ಲೀಡ್ಸ್: ಇಂಗ್ಲೆಂಡ್ ವಿರುದ್ಧ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ (IND vs ENG) ಭಾರತ ತಂಡದ ವೇಗಿ ಪ್ರಸಿಧ್ ಕೃಷ್ಣ (Prasidh Krishna) ಅವರು ತಮ್ಮ ಬೌಲಿಂಗ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 471 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 465 ರನ್ ಕಲೆ ಹಾಕಿ ಆಲ್‌ಔಟ್ ಆಗಿತ್ತು. ಆ ಮೂಲಕ 6 ರನ್ ಹಿನ್ನಡೆ ಅನುಭವಿಸಿತ್ತು. ಜಸ್‌ಪ್ರೀತ್ ಬುಮ್ರಾ (Jasprit Bumrah) ತಮ್ಮ ಮಾರಕ ಬೌಲಿಂಗ್ ದಾಳಿಯ ಮೂಲಕ 5 ವಿಕೆಟ್ ಸಾಧನೆ ಮಾಡಿದ್ದರು ಹಾಗೂ ಅತ್ಯಂತ ಕಡಿಮೆ ರನ್‌ಗಳನ್ನು ನೀಡಿದ್ದರು. ಇವರಿಗೆ ಕನ್ನಡಿಗ ಪ್ರಸಿಧ್ ಕೃಷ್ಣ ಸಾಥ್ ನೀಡಿದ್ದರು. ಅವರು 3 ವಿಕೆಟ್‌ಗಳನ್ನು ಪಡೆದರೂ ಅತ್ಯಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಪ್ರಸಿಧ್ ಕೃಷ್ಣ ಅವರು ಬೌಲ್ ಮಾಡಿದ್ದ 20 ಓವರ್‌ಗಳಲ್ಲಿ 128 ರನ್‌ಗಳನ್ನು ನೀಡಿ ಒಲ್ಲೀ ಪೋಪ್, ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ ಅವರನ್ನು ಔಟ್ ಮಾಡಿದ್ದರು. ಇವರು ಮೂರು ವಿಕೆಟ್‌ಗಳನ್ನು ಕಬಳಿಸಿದರೂ ಅತ್ಯಂತ ಹೆಚ್ಚಿನ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಅವರು 20 ಓವರ್‌ಗಳಲ್ಲಿ 6.40ರ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಇನಿಂಗ್ಸ್‌ವೊಂದರಲ್ಲಿ ಕನಿಷ್ಠ 20 ಓವರ್‌ಗಳನ್ನು ಬೌಲ್ ಮಾಡಿ ಅತಿ ಹೆಚ್ಚು ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಭಾರತೀಯ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ತಮ್ಮ ಹೆಗಲೇರಿಸಿಕೊಂಡಿದ್ದಾರೆ.
IND vs ENG: ಬುಮ್ರಾ 5 ವಿಕೆಟ್ ಬೇಟೆ; ಅಲ್ಪ ಮುನ್ನಡೆ ಸಾಧಿಸಿದ ಭಾರತ
ಇದರೊಂದಿಗೆ ಭಾರತ ತಂಡದ ಮಾಜಿ ವೇಗಿ ವರುಣ್ ಆರೋನ್ ಅವರನ್ನು ಪ್ರಸಿಧ್ ಕೃಷ್ಣ ಹಿಂದಿಕ್ಕಿದ್ದಾರೆ. ವರುಣ್ 2014ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಇನಿಂಗ್ಸ್‌ನಲ್ಲಿ ಬೌಲ್ ಮಾಡಿದ್ದ 23 ಓವರ್‌ಗಳಿಗೆ 2 ವಿಕೆಟ್ ಕಿತ್ತು 136 ರನ್‌ಗಖನ್ನು ನೀಡಿದ್ದರು. ಈ ಇನಿಂಗ್ಸ್‌ನಲ್ಲಿ ಅವರು 5.91ರ ಎಕಾನಮಿ ರೇಟ್‌ನಲ್ಲಿ ರನ್‌ಗಳನ್ನು ನೀಡಿ ದುಬಾರಿಯಾಗಿದ್ದರು. ಇದೀಗ ಈ ಅನಗತ್ಯ ದಾಖಲೆಯನ್ನು ಪ್ರಸಿಧ್ ಕೃಷ್ಣ ಮುರಿದಿದ್ದಾರೆ.
5 ವಿಕೆಟ್ ಕಿತ್ತು ಹಲವು ದಾಖಲೆಗಳನ್ನು ಬರೆದ ಬುಮ್ರಾ
ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ಪರ ಎಲ್ಲರ ಗಮನ ಸೆಳೆದಿದ್ದು, ಜಸ್‌ಪ್ರೀತ್ ಬುಮ್ರಾ. ಈ ಇನಿಂಗ್ಸ್‌ನಲ್ಲಿ ಅವರು 83 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು 5 ವಿಕೆಟ್ ಸಾಧನೆ ಮಾಡಿದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ನಾಯಕ ಹಾಗೂ ವೇಗಿ ಪ್ಯಾಟ್ ಕಮಿನ್ಸ್ ಅವರ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಕಮಿನ್ಸ್ 10 ಬಾರಿ 5 ವಿಕೆಟ್ ಕಿತ್ತಿದ್ದಾರೆ.
IND vs ENG 1st Test: ಅಂಪೈರ್ ತೀರ್ಪಿಗೆ ಚೆಂಡೆಸೆದ ಪಂತ್‌ಗೆ ದಂಡದ ಭೀತಿ
ಮೊದಲ ಏಷ್ಯಾ ಬೌಲರ್ ಜಸ್‌ಪ್ರೀತ್ ಬುಮ್ರಾ
ಜಸ್‌ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ಒಟ್ಟು 150 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೇನಾ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಏಷ್ಯಾ ಬೌಲರ್ ಎಂಬ ದಾಖಲೆಯನ್ನು ಬುಮ್ರಾ ಬರೆದಿದ್ದಾರೆ. ಆ ಮೂಲಕ ಪಾಕಿಸ್ತಾನ ದಿಗ್ಗಜ ವಸೀಮ್ ಅಕ್ರಮ್ (146 ವಿಕೆಟ್) ಅವರ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ. ಸೇನಾ ದೇಶಗಳಲ್ಲಿ 150 ವಿಕೆಟ್‌ಗಳನ್ನು ಕಿತ್ತ ಮೊದಲ ಏಷ್ಯಾ ಬೌಲರ್ ಎಂಬ ದಾಖಲೆಯನ್ನು ಕೂಡ ಬುಮ್ರಾ ಬರೆದಿದ್ದಾರೆ. ಈ ನಾಲ್ಕು ರಾಷ್ಟ್ರಗಳಲ್ಲಿ10 ವಿಕೆಟ್ ಸಾಧನೆ ಮಾಡಿದ ಮೂರನೇ ಏಷ್ಯಾದ ಬೌಲರ್ ಎಂಬ ದಾಖಲೆ ಕೂಡ ಜಸ್‌ಪ್ರೀತ್ ಬುಮ್ರಾ ಹೆಸರಿನಲ್ಲಿದೆ.