IND vs WI 4th T20I: ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ನಾಲ್ಕನೇ ಟಿ20ಐ ಪಂದ್ಯ ಅಕ್ಟೋಬರ್ 14 ರಂದು ಹೈದರಾಬಾದ್ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿವೆ. ಕಳೆದ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆದ್ದು, ಟಿ20ಐ ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ನಾಲ್ಕನೇ ಟಿ20ಐ ಪಂದ್ಯ. -
ಹೈದರಾಬಾದ್: ಮೂರನೇ ಪಂದ್ಯದ ಗೆಲುವಿನ ವಿಶ್ವಾಸದಲ್ಲಿರುವ ಭಾರತ ತಂಡ, ಇದೀಗ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಪಂದ್ಯವನ್ನು ಗೆದ್ದು ಟಿ20ಐ ಸರಣಿಯನ್ನು (IND vs WI) ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಕಳೆದ ಪಂದ್ಯದಲ್ಲಿ ಕಠಿಣ ಹೋರಾಟದ ಹೊರತಾಗಿಯೂ ಅಂತಿಮವಾಗಿ ಸೋಲು ಅನುಭವಿಸಿದ್ದ ವಿಂಡೀಸ್, ಇದೀಗ ಟಿ20ಐ ಸರಣಿಯನ್ನು ಗೆಲ್ಲಬೇಕೆಂದರೆ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹಾಗಾಗಿ ಶೇಯ್ ಹೋಪ್ (Shai Hope) ಸಾರರ್ಥ್ಯದ ವಿಂಡೀಸ್‌ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಉಂಟಾಗಿದೆ. ಆದರೆ, ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಭಾರತ ತಂಡ ಟಿ20ಐ ಸರಣಿಯನ್ನು ಗೆಲ್ಲಬೇಕೆಂದರೆ ಕೊನೆಯ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ.
ಉಭಯ ತಂಡಗಳ ನಡುವಣ ನಾಲ್ಕನೇ ಟಿ20ಐ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಎರಡು ಪಂದ್ಯಗಳು ಹೈಸ್ಕೋರಿಂಗ್ ಆಗಿದ್ದವು. ನಾಲ್ಕನೇ ಪಂದ್ಯದಲ್ಲಿಯೂ ಉಭಯ ತಂಡಗಳಿಂದ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಭಾರತ ತಂಡದ ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಅದ್ಭುತ ಲಯದಲ್ಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಕೂಡ ಭಯಾನಕ ಫಾರ್ಮ್‌ನಲ್ಲಿದ್ದಾರೆ.
4ನೇ ಟಿ20; ಸಂಜು ಅಥವಾ ಸೂರ್ಯವಂಶಿ? ಯಾರಿಗೆ ಚಾನ್ಸ್? ಹೀಗಿರಬಹುದು ಭಾರತದ ಸಂಭಾವ್ಯ XI
ಇನ್ನು ವೆಸ್ಟ್ ಇಂಡೀಸ್ ತಂಡ ಕೂಡ ಟಿ20ಐ ಸರಣಿಯಲ್ಲಿ ಭರ್ಜರಿ ಪೈಪೋಟಿಯನ್ನು ನೀಡುತ್ತಿದೆ. ಮೊದಲನೇ ಪಂದ್ಯದಲ್ಲಿನ ಸೋಲಿನ ಬಳಿಕ ಎಚ್ಚೆತ್ತುಕೊಂಡಿದ್ದ ವಿಂಡೀಸ್ ಕಳೆದ ಎರಡೂ ಪಂದ್ಯಗಳಲ್ಲಿ 200ಕ್ಕೂ ಅಧಿಕ ರನ್‌ಗಳನ್ನು ಗಳಿಸಿತ್ತು. ಎರಡನೇ ಪಂದ್ಯದಲ್ಲಿ ದಾಖಲೆಯ ಮೊತ್ತವನ್ನು ಚೇಸ್ ಮಾಡಿದ್ದ ವಿಂಡೀಸ್, ಮೂರನೇ ಪಂದ್ಯದಲ್ಲಿಯೂ ಚೇಸಿಂಗ್‌ನಲ್ಲಿ 209 ರನ್‌ಗಳನ್ನು ಗಳಿಸಿ ಕೇವಲ 14 ರನ್‌ಗಳಿಂದ ಸೋತಿತ್ತು. ಆದರೆ, ಪ್ರವಾಸಿ ತಂಡದಲ್ಲಿಯೂ ಶೇಯ್ ಹೋಪ್, ಕಮಿಲ್ ಪೂರನ್, ಶೆರ್ಫೆನ್ ಋದರ್‌ಫೋರ್ಡ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಪಂದ್ಯದ ವಿವರ
ನಾಲ್ಕನೇ ಟಿ20ಐ ಪಂದ್ಯ
ಭಾರತ VS ವೆಸ್ಟ್ ಇಂಡೀಸ್
ದಿನಾಂಕ: ಅಕ್ಟೋಬರ್ 14,2026
ಸಮಯ: ಸಂಜೆ 07:00 ಗಂಟೆಗೆ
ಸ್ಥಳ: ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್
IND vs WI: 200 ರನ್‌ಗಳ ಪಂದ್ಯದ ಮೂಲಕ ಎಂಎಸ್ ಧೋನಿಯನ್ನು ಹಿಂದಿಕ್ಕಿದ ಶ್ರೇಯಸ್ ಅಯ್ಯರ್!
ಹೈದರಾಬಾದ್ ಪಿಚ್ ರಿಪೋರ್ಟ್
ಇಲ್ಲಿನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ವಿಕೆಟ್ ಆಗಿದೆ. ಅತ್ಯುತ್ತಮ ಬೌನ್ಸ್ ಹಾಗೂ ಬ್ಯಾಟ್‌ಗೆ ಚೆಂಡು ಸುಲಭವಾಗಿ ಸಿಗುವ ಕಾರಣ ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸಬಹುದು. ಹೊಸ ಚೆಂಡಿನಲ್ಲಿ ವೇಗಿಗಳಿಗೆ ಪಿಚ್ ನೆರವು ನೀಡಲಿದೆ. ಪಂದ್ಯ ಸಾಗುತ್ತಿದ್ದಂತೆ ಪಿಚ್ ಸ್ಪಿನ್ನರ್‌ಗಳಿಗೂ ನೆರವು ನೀಡಬಹುದು.
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 34
ಭಾರತದ ಗೆಲುವು: 22
ವೆಸ್ಟ್ ಇಂಡೀಸ್: 11
ಟೈ/ನೋ ರಿಸಲ್ಟ್: 01
IND vs WI: ರೊವ್ಮನ್ ಪೊವೆಲ್, ಶೆರ್ಫೆನ್ ಋದರ್‌ಫೋರ್ಡ್‌ಗೆ ಡೀಮೆರಿಟ್ ಪಾಯಿಂಟ್ ನೀಡಿದ ಐಸಿಸಿ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಅಕ್ಷರ್ ಪಟೇಲ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್
ವೆಸ್ಟ್ ಇಂಡೀಸ್: ಶೇಯ್ ಹೋಪ್ (ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮಾಯೆರ್, ರೊವ್ಮನ್ ಪೊವೆಲ್, ಶೆರ್ಫೆನ್ ಋದರ್‌ಫೋರ್ಡ್, ಕ್ವಿಂಟನ್ ಸ್ಯಾಪ್ಸನ್, ಕೀಮೋ ಪಾಲ್, ರಾಸ್ಟನ್ ಚೇಸ್, ಶಮರ್ ಸ್ಪ್ರಿಂಗರ್, ಶಮರ್ ಜೋಸೆಫ್, ಗುಡಕೇಶ್ ಮೋಟಿ