IND vs ENG: 3ನೇ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ಗೆ ವಿಶೇಷ ಮನವಿ ಮಾಡಿದ ಇಂಗ್ಲೆಂಡ್
ಭಾರತ ತಂಡದ ನಾಯಕ ಶುಭಮನ್ ಗಿಲ್ ಕೂಡ ಆರಂಭಿಕ 2 ಟೆಸ್ಟ್‌ನಂತೆ ಲಾರ್ಡ್ಸ್‌ನಲ್ಲೂ ರನ್ ಮಳೆ ಹರಿಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ‘ಲಾರ್ಡ್ಸ್‌ನಲ್ಲಿ ಯಾವ ರೀತಿ ಪಿಚ್ ನೀಡುತ್ತಾರೆ ನೋಡಬೇಕು. ಇಂಗ್ಲೆಂಡ್ ಮತ್ತೆ ಇಂತಹ ಬ್ಯಾಟಿಂಗ್ ಸ್ನೇಹಿ ಪಿಚ್ ತಯಾರಿಸಲಿದೆ ಎಂದು ನನಗೆ ಅನಿಸುವುದಿಲ್ಲ. ಪಿಚ್ ಹೇಗೆ ವರ್ತಿಸಲಿದೆ ಎಂಬುದನ್ನು ನೋಡಿ ತಂಡದ ಆಯ್ಕೆ ಮಾಡುತ್ತೇವೆ’ ಎಂದಿದ್ದಾರೆ.


ಲಂಡನ್: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್(IND vs ENG) ತಂಡ ಲಾರ್ಡ್ಸ್‌ನಲ್ಲಿ(Lord's pitch) ಬೌನ್ಸಿ ಮತ್ತು ಎಕ್ಸ್‌ಟ್ರಾ ಪೇಸ್ ಇರುವ ಪಿಚ್ ನಿರ್ಮಿಸಲು ಪಿಚ್ ಕ್ಯುರೇಟರ್ಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಫ್ಲಾಟ್ ಟ್ರ್ಯಾಕ್ ನಿರ್ಮಿಸಿ ಇಂಗ್ಲೆಂಡ್ ಭಾರತೀಯ ಬ್ಯಾಟರ್ಗಳಿಂದ ಸರಿಯಾಗಿ ಪೆಟ್ಟು ತಿಂದಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿಯೂ ಭಾರತಕ್ಕೆ ಗೆಲುವು ಸಾಧಿಸುವ ಅವಕಾಶವಿತ್ತಾದರೂ ಕಳಪೆ ಫೀಲ್ಡಿಂಗ್‌ನಿಂದ ಸೋಲು ಕಂಡಿತ್ತು.
ದ್ವಿತೀಯ ಟೆಸ್ಟ್‌ನಲ್ಲಿ ಎಲ್ಲ ನೂನ್ಯತೆ ಸರಿಪಡಿಸಿಕೊಂಡು ಗಿಲ್ ಪಡೆ ಗೆಲುವು ಸಾಧಿಸಿತ್ತು. 1000ಕ್ಕೂ ಹೆಚ್ಚು ರನ್ ಪೇರಿಸಿ ಪ್ರಾಬಲ್ಯ ಮೆರೆದಿತ್ತು. ಇದೀಗ ಲಾರ್ಡ್ಸ್ನಂತಹ ಐತಿಹಾಸಿಕ ಕ್ರೀಡಾಂಗಣದಲ್ಲಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಇಂಗ್ಲೆಂಡ್ ತಂಡ ಬೌನ್ಸಿ ಪಿಚ್‌ಗೆ ಮೊರೆಹೋಗಿದೆ ಎನ್ನಲಾಗಿದೆ.
ಭಾರತ ತಂಡದ ನಾಯಕ ಶುಭಮನ್ ಗಿಲ್ ಕೂಡ ಆರಂಭಿಕ 2 ಟೆಸ್ಟ್‌ನಂತೆ ಲಾರ್ಡ್ಸ್‌ನಲ್ಲೂ ರನ್ ಮಳೆ ಹರಿಯುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ‘ಲಾರ್ಡ್ಸ್‌ನಲ್ಲಿ ಯಾವ ರೀತಿ ಪಿಚ್ ನೀಡುತ್ತಾರೆ ನೋಡಬೇಕು. ಇಂಗ್ಲೆಂಡ್ ಮತ್ತೆ ಇಂತಹ ಬ್ಯಾಟಿಂಗ್ ಸ್ನೇಹಿ ಪಿಚ್ ತಯಾರಿಸಲಿದೆ ಎಂದು ನನಗೆ ಅನಿಸುವುದಿಲ್ಲ. ಪಿಚ್ ಹೇಗೆ ವರ್ತಿಸಲಿದೆ ಎಂಬುದನ್ನು ನೋಡಿ ತಂಡದ ಆಯ್ಕೆ ಮಾಡುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ India's Test Record At Lord's: ಲಾರ್ಡ್ಸ್‌ನಲ್ಲಿ ಮೂರೇ ಸಲ ಭಾರತ ಲಕ್ಕಿ
ಇನ್ನೊಂದೆಡೆ 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ವೇಗಿ ಗಸ್ ಆಟ್ಕಿನ್ಸನ್‌ರನ್ನು ಸೇರ್ಪಡೆಗೊಳಿಸಿದೆ. ಅವರು ಗಾಯದಿಂದಾಗಿ ಕೆಲ ಕಾಲ ತಂಡದಿಂದ ಹೊರಗುಳಿದಿದ್ದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ಆಟ್ಕಿನ್ಸನ್ ಮಾತ್ರವಲ್ಲದೆ ಜೋಫ್ರಾ ಆರ್ಚರ್ ಕೂಡಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಇಂಗ್ಲೆಂಡ್ ತಂಡ ಕೂಡಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ.
2 ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿರುವ ಪ್ರಸಿದ್ಧ್ ಕೃಷ್ಣ 3ನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಮೊದಲ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆದಿದ್ದ ಪ್ರಸಿದ್ಧ್ ದುಬಾರಿಯಾಗಿದ್ದರು. 2ನೇ ಪಂದ್ಯದಲ್ಲಿ ಕೇವಲ 1 ವಿಕೆಟ್ ಮಾತ್ರ ಕಿತ್ತಿದ್ದರು. ಲಾರ್ಡ್ಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಆಡುವುದು ಬಹುತೇಕ ಖಚಿತವಾಗಿರುವುದರಿಂದ ಪ್ರಸಿದ್ಧ್ ಹೊರಬೀಳುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಸ್ಥಾನಕ್ಕೆ ಹೆಚ್ಚುವರಿ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್‌ರನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ.