IND vs ENG: ವಿರಾಟ್ ಕೊಹ್ಲಿ ಅಲ್ಲ, ಭಾರತಕ್ಕೆ ಇವರೇ ಡಾನ್ ಬ್ರಾಡ್ಮನ್ ಎಂದ ರವಿ ಶಾಸ್ತ್ರಿ!
Ravi Shastri Praised on Shubman Gill: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕಗಳನ್ನು ಬಾರಿಸುವ ಮೂಲಕ ಶುಭಮನ್ ಗಿಲ್, ಭಾರತ ತಂಡದ 336 ರನ್‌ಗಳ ಬೃಹತ್ ಅಂತರದ ಗೆಲುವಿಗೆ ನೆರವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್‌ಗೆ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಭಮನ್ ಗಿಲ್‌ಗೆ ರವಿ ಶಾಸ್ತ್ರಿ ಮೆಚ್ಚುಗೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ(IND vs ENG) ಅತ್ಯುತ್ತಮ ಬ್ಯಾಟಿಂಗ್ ಹಾಗೂ ನಾಯಕತ್ವವನ್ನು ನಿರ್ವಹಿಸಿದ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರನ್ನು ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri)ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ 269 ರನ್‌ಗಳು ಹಾಗೂ 161 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಟೀಮ್ ಇಂಡಿಯಾದ 336 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಶುಭಮನ್ ಗಿಲ್ ಅವರು ಭಾರತ ತಂಡಕ್ಕೆ ಡಾನ್ ಬ್ರಾಡ್ಮನ್ ರೀತಿ ಎಂದು ರವಿ ಶಾಸ್ತ್ರಿ ಗುಣಗಾಣ ಮಾಡಿದ್ದಾರೆ.
ಭಾರತ ಟೆಸ್ಟ್ ತಂಡದ ನಾಯಕನಾಗಿ ಶುಭಮನ್ ಗಿಲ್‌ಗೆ ಇದು ಮೊದಲ ಟೆಸ್ಟ್ ಸರಣಿಯಾಗಿದೆ. ತಮ್ಮ ನಾಯಕತ್ವದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಗಿಲ್, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರಿ ಅಂತರದಲ್ಲಿ ಗೆಲುವು ಪಡೆಯುವ ಮೂಲಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ರವಿ ಶಾಸ್ತ್ರಿ, ಭಾರತ ತಂಡದ ನಾಯಕನಿಂದ ಅದ್ಭುತ ಪ್ರದರ್ಶನ ಹೊರ ಬಿದ್ದಿದೆ ಹಾಗೂ ಅವರ ನಾಯಕತ್ವ 10ಕ್ಕೆ 10ರ ರೇಟಿಂಗ್ಸ್ ಸಿಕ್ಕಿದೆ ಎಂದು ಹೇಳಿದ್ದಾರೆ.
IND vs ENG: 3ನೇ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ಗೆ ವಿಶೇಷ ಮನವಿ ಮಾಡಿದ ಇಂಗ್ಲೆಂಡ್
ಶುಭಮನ್ ಗಿಲ್ ಭಾರತದ ಡಾನ್ ಬ್ರಾಡ್ಮನ್
ಶುಭಮನ್ ಗಿಲ್ ನಾಯಕನಾಗಿ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಡಾನ್ ಬ್ರಾಡ್ಮನ್ ಅವರ ರೀತಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಅವರು ನಾಯಕತ್ವದಲ್ಲಿ 10ಕ್ಕೆ 10 ಅಂಕವನ್ನು ಪಡೆದಿದ್ದಾರೆ. ನಾಯಕನಿಂದ ಇದಕ್ಕಿಂತ ಜಾಸ್ತಿ ಏನನ್ನೂ ಕೇಳಲು ಸಾಧ್ಯವಿಲ್ಲ. ನೀವು ಡಾನ್ ಬ್ರಾಡ್ಮನ್ ರೀತಿ ಬ್ಯಾಟ್ ಮಾಡಿದ್ದಾರೆ. 269 ರನ್‌ಗಳು ಹಾಗೂ 161 ರನ್‌ಗಳನ್ನು ಬಾರಿಸಿದ್ದಾರೆ.
ಹೆಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಚೆಂಡನ್ನು ಅನುಸರಿಸುತ್ತಿದ್ದಾಗ ಅವರ ನಾಯಕತ್ವವು ತುಂಬಾ ಪ್ರತಿಕ್ರಿಯಾತ್ಮಕವಾಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ. ಗಿಲ್ ಅವರ ನಾಯಕತ್ವದ ಜೊತೆಗೆ 10 ವಿಕೆಟ್‌ಗಳನ್ನು ಕಬಳಿಸಿದ ಆಕಾಶ್ ದೀಪ್ ಅವರನ್ನು ಕೂಡ ಶಾಸ್ತ್ರಿ ಶ್ಲಾಘಿಸಿದ್ದಾರೆ. ಇಂಗ್ಲೆಂಡ್ ಕಂಡೀಷನ್ಸ್‌ಗೆ ಆಕಾಶ್ ದೀಪ್ ಬೌಲಿಂಗ್ ಸೂಕ್ತವಾಗಿದ್ದು, ಈ ಸರಣಿಯುದ್ದ್ಕಕೂ ಅವರು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಲಿದ್ದಾರೆಂದು ಅವರು ತಿಳಿಸಿದ್ದಾರೆ.
IND vs ENG: ಬುಮ್ರಾ ಇನ್, ಪ್ರಸಿಧ್ ಔಟ್? ಲಾರ್ಡ್ಸ್ ಟೆಸ್ಟ್‌ಗೆ ಭಾರತ ತಂಡದಲ್ಲಿ 2 ಬದಲಾವಣೆ!
ಆಕಾಶ್ ದೀಪ್‌ಗೆ ರವಿ ಶಾಸ್ತ್ರಿ ಮೆಚ್ಚುಗೆ
"ಮೊದಲನೇ ಟೆಸ್ಟ್ ಪಂದ್ಯದ ಬೌಲಿಂಗ್ ವೇಳೆ ಶುಭಮನ್ ಗಿಲ್ ಪ್ರತಿಕ್ರಿಯಾತ್ಮಕವಾಗಿದ್ದರು. ನೀವು ಬಹುತೇಕ ಚೆಂಡನ್ನು ಹಿಂಬಾಲಿಸಿದ್ರಿ. ಮುಂದಿನ ಪಂದ್ಯಕ್ಕೆ ನೀವು ತುಂಬಾ ಕ್ರಿಯಾಶೀಲರಾಗುತ್ತೀರಿ. ಈ ಸರಣಿ ಮುಂದುವರಿದಂತೆ ಇಂಗ್ಲೆಂಡ್‌ಗೆ ತೊಂದರೆ ಕೊಡುವ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡುವ ಮೂಲಕ ನೀವು ಈ ಭಾರತೀಯ ತಂಡದಲ್ಲಿ ಇಂಗ್ಲಿಷ್ ಪರಿಸ್ಥಿತಿಗಳಿಗೆ ಅತ್ಯುತ್ತಮ ಸೀಮರ್ ಅನ್ನು ಕಂಡುಕೊಂಡಿರಬಹುದು," ಎಂದು ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ.
ಶುಭಮನ್ ಗಿಲ್ ಅವರು ದ್ವಿಶತಕ ಹಾಗೂ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿಯ ಹಲವು ದಾಖಲೆಗಳನ್ನು ಮುರಿದಿದ್ದರು. ಭಾರತ ಟೆಸ್ಟ್ ತಂಡದ ನಾಯಕನಾಗಿ ಗಿಲ್ ಎಜ್‌ಬಾಸ್ಟನ್‌ನಲ್ಲಿ ಮೊದಲನೇ ಟೆಸ್ಟ್ ಪಂದ್ಯವನ್ನು ಗೆದ್ದಿದ್ದರು. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜುಲೈ 10 ರಂದು ಲಂಡನ್‌ನ ಲಾರ್ಡ್ಸ್ ಅಂಗಣದಲ್ಲಿ ಆರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.