,” ಎಂದು ಅವರು ಹೇಳಿದರು.