ಇಂಗ್ಲೆಂಡ್ ವಿರುದ್ಧ ಆರಂಭಿಕ 2 ಪಂದ್ಯಗಳಿಗೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ಭಾರತ ತಂಡದ ಪ್ಲೇಯಿಂಗ್ XI ಅನ್ನು ಮಾಜಿ ಬಿಸಿಸಿಐ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್ ಆಯ್ಕೆ ಮಾಡಿದ್ದಾರೆ. ಆದರೆ, ಯುವ ಆರಂಭಿಕ ವೈಭವ್ ಸೂರ್ಯವಂಶಿ ಅವರನ್ನು ಕೈ ಬಿಟ್ಟಿದ್ದಾರೆ. ಇದಕ್ಕೆ ಕಾರಣವೇನೆಂದು ಕೂಡ ಅವರು ವಿವರಿಸಿದ್ದಾರೆ.
ವೈಭವ್ ಸೂರ್ಯವಂಶಿಯನ್ನು ಕೈ ಬಿಟ್ಟು ಭಾರತದ ಪ್ಲೇಯಿಂಗ್ XI ಕಟ್ಟಿದ ಶ್ರೀಕಾಂತ್. -
ನವದೆಹಲಿ: ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20ಐ ಸರಣಿಯನ್ನು ಸೋತಿರುವ ಭಾರತ ತಂಡ, ಇದೀಗ ಇಂಗ್ಲೆಂಡ್ ಎದುರು ಐದು ಪಂದ್ಯಗಳ ಟಿ20ಐ ಸರಣಿಗೆ (IND vs IRE) ಸಜ್ಜಾಗುತ್ತಿದೆ. ಜುಲೈ ಒಂದರಂದು ಮೊದಲನೇ ಪಂದ್ಯ ನಡೆಯಲಿದೆ. ಅಂದ ಹಾಗೆ ಈ ಟಿ20ಐ ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ ಬಿಸಿಸಿಐ ಮಾಜಿ ಸೆಲೆಕ್ಟರ್ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಅವರು ಭಾರತ ತಂಡದ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ಆದರೆ, ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರನ್ನು ಕೈ ಬಿಟ್ಟಿದ್ದು, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕರಾಗಿ ಉಳಿಸಿಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೆ ಶ್ರೀಕಾಂತ್, "ಅವರು (ಸೂರ್ಯವಂಶಿ) ಖಂಡಿತವಾಗಿಯೂ ಐರ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಆಡಬೇಕಾಗಿತ್ತು. ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅದ್ಭುತ ಅರ್ಧಶತಕ ಗಳಿಸಿದ್ದರಿಂದ ಅವರಿಗೆ ವಿಶ್ರಾಂತಿ ನೀಡಬಹುದಿತ್ತು. ಅವರ ಬದಲಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕಿತ್ತು. ಅಭಿಷೇಕ್ ಶರ್ಮಾ ತಂಡದಲ್ಲಿ ಸ್ಥಾನ ಖಚಿತವಾಗಿರುವ ಆಟಗಾರ, ಆದ್ದರಿಂದ ಐರ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗಬೇಕಿತ್ತು," ಎಂದು ಹೇಳಿದರು.
IND vs ENG ಒಡಿಐ ಸರಣಿಗೂ ಮುನ್ನ ರೋಹಿತ್ ಶರ್ಮಾಗೆ ಸುನೀಲ್ ಗವಾಸ್ಕರ್ ವಾರ್ನಿಂಗ್!
"ಯಾರಿಗೆ ಗೊತ್ತು? ಅವರು ಪಂದ್ಯವನ್ನೇ ಗೆಲ್ಲಿಸಬಹುದಾಗಿತ್ತು. ಏಕೆಂದರೆ ಐಪಿಎಲ್ ಟೂರ್ನಿಯಲ್ಲಿ ಅವರು ಕಠಿಣ ಪರಿಸ್ಥಿತಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಈಗ ಅವರು ಐರ್ಲೆಂಡ್ ವಿರುದ್ಧ ಆಡದಿರುವುದರಿಂದ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟಿ20ಐ ಪಂದ್ಯಗಳಲ್ಲಿ ನಾನು ಅವರನ್ನು ಆಡಿಸುವುದಿಲ್ಲ," ಎಂದು ಅವರು ತಿಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸಿದ್ದರು, ಆದರೆ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಎರಡನೇ ಪಂದ್ಯದಲ್ಲಿ ಇಬ್ಬರೂ ಭಾರತೀಯ ಆರಂಭಿಕರು ಗೋಲ್ಡನ್ ಡಕ್ ಆಗಿ ಹೊರಬಿದ್ದರು. ಮೊದಲ ಪಂದ್ಯದಲ್ಲಿ 183 ರನ್ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತ ವಿಫಲವಾಗಿ 34 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. ಎರಡನೇ ಪಂದ್ಯದಲ್ಲಿ ಭಾರತ ಕೇವಲ ಒಂದು ರನ್ ಅಂತರದಲ್ಲಿ ಸೋತಿತು. ಈ ಸರಣಿಯಲ್ಲಿ ಭಾರತ, ಮೊದಲ ಬಾರಿ ಐರ್ಲೆಂಡ್ ವಿರುದ್ಧ ಸರಣಿಯನ್ನು ಕಳೆದುಕೊಂಡಿತು.
IND vs ENG: ಟಿ20ಐ ಸರಣಿಗೂ ಮುನ್ನ ಶ್ರೇಯಸ್ ಅಯ್ಯರ್ ಬಗ್ಗೆ ಅಂಬಾಟಿ ರಾಯುಡು ದೊಡ್ಡ ಹೇಳಿಕೆ!
ಕೆ ಶ್ರೀಕಾಂತ್ ಆಯ್ಕೆಯ ಭಾರತದ ಪ್ಲೇಯಿಂಗ್ XI
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಶಿವಂ ದುಬೇ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್
ಇಂಗ್ಲೆಂಡ್ ಟಿ20ಐ ಸರಣಿಯ ವೇಳಾಪಟ್ಟಿ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟಿ20ಐ ಪಂದ್ಯಗಳು ಜುಲೈ 1, 4, 7, 9 ಮತ್ತು 11 ರಂದು ಕ್ರಮವಾಗಿ ಚೆಸ್ಟರ್-ಲೆ-ಸ್ಟ್ರೀಟ್, ಮ್ಯಾಂಚೆಸ್ಟರ್, ನಾಟಿಂಗ್‌ಹ್ಯಾಮ್, ಬ್ರಿಸ್ಟಲ್ ಮತ್ತು ಸೌಥಾಂಪ್ಟನ್‌ನಲ್ಲಿ ನಡೆಯಲಿವೆ. ಮೂರು ಏಕದಿನ (ODI) ಪಂದ್ಯಗಳು ಜುಲೈ 14, 16 ಮತ್ತು 19 ರಂದು ಕ್ರಮವಾಗಿ ಬರ್ಮಿಂಗ್‌ಹ್ಯಾಮ್, ಕಾರ್ಡಿಫ್ ಮತ್ತು ಲಾರ್ಡ್ಸ್‌ನಲ್ಲಿ ನಡೆಯಲಿವೆ.