ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NAM: ಸಂಜು ಸ್ಯಾಮ್ಸನ್‌ ಇನ್‌? ನಮೀಬಿಯಾ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ಯುಎಸ್‌ಎ ವಿರುದ್ಧ 28 ರನ್‌ಗಳ ಗೆಲುವು ಪಡೆದಿರುವ ಭಾರತ ತಂಡ, ಫೆಬ್ರವರಿ 12 ರಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ದೆಹಲಿಯ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದ ಹಾಗೆ ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ xi ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.

ನಮಿಬೀಯಾ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ.

ನವದೆಹಲಿ: ಯುಎಸ್‌ಎ ವಿರುದ್ಧ 28 ರನ್‌ಗಳ ಗೆಲುವು ಪಡೆದು 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ (India) ತಂಡ, ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ ತನ್ನ ಎರಡನೇ ಪಂದ್ಯವನ್ನು (IND vs NAM) ಗೆದ್ದು ಮುಂದುವರಿಯಲು ಎದುರು ನೋಡುತ್ತಿದೆ. ಈ ಪಂದ್ಯ ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಎದುರಾಳಿ ನಮೀಬಿಯಾ ತಂಡ ತನ್ನ ಮೊದಲನೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಇದೀಗ ಬಲಿಷ್ಠ ಭಾರತದ ಎದುರು ತನ್ನ ಮೊದಲನೇ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಲಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫೆಬ್ರವರಿ 7 ರಂದು ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, ತನ್ನ ಮೊದಲನೇ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಕಾದಾಟ ನಡೆಸಿತ್ತು. ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ (25ಕ್ಕೆ 4) ಅವರ ಮಾರಕ ದಾಳಿಗೆ ನಲುಗಿದ್ದ ಭಾರತ ತಂಡ, 77 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಈ ವೇಳೆ ಸೂರ್ಯಕುಮಾರ್‌ ಯಾದವ್‌ ಅವರು 49 ಎಸೆತಗಳಲ್ಲಿ 84 ರನ್‌ಗಳನ್ನು ಕಲೆ ಹಾಕುವ ಮೂಲಕ ಅಪಾಯದಲ್ಲಿದ್ದ ಭಾರತ ತಂಡವನ್ನು ಕಾಪಾಡಿದ್ದರು. ಆ ಮೂಲಕ ಟೀಮ್‌ ಇಂಡಿಯಾ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 161 ರನ್‌ಗಳನ್ನು ಕಲೆ ಹಾಕಿದರು.

T20 world Cup: 175 ರನ್‌ ಜೊತೆಯಾಟದ ಮೂಲಕ ದೊಡ್ಡ ದಾಖಲೆ ಬರೆದ ಟಿಮ್‌ ಸೀಫರ್ಟ್‌-ಫಿನ್‌ ಆಲೆನ್!

ನಂತರ ಗುರಿಯನ್ನು ಹಿಂಬಾಲಿಸಿದ ಯುಎಸ್‌ಎ ತಂಡಕ್ಕೆ ಮೊಹಮ್ಮದ್‌ ಸಿರಾಜ್‌ ತಮ್ಮ ಓಪನಿಂಗ್‌ ಸ್ಪೆಲ್‌ನಲ್ಲಿ ಎರಡು ವಿಕೆಟ್‌ ಕಿತ್ತು ಆಘಾತ ನೀಡಿದ್ದರು. ಆ ಮೂಲಕ ಯುಎಸ್‌ಎ 13 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸಂಜಯ್‌ ಕೃಷ್ಣಮೂರ್ತಿ (37 ರನ್‌) ಹಾಗೂ ಶುಭಮ್‌ ರಂಜನೆ (37) ಅವರು ಸ್ವಲ್ಪ ಪ್ರತಿರೋಧ ತೋರಿದ್ದರು. ಆದರೆ, ಅಕ್ಷರ್‌ ಪಟೇಲ್‌ ಹಾಗೂ ವರುಣ್‌ ಚಕ್ರವರ್ತಿ ತಮ್ಮ ಬಿಗಿಯಾದ ಹಿಡಿತವನ್ನುಕಾಯ್ದುಕೊಂಡರು. ಆ ಮೂಲಕ ಯುಎಸ್‌ಎ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 132 ರನ್‌ಗಳಿಗೆ ಸೀಮಿತವಾಯಿತು.

ಮೊದಲನೇ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಕುಸಿದಿತ್ತು, ಇದನ್ನು ಸರಿಪಡಿಸಿಕೊಳ್ಳಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಇದೀಗ ತಂಡದಲ್ಲಿ 13 ಮಂದಿ ಆಯ್ಕೆಗೆ ಲಭ್ಯರಿದ್ದಾರೆ. ಹರ್ಷಿತ್‌ ರಾಣಾ ಅವರು ಗಾಯದಿಂದ ಟೂರ್ನಿಯಿಂದ ಹೊರಬಿದ್ದ ಬಳಿಕ ಅವರ ಸ್ಥಾನಕ್ಕೆ ಮೊಹಮ್ಮದ್‌ ಸಿರಾಜ್‌ ಬಂದಿದ್ದು, ಮೊದಲನೇ ಪಂದ್ಯದಲ್ಲಿಯೇ ಗಮನ ಸೆಳೆದಿದ್ದಾರೆ. ಅನಾರೋಗ್ಯ ಹಾಗೂ ಗಾಯದ ಕಾರಣ ಜಸ್‌ಪ್ರೀತ್‌ ಬುಮ್ರಾ ಮತ್ತು ವಾಷಿಂಗ್ಟನ್‌ ಸುಂದರ್‌ ಆಯ್ಕೆಗೆ ಅಲಭ್ಯರಾಗಲಿದ್ದಾರೆ.

NZ vs UAE: ಟಿಮ್‌ ಸೀಫರ್ಟ್‌-ಫಿನ್‌ ಆಲೆನ್‌ ಅಬ್ಬರ, ಯುಎಇ ಎದುರು ನ್ಯೂಜಿಲೆಂಡ್‌ಗೆ ದಾಖಲೆಯ ಜಯ!

ಅಭಿಷೇಕ್‌ ಶರ್ಮಾ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಹಾಗೂ ಅವರು ಎರಡನೇ ಪಂದ್ಯಕ್ಕೆ ಅವರು ಅನುಮಾನ. ವಾಷಿಂಗ್ಟನ್‌ ಸುಂದರ್‌ ತಂಡಕ್ಕೆ ಮರಳಿದ್ದು, ಸಹಾಯಕ ಕೋಚ್‌ ರಯಾನ್‌ ಡಿ ಡಿಶಾಟ್‌ ಅವರ ಮಾರ್ಗದರ್ಶನದಲ್ಲಿ ಬೌಲಿಂಗ್‌ ಅಭ್ಯಾಸ ನಡೆಸಿದ್ದರು. ಮಂಗಳವಾರ ಅಭ್ಯಾಸದಲ್ಲಿ ಅಭಿಷೇಕ್‌ ಮತ್ತು ಬುಮ್ರಾ ಭಾಗವಹಿಸಿರಲಿಲ್ಲ. ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿಯನ್ನು ನೀಡಿ, ಉತ್ತಮ ಲಯದಲ್ಲಿರುವ ಸಿರಾಜ್‌ ಹಾಗೂ ಅರ್ಷದೀಪ್‌ ಅವರನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಮುಂದುವರಿಸಬಹುದು.

ಅಗತ್ಯಬಿದ್ದರೆ ಅಭಿಷೇಕ್‌ ಶರ್ಮಾ ಅವರ ಬದಲು ಸಂಜು ಸ್ಯಾಮ್ಸನ್‌ಗೆ ಇಶಾನ್‌ ಕಿಶನ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಬಹುದು. ವಾಷಿಂಗ್ಟನ್‌ ಸುಂದರ್‌ ಮರಳುವಿಕೆಯಿಂದ ರಿಂಕು ಸಿಂಗ್‌ ಮತ್ತು ಶಿವಂ ದುಬೆ ಅವರ ಮೇಲೆ ಒತ್ತಡ ಬೀಳಬಹುದು. ಆದರೆ, ಈ ಇಬ್ಬರು ಆಟಗಾರರನ್ನು ಇನ್ನೊಂದು ಪಂದ್ಯದಲ್ಲಿ ಮುಂದುವರಿಸಬಹುದು.

IND vs NAM: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆಯಬಲ್ಲ ಮೂವರು ಆಟಗಾರರು!

ನಮಿಬೀಯಾ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI

1.ಸಂಜು ಸ್ಯಾಮ್ಸನ್‌/ ಅಭಿಷೇಕ್‌ ಶರ್ಮಾ

2.ಇಶಾನ್‌ ಕಿಶನ್‌

3.ತಿಲಕ್‌ ವರ್ಮಾ

4.ಸೂರ್ಯಕುಮಾರ್‌ ಯಾದವ್‌ (ನಾಯಕ)

5.ಅಕ್ಷರ್‌ ಪಟೇಲ್‌, (ಉಪ ನಾಯಕ)

6.ರಿಂಕು ಸಿಂಗ್‌

7.ಶಿವಂ ದುಬೆ

8.ಹಾರ್ದಿಕ್‌ ಪಾಂಡ್ಯ

9.ಅರ್ಷದೀಪ್‌ ಸಿಂಗ್‌

10.ವರುಣ್‌ ಚಕ್ರವರ್ತಿ

11.ಮೊಹಮ್ಮದ್‌ ಸಿರಾಜ್‌