ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಮೊದಲನೇ ಟಿ20ಐಗೂ ಮುನ್ನ ಭಾರತ ತಂಡಕ್ಕೆ ಸೇರಿದ ವರುಣ್‌ ಚಕ್ರವರ್ತಿ!

ಐರ್ಲೆಂಡ್‌ ವಿರುದ್ಧ ಟಿ20ಐ ಸರಣಿಯನ್ನು ಸೋತಿದ್ದ ಭಾರತ ತಂಡ, ಇದೀಗ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲು ಸಜ್ಜಾಗುತ್ತಿದೆ. ಈ ಸರಣಿಗೂ ಮುನ್ನ ಭಾರತ ತಂಡಕ್ಕೆ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಭಾರತ ತಂಡದ ಸ್ಪಿನ್‌ ವಿಭಾಗ ಬಲಿಷ್ಠವಾಗಿದೆ.

ಭಾರತ ತಂಡಕ್ಕೆ ವರುಣ್‌ ಚಕ್ರವರ್ತಿ ಸೇರ್ಪಡೆ.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯಕ್ಕೂ (IND vs ENG) ಮುನ್ನ ಭಾರತ ತಂಡಕ್ಕೆ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) ಸೇರ್ಪಡೆಯಾಗಿದ್ದಾರೆ. ಆ ಮೂಲಕ ಭಾರತ ತಂಡದ ಸ್ಪಿನ್‌ ವಿಭಾಗಕ್ಕೆ ಇನ್ನಷ್ಟು ಬಲಬಂದಂತಾಗಿದೆ. ಜುಲೈ ಒಂದರಿಂದ ಐದು ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ. ಅಂದ ಹಾಗೆ ಭಾರತ ತಂಡದ ಅಭ್ಯಾಸದ ವೇಳೆ ವರುಣ್‌ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಮೊದಲನೇ ಟಿ20ಐ ಪಂದ್ಯದಲ್ಲಿ ಅವರು ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ.

ವರದಿಗಳ ಪ್ರಕಾರ, ಅಭ್ಯಾಸದ ವೇಳೆ ವರುಣ್‌ ಚಕ್ರವರ್ತಿ ಸಂಪೂರ್ಣ ಫಿಟ್ ಆಗಿ ಯಾವುದೇ ಸಮಸ್ಯೆ ಇಲ್ಲದೆ ಕಾಣಿಸಿಕೊಂಡರು. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುತ್ತಿದ್ದ ವೇಳೆ ಕಾಲಿನ ಬೆರಳಿಗೆ ಗಾಯವಾಗಿದ್ದ ಕಾರಣ, ಅವರು ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಿಂದ ಹೊರಗುಳಿದಿದ್ದರು.

IND vs ENG ಒಡಿಐ ಸರಣಿಗೂ ಮುನ್ನ ರೋಹಿತ್‌ ಶರ್ಮಾಗೆ ಸುನೀಲ್‌ ಗವಾಸ್ಕರ್‌ ವಾರ್ನಿಂಗ್!

2026ರ ಐಪಿಎಲ್‌ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುತ್ತಿದ್ದ ವೇಳೆ ವರುಣ್ ಚಕ್ರವರ್ತಿ ಅವರ ಕಾಲಿನ ಬೆರಳಿಗೆ ಗಾಯವಾಗಿತ್ತು. ಬಳಿಕ ಅವರ ಎಡ ಕಾಲಿನ ಬೆರಳಿನಲ್ಲಿ ಹೇರ್‌ಲೈನ್ ಫ್ರ್ಯಾಕ್ಚರ್ ಆಗಿರುವುದು ದೃಢಪಟ್ಟಿತ್ತು. ಈ ಗಾಯದ ಕಾರಣದಿಂದ ಅವರು ಹಲವು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು.

ವರುಣ್ ಚಕ್ರವರ್ತಿ ಕಣಕ್ಕಿಳಿಯಲು ಸಜ್ಜು

ಕೆಕೆಆರ್‌ನ ಐಪಿಎಲ್ 2026ರ ಅಭಿಯಾನ ಮುಕ್ತಾಯಗೊಂಡ ಬಳಿಕ ವರುಣ್ ಚಕ್ರವರ್ತಿ ಯಾವುದೇ ಪಂದ್ಯದಲ್ಲಿ ಆಡಿಲ್ಲ. ಭಾರತ ತಂಡದ ಪರ ಅವರು ಕೊನೆಯದಾಗಿ 2026ರ ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆ ಇಳಿದಿದ್ದರು.

ಇಂಗ್ಲೆಂಡ್‌ ವಿರುದ್ಧ ಆರಂಭಿಕ 2 ಪಂದ್ಯಗಳಿಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಕೆ ಶ್ರೀಕಾಂತ್‌!

ಭಾರತ ತಂಡದ ವಿಶ್ವಕಪ್ ಗೆಲುವಿನ ಅಭಿಯಾನದಲ್ಲಿ ವರುಣ್ ಪ್ರಮುಖ ಪಾತ್ರವಹಿಸಿದ್ದರು. ಆದರೆ 2026ರ ಐಪಿಎಲ್ ಟೂರ್ನಿಯ ಬಹುತೇಕ ಅವಧಿಯಲ್ಲಿ 34ರ ವಯಸ್ಸಿನ ವರುಣ್ ಚಕ್ರವರ್ತಿ ತಮ್ಮ ಅತ್ಯುತ್ತಮ ಲಯದಲ್ಲಿರಲಿಲ್ಲ. ನಂತರ ಕ್ರಮೇಣ ವಿಕೆಟ್‌ಗಳನ್ನು ಪಡೆಯುತ್ತಾ ಫಾರ್ಮ್‌ಗೆ ಮರಳುತ್ತಿದ್ದ ವೇಳೆ ಎಡ ಕಾಲಿನ ಬೆರಳಿನ ಗಾಯ ಅವರ ಅಭಿಯಾನಕ್ಕೆ ಅಡ್ಡಿಯಾಯಿತು. ಎಲ್ಲವೂ ಯೋಜನೆಯಂತೆ ನಡೆದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಪರ ವರುಣ್ ಚಕ್ರವರ್ತಿ ಮತ್ತೆ ಕಣಕ್ಕಿಳಿಯುವ ನಿರೀಕ್ಷೆಯಿದೆ.

ಇಂಗ್ಲೆಂಡ್‌ ಎದುರು ಇಬ್ಬರು ಸ್ಪಿನ್ನರ್‌ಗಳು ಕಣಕ್ಕೆ?

ಐರ್ಲೆಂಡ್‌ ಎದುರು ಎರಡನೇ ಟಿ20ಐ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಅವರು ಮಾತ್ರ ಸ್ಪಿನ್ನರ್‌ ಆಗಿ ಮಾತ್ರ ಆಡಿದ್ದರು. ಆದರೆ, ಅವರ ಉಪಸ್ಥಿತಿಯಿಂದ ತಂಡಕ್ಕೆ ಯಾವುದೇ ವಿಶೇಷ ಲಾಭವಾಗಲಿಲ್ಲ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆ ಪಂದ್ಯವನ್ನು ಭಾರತ ತಂಡ ಕೇವಲ ಒಂದು ರನ್‌ನಿಂದ ಸೋತು ಸರಣಿಯನ್ನು 0-2 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಘಾತವನ್ನು ಅನುಭವಿಸಿತ್ತು.



ಹಾಲಿ ಟಿ20ಐ ಚಾಂಪಿಯನ್ಸ್‌ ಇಂಗ್ಲೆಂಡ್‌ ಎದುರು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದೆ. ಐರ್ಲೆಂಡ್‌ಗಿಂತ ಇಂಗ್ಲೆಂಡ್‌ ಅತ್ಯಂತ ಬಲಶಾಲಿಯಾದ ತಂಡ. ಹಾಗಾಗಿ ಭಾರತ ತಂಡ ತನ್ನ ಅತ್ಯುತ್ತಮ ಪ್ಲೇಯಿಂಗ್‌ XIನೊಂದಿಗೆ ಕಣಕ್ಕೆ ಇಳಿಯಲಿದೆ. ಕಳೆದ ಸರಣಿಯಲ್ಲಿ ಸ್ಪಿನ್‌ ವಿಭಾಗವೈಫಲ್ಯ ಅನುಭವಿಸಿರುವ ಕಾರಣ, ವರುಣ್‌ಗೆ ಈ ಪಂದ್ಯದಲ್ಲಿ ಮಣೆ ಹಾಕಬಹುದು.