IND vs ENG: ಕೆಎಲ್ ರಾಹುಲ್‌ರನ್ನು ಶ್ಲಾಘಿಸಿ, ವಿರಾಟ್ ಕೊಹ್ಲಿಯನ್ನು ಟೀಕಿಸಿದ ಸಂಜಯ್ ಮಾಂಜ್ರೇಕರ್!
ಲೀಡ್ಸ್‌ನ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ 91 ರನ್‌ಗಳ ಜೊತೆಯಾಟವಾಡಿದರು. ಕೆಎಲ್ ರಾಹುಲ್ 42 ರನ್ ಗಳಿಸಿದ ನಂತರ ವಿಕೆಟ್ ಒಪ್ಪಿಸಿದರು. ಅವರು 78 ಎಸೆತಗಳಲ್ಲಿ 8 ಬೌಂಡರಿಗಳನ್ನು ಬಾರಿಸಿದರು. ಇದರ ನಡುವೆ ರಾಹುಲ್ ಅವರನ್ನು ಶ್ಲಾಘಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಾರೆ.

ಕೆಎಲ್ ರಾಹುಲ್‌ರನ್ನು ಹೊಗಳಿ ವಿರಾಟ್ ಕೊಹ್ಲಿಯನ್ನು ಟೀಕಿಸಿದ ಮಾಂಜ್ರೇಕರ್.

ಲೀಡ್ಸ್: ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆ ಟೆಸ್ಟ್ ಪಂದ್ಯದ (IND vs ENG) ಮೊದಲ ದಿನದಂದು ಭಾರತ ತಂಡ (India) ಅದ್ಭುತ ಆರಂಭವನ್ನು ಪಡೆದಿದೆ. ಟಾಸ್ ಸೋತ ನಂತರ ಮೊದಲು ಬ್ಯಾಟ್ ಮಾಡಲು ಬಂದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (KL Rahul) ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 91 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಆದರೆ ಈ ವೇಳೆ ರಾಹುಲ್ ಊಟದ ವಿರಾಮಕ್ಕೆ ಸ್ವಲ್ಪ ಮೊದಲು 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ ತಮ್ಮ ಇನಿಂಗ್ಸ್‌ನಲ್ಲಿ 78 ಎಸೆತಗಳನ್ನು ಎದುರಿಸಿದರು. ಇದರಲ್ಲಿ ಅವರು 8 ಬೌಂಡರಿಗಳನ್ನು ಸಹ ಗಳಿಸಿದರು. ಔಟಾಗುವ ಮುನ್ನ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಲಯದಲ್ಲಿ ಕಾಣುತ್ತಿದ್ದರು. ಆದರೆ, ಬ್ರೈಡನ್ ಕಾರ್ಸ್ ಎಸೆದ ಆಫ್ ಸ್ಟಂಪ್ ಹೊರಗಡೆ ಎಸೆತವನ್ನು ಆಡಲು ಹೋಗಿ ಸ್ಲಿಪ್‌ನಲ್ಲಿ ಕ್ಯಾಚ್ ಕೊಟ್ಟರು.
ಕೆಎಲ್ ರಾಹುಲ್ ವಿಶೇಷವಾಗಿ ಆಫ್ ಸೈಡ್ ಬಾಲ್‌ನಲ್ಲಿ ಬಹಳ ಎಚ್ಚರಿಕೆಯಿಂದ ಆಡುತ್ತಿದ್ದರು. ರಾಹುಲ್ ಅವರ ಬ್ಯಾಟಿಂಗ್ ವಿಧಾನದ ಬಗ್ಗೆ ಕಾಮೆಂಟ್ ಮಾಡುತ್ತಿದ್ದ ಸಂಜಯ್ ಮಾಂಜ್ರೇಕರ್ ಅವರನ್ನು ಹೊಗಳಿದರು. ಆದರೆ ಈ ಸಮಯದಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಅವರ ಹೆಸರನ್ನು ಉಲ್ಲೇಖಿಸದೆ ಟೀಕಿಸಿದರು. ಆಫ್ ಸೈಡ್ ಬಾಲ್‌ನಲ್ಲಿ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಅನ್ನು ನೋಡಿದ ಮಾಂಜ್ರೇಕರ್, "ಆಫ್ ಸೈಡ್ ಬಾಲ್ ಅನ್ನು ಹಿಂಬಾಲಿಸಿ ತೊಂದರೆಗೆ ಸಿಲುಕಿಸುತ್ತಿದ್ದ ಮಾಜಿ ಬ್ಯಾಟ್ಸ್‌ಮನ್ ನಮಗೆ ತಿಳಿದಿದೆ, ಆದರೆ ಈ ಇಬ್ಬರು (ಜೈಸ್ವಾಲ್, ಕೆಎಲ್ ರಾಹುಲ್) ಹಾಗೆ ಮಾಡುತ್ತಿಲ್ಲ," ಎಂದು ಹೇಳಿದ್ದರು.
IND vs ENG: ಮೊದಲನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಯಶಸ್ವಿ ಜೈಸ್ವಾಲ್!
ಆಫ್ ಸ್ಟಂಪ್ ಹೊರಗಡೆ ತೊಂದರೆ ಅನುಭವಿಸಿದ್ದ ಕೊಹ್ಲಿ
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರವಾಸದ ಭಾರತ ತಂಡದಲ್ಲಿ ಅವರು ಇಲ್ಲ. ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ನೀಡಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದರು. ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಆದರೆ ಕಳೆದ ಕೆಲವು ವರ್ಷಗಳಿಂದ, ಅವರು ಆಫ್ ಸ್ಟಂಪ್ ಹೊರಗಡೆ ಎಸೆತಗಳಲ್ಲಿ ತೊಂದರೆ ಅನುಭವಿಸಿದ್ದರು. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಈ ಎಸೆತಗಳಲಿ ಸಾಕಷ್ಟು ಬಾರಿ ಔಟ್ ಆಗಿದ್ದರು.
ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಆಫ್ ಸೈಡ್ ಬಾಲ್‌ನಲ್ಲಿ ಹಲವಾರು ಬಾರಿ ಔಟಾಗಿದ್ದರು. ಈ ವೇಳೆ ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕೇಳಿ ಬಂದಿದ್ದವು. ಸಂಜಯ್ ಮಾಂಜ್ರೇಕರ್ ಕಾಮೆಂಟರಿ ಮಾಡುವಾಗ ಆಫ್ ಸೈಡ್ ಬಾಲ್ ಬಗ್ಗೆ ಪ್ರಸ್ತಾಪಿಸಲು ಇದೇ ಕಾರಣ. ಆದರೆ ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಆಫ್ ಸೈಡ್ ಬಾಲ್ ದೌರ್ಬಲ್ಯದ ಬಗ್ಗೆ ಅವರು ಬಹಿರಂಗವಾಗಿ ಏನನ್ನೂ ಹೇಳಲಿಲ್ಲ.
IND vs ENG: ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!
ಯಶಸ್ವಿ ಜೈಸ್ವಾಲ್ ಶತಕ
ಭಾರತ ತಂಡದ ಪರ ಮೊದಲ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ಯಶಸ್ವಿ ಜೈಸ್ವಾಲ್. ಅವರು ದೀರ್ಘಾವಧಿ ಬ್ಯಾಟ್ ಮಾಡಿ 159 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಗಳಿಸಿದರು. ಆ ಮೂಲಕ ಇಂಗ್ಲೆಂಡ್‌ನಲ್ಲಿ ಆಡಿದ್ದ ತಮ್ಮ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೇ ಶತಕ ಬಾರಿಸಿದ್ದಾರೆ. ಅಲ್ಲದೆ, ಕೆಎಲ್ ರಾಹುಲ್ ಜೊತೆ ಮೊದಲನೇ ವಿಕೆಟ್‌ಗೆ 91 ರನ್ ಹಾಗೂ ಶುಭಮನ್ ಗಿಲ್ ಜೊತೆ ಮುರಿಯದ ಮೂರನೇ ವಿಕೆಟ್‌ಗೆ 129 ರನ್‌ಗಳ ಜೊತೆಯಾಟವನ್ನು ಆಡಿದ್ದರು.